‘ಅಶ್ವಿನ್​ ಒಬ್ಬ ಚಾಣಾಕ್ಷ ಬೌಲರ್’- ಹಾಡಿ ಹೊಗಳಿದ ಕೊಹ್ಲಿ ಮತ್ತೇನಂದ್ರು?


ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ, ಟೂರ್ನಿಯಲ್ಲಿ ಸೋಲಿನ ಸರಪಳಿಯನ್ನ ಬ್ರೇಕ್ ಮಾಡಿದೆ. ಅಫ್ಘಾನಿಸ್ತಾನ ವಿರುದ್ಧ ಪ್ರದರ್ಶನದಿಂದ ತಂಡದ ಆಟಗಾರರಲ್ಲಿ ಹೊಸ ಹುಮ್ಮಸ್ಸು ನೀಡಿದೆ. ಇದರ ಜೊತೆಗೆ ಸೆಮೀಸ್ ಆಸೆ ಜೀವಂತವಾಗಿರಿಸಿದೆ.

ಇನ್ನೂ ಅಫ್ಘಾನ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್, ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮವಾಗಿತ್ತು. ಅನುಭವಿ ಆರ್.ಅಶ್ವಿನ್ ಅವರ ಕಮ್‌ಬ್ಯಾಕ್ ತಂಡಕ್ಕೆ ನಿಜಕ್ಕೂ ಸಕಾರಾತ್ಮಕ ಬಲ ನೀಡಿದೆ ಎಂದರು

ಅಶ್ವಿನ್ ಕಮ್‌ಬ್ಯಾಕ್ ನಿಜಕ್ಕೂ ಅದ್ಭುತವಾಗಿತ್ತು. ಇದು ತಂಡಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ. ಅವರು ಬೌಲಿಂಗ್‌ನಲ್ಲಿ ತಮ್ಮ ನಿಯಂತ್ರಣವನ್ನು ಐಪಿಎಲ್‌ನಲ್ಲಿಯೂ ತೋರಿಸಿದ್ದರು. ಆತನೋರ್ವ ವಿಕೆಟ್ ಟೇಕರ್ ಹಾಗೂ ಚಾಣಾಕ್ಷ ಬೌಲರ್ ಆಗಿದ್ದಾರೆ ಎಂದು ವಿರಾಟ್ ಕೊಹ್ಲಿ ಆರ್ ಅಶ್ವಿನ್ ಬಗ್ಗೆ ಹೊಗಳಿಕೆಯ ಮಾತುಗನ್ನಾಡಿದ್ದಾರೆ.

ಇದನ್ನೂ ಓದಿ: ‘ದ್ರಾವಿಡ್​ ಜತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’- ರೋಹಿತ್ ಗುಣಗಾನ​​

News First Live Kannada


Leave a Reply

Your email address will not be published. Required fields are marked *