ಈ ಸ್ಪಿನ್​ ಜೋಡಿ ತಂಡದಲ್ಲಿ ಒಟ್ಟಿಗೆ ಆಡಿದ್ರೆ, ಟೀಮ್​ ಇಂಡಿಯಾಗೆ ಶುಭಗಳಿಗೆಯಂತೆ! ತಂಡದಲ್ಲಿ ಒಟ್ಟಿಗೆ ಆಡಿದ ಎಲ್ಲಾ ಟೆಸ್ಟ್​​​​ಗಳಲ್ಲಿ ಆಲ್​ಮೋಸ್ಟ್​​​ ಟೀಮ್​ ಇಂಡಿಯಾ, ಗೆದ್ದಿದೆಯಂತೆ. ಹಾಗಾಗಿ ಇವರನ್ನ ಲಕ್ಕಿ ಪ್ಲೇಯರ್ಸ್​ ಅಂತ ಕೂಡ ಕರೀತಾರೆ. ಹಾಗಾದರೆ ಆ ಗೋಲ್ಡನ್​​ ಲೆಗ್​​​​ ಜೋಡಿ ಯಾವುದು? ಇಷ್ಟಕ್ಕೂ ಹೇಗಿದೆ ಅವರು ಒಟ್ಟಿಗೆ ಆಡಿದ ಟ್ರ್ಯಾಕ್​ ರೆಕಾರ್ಡ್​​..?

ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​​​ ಫೈನಲ್​​​ ಫೈಟ್​​ಗೆ ಅಡ್ಡಿಪಡಿಸಿದ ವರುಣ, ಮೊದಲ ದಿನವನ್ನ ನುಂಗಿಹಾಕ್ತು. ಇದು ಉಭಯ ತಂಡಗಳಿಗೂ ನಿರಾಸೆ ಮೂಡಿಸಿದೆ. ಇಂಗ್ಲೆಂಡ್​ ಕಂಡೀಷನ್ಸ್​ ಮತ್ತು ಪಿಚ್​​​ಗಳಲ್ಲಿ ವೇಗಿಗಳೇ ಎಕ್ಸ್​​ಫ್ಯಾಕ್ಟರ್​​ ಅನ್ನೋದು ಗೊತ್ತಿರುವ ವಿಚಾರ​​​. ಆದರೆ ನ್ಯೂಜಿಲೆಂಡ್​​ 15 ಸದಸ್ಯರ ಪೈಕಿ ಒಬ್ಬರನ್ನಷ್ಟೇ ಸ್ಪಿನ್​ ವಿಭಾಗದಲ್ಲಿ ಆಡಿಸಿದ್ರೆ, ಇತ್ತ ಟೀಮ್​ ಇಂಡಿಯಾ ಇಬ್ಬರು ಸ್ಪಿನ್ನರ್​​ಗಳನ್ನ ಕಣಕ್ಕಿಳಿಸಿ ಅಚ್ಚರಿ ಮೂಡಿಸಿದೆ. ಯಾಕಂದರೆ ಈ ಇಬ್ಬರು ಒಟ್ಟಿಗೆ ಆಡಿದ ಎಲ್ಲಾ ಪಂದ್ಯಗಳು ಸಕ್ಸಸ್​ ಕಂಡಿರೋದೆ ಅದಕ್ಕೆ ಕಾರಣ.

ವಿರಾಟ್, ರೋಹಿತ್​, ಪೂಜಾರ, ರಹಾನೆಯಂತೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಕೂಡ ಟೀಮ್​ ಇಂಡಿಯಾದ ಎಕ್ಸ್​​ಫ್ಯಾಕ್ಟರ್​​ ಪ್ಲೇಯರ್ಸ್​​​​​​. ತಮ್ಮ ಅಲ್ಟಿಮೇಟ್​ ಸ್ಪಿನ್​ ಆ್ಯಂಡ್​ ಬ್ಯಾಟಿಂಗ್​​ ಮೂಲಕವೇ ಗಮನ ಸೆಳೆದ ಈ ಜೋಡಿ, ಗೇಮ್​ ಚೇಂಜರ್ಸ್​ ಕೂಡ ಹೌದು. ಈ ಸ್ಪಿನ್​​ ಜೋಡಿ​ ಸ್ಪಿನ್​ ಆ್ಯಂಡ್​ ಬ್ಯಾಟಿಂಗ್​​​ನಲ್ಲಿ ಕಮಾಲ್ ಮಾಡಿದ್ರೆ ಪ್ರತಿಸ್ಫರ್ಧಿ ತಬ್ಬಿಬ್ಬು ಆಗೋದು ಪಕ್ಕಾ.! ಆದರೆ ಇಂಗ್ಲೆಂಡ್​ ಪಿಚ್​​​ಗಳಲ್ಲಿ ಸ್ವಿಂಗ್​​​ ಆ್ಯಂಡ್​ ಬೌನ್ಸಿ ಟ್ರ್ಯಾಕ್​​ನಲ್ಲಿ ವೇಗಿಗಳನ್ನೇ ಕಣಕ್ಕಿಳಿಸಬೇಕಾಗಿದ್ದ ಮ್ಯಾನೇಜ್​​ಮೆಂಟ್​​, ಈ ಯಶಸ್ವಿ ಜೋಡಿಗೆ ಮಣೆ ಹಾಕಿದೆ.

ಸ್ಪಿನ್​ ಡಿಪಾರ್ಟ್​ಮೆಂಟ್​​​ನಲ್ಲಿ ಪರ್ಫೆಕ್ಟ್​ ಕಾಂಬಿನೇಷನ್​​ ಆಗಿರುವ ಈ ಜೋಡಿ, ಒಟ್ಟಿಗೆ ಆಡ್ತಿದ್ರೆ, ತಂಡಕ್ಕೆ ಆನೆಬಲ ಬಂದಂತೆ. ಜೊತೆಗೆ ಇಬ್ಬರು ಒಟ್ಟಿಗೆ ಟೀಮ್​ನಲ್ಲಿ ಆಡಿದ್ರೆ, ಹಂಡ್ರೆಡ್​​ ಪರ್ಸೆಂಟ್​​ ಭಾರತ ಗೆಲುವು ಸಾಧಿಸುತ್ತದಂತೆ. ಆದ್ರಿಂದಲೇ ಇವರನ್ನ ಲಕ್ಕಿ ಪ್ಲೇಯರ್ಸ್​ ಅಂತಾನು ಕರೀತಿದ್ದಾರೆ. ಹಾಗೆಯೇ ಅವರದ್ದು ಗೋಲ್ಡನ್​ ಲೆಗ್​ ಕೂಡ ಅಂತಾರೆ. ಇದೇ ಮಾತನ್ನ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಅನ್ಶುಮಾನ್​ ಗಾಯಕ್ವಾಡ್​ ಕೂಡ ಹೇಳಿದ್ದಾರೆ. ಇಬ್ಬರು ತಂಡದಲ್ಲಿದ್ರೆ ಭಾರತದ ಗೆಲುವಿನ ಭರವಸೆ ಹೆಚ್ಚುತೆ ಅಂತ ಹೇಳಿದ್ದಾರೆ.

‘ಜಡೇಜಾ-ಅಶ್ವಿನ್​ರಿಂದ ತಂಡಕ್ಕೆ ಲಾಭ

‘ಟ್ರಂಪ್​ ಕಾರ್ಡ್​​ ಪ್ಲೇಯರ್ಸ್​ ಆಗಿರುವ ಅಶ್ವಿನ್​-ಜಡೇಜಾ ಅತ್ಯಂತ ಅಪಾಯಕಾರಿ. ಒಟ್ಟಿಗೆ ಆಡಿದರೆ ಟೀಮ್​ ಇಂಡಿಯಾಕ್ಕೆ ಲಾಭವೇ ಹೆಚ್ಚು. ಜೊತೆಗೆ ಟೀಮ್​ಗೆ ಮೂರು ಪಟ್ಟು ಪ್ರಯೋಜನ ಕೂಡ ಇದೆ. ಏಕೆಂದರೆ ಬ್ಯಾಟಿಂಗ್​-ಬೌಲಿಂಗ್​​ನಲ್ಲಿ ಬೆಸ್ಟ್​ ಪರ್ಫಾಮೆನ್ಸ್​ ನೀಡ್ತಾರೆ. ಹಾಗೆಯೇ ಫೀಲ್ಡಿಂಗ್​ ಕೂಡ ಅದ್ಭುತವಾಗಿ ಮಾಡ್ತಾರೆ. ಇಬ್ಬರೂ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಕಾಣಿಸಿಕೊಂಡ್ರೆ, ತಂಡದ ಗೆಲುವಿನ ಭರವಸೆ ಕೂಡ ಹೆಚ್ಚುತ್ತೆ’

-ಅನ್ಶುಮಾನ್​ ಗಾಯಕ್ವಾಡ್, ಮಾಜಿ ಕ್ರಿಕೆಟಿಗ

ಇಷ್ಟಕ್ಕೂ ಯಾಕಾಗಿ ಆ್ಯಷ್ ​- ಜಡ್ಡು ಟೀಮ್​ ಇಂಡಿಯಾದ ಲಕ್ಕಿ ಪ್ಲೇಯರ್ಸ್​​ ಅನ್ನೋ ಪ್ರಶ್ನೆ ನಿಮಗೆ ಕಾಡ್ತಿದೆಯಲ್ಲ..!! ಅದಕ್ಕೆ ಉತ್ತರ, ಟೆಸ್ಟ್​​ ಕ್ರಿಕೆಟ್​​ನಲ್ಲಿ ಈ ಜೋಡಿಯ ಅಂಕಿ ಅಂಶಗಳೇ ಹೇಳ್ತಿವೆ ನೋಡಿ.!

ಟೆಸ್ಟ್​​​ನಲ್ಲಿ ಜಡ್ಡು-ಆ್ಯಷ್​​ ಒಟ್ಟಿಗೆ ಆಡಿದ ಸಾಧನೆ..!
ಟೆಸ್ಟ್​ ಕ್ರಿಕೆಟ್​​ನಲ್ಲಿ ಅಶ್ವಿನ್​​-ಜಡೇಜಾ ಒಟ್ಟಿಗೆ 39 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 30 ಪಂದ್ಯಗಳು ಗೆಲುವು ಸಾಧಿಸಿದ್ರೆ, ಕೇವಲ 2 ಪಂದ್ಯಗಳು ಸೋಲು ಕಂಡಿವೆ. ಹಾಗೆಯೇ 7 ಟೆಸ್ಟ್​​ಗಳು ಡ್ರಾನಲ್ಲಿ ಅಂತ್ಯ ಕಂಡಿವೆ. ಈ ಜೋಡಿಯ ಒಟ್ಟಿಗೆ ಆಡಿರುವ ಗೆಲುವಿನ ಸರಾಸರಿ 76.92 ರಷ್ಟಿದೆ.

ಚಾಂಪಿಯನ್​​ಶಿಪ್​​​ನಲ್ಲೂ ಮಾಡುತ್ತಾ ಈ ಜೋಡಿ ಕಮಾಲ್​​​?
ಆ್ಯಷ್​ – ಜಡ್ಡು ಜೋಡಿ ಒಟ್ಟಾಗಿ ಆಡಿರೋ ಟೆಸ್ಟ್​​ಗಳಲ್ಲಿ ಹೆಚ್ಚು ಗೆಲುವಿನ ನಗೆ ಬೀರಿರುವ ಟೀಮ್​ ಇಂಡಿಯಾ, ವರ್ಲ್ಡ್​ ಟೆಸ್ಟ್​ ಚಾಂಪಿಯನ್​​​​ಶಿಪ್​​ ಫೈನಲ್​​​​ನಲ್ಲೂ ಗೆಲ್ಲುತ್ತೆ ಅನ್ನೋ ಎಕ್ಸ್​ಪೆಕ್ಟೇಷನ್​ ಹೆಚ್ಚಾಗಿದೆ. ಜೊತೆಗೆ ಈ ಜೋಡಿ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಕಾಣಿಸಿಕೊಂಡಿದ್ದು ನೋಡಿ, ಫೈನಲ್​​ ಮ್ಯಾಚ್​ ನಮ್ದೇ ಅಂತ ಫ್ಯಾನ್ಸ್​ ಅಂತಿದ್ದಾರೆ. ಆದರೀಗ ಮಳೆ ಬಂದಿದ್ದು, ಫ್ಯಾನ್ಸ್​ಗೆ​​ ಫುಲ್​​ ಡಿಸಪಾಯಿಂಟ್ ಆಗಿದೆ.

ಅಶ್ವಿನ್​-ಜಡೇಜಾ ಜೊತೆಗೆ ಆಡಿದ್ರೆ ಯಾಕೆ ಗೊತ್ತಾ ಲಾಭ..?
ಸಕ್ಸಸ್​ ಕೀ ಎನಿಸಿಕೊಂಡಿರೋ ಜಡೇಜಾ-ಅಶ್ವಿನ್​​, ಟೀಮ್​ ಇಂಡಿಯಾದ ಟ್ರಂಪ್​ ಕಾರ್ಡ್​​ ಪ್ಲೇಯರ್ಸ್​.!! ಈ ಇಬ್ಬರ ಬೌಲಿಂಗ್​​​-ಬ್ಯಾಟಿಂಗ್​​ನಲ್ಲಿ ರೆಡ್​ ಹಾಟ್​ ಫಾರ್ಮ್​ ಕೂಡ ತಂಡಕ್ಕೆ ಪ್ಲಸ್​ ಪಾಯಿಂಟ್​. ತಂಡದ ತ್ರೀಡಿ ಪ್ಲೇಯರ್ಸ್​​​​ ಆಗಿರುವ ಇಬ್ಬರು, ಬ್ಯಾಟಿಂಗ್​-ಬೌಲಿಂಗ್​​ ಜೊತೆಗೆ ಫೀಲ್ಡಿಂಗ್​​​ನಲ್ಲೂ ಉತ್ತಮ ಪ್ರದರ್ಶನ ತೋರುತ್ತಾರೆ. ಅದರಲ್ಲೂ ಜಡೇಜಾ ಅಂತೂ ಶಾರ್ಪ್​​ಶೂಟರ್ಸ್​. ಹಾಗಾಗಿ ಮೂರು ವಿಭಾಗಗಳಲ್ಲೂ ಮಿಂಚಬಲ್ಲ ಈ ಆಟಗಾರರು ತಂಡದಲ್ಲಿ ಕಾಣಿಸಿಕೊಂಡ್ರೆ, ಟೀಮ್​​​ಇಂಡಿಯಾಕ್ಕೆ ಹೆಚ್ಚು ಲಾಭ.

ಒಟ್ನಲ್ಲಿ ಈ ಸಕ್ಸಸ್​​​ಫುಲ್​ ಜೋಡಿಯನ್ನ ಟೀಮ್​​​ ಇಂಡಿಯಾ ಆಡ್ಸಿರೋದ್ಕೆ ಫ್ಯಾನ್ಸ್​ ಏನೋ ಫುಲ್​ ಖುಷ್​​ ಆಗಿದ್ದಾರೆ. ಆದರೆ ಕಿವೀಸ್​​ ರೂಪಿಸಿಕೊಂಡಿರುವ ಪ್ರತಿತಂತ್ರಗಳನ್ನ ಈ ಸಕ್ಸಸ್​ಫುಲ್​ ಜೋಡಿ ಹೇಗೆ ಮೆಟ್ಟಿ ನಿಲ್ಲುತ್ತೆ ಅನ್ನೋದೇ ಸದ್ಯದ ಕುತೂಹಲ.

The post ಅಶ್ವಿನ್​-ಜಡೇಜಾ ಒಟ್ಟಿಗೆ ಆಡಿದ್ರೆ ಆಗುತ್ತೆ WTCನಲ್ಲಿ ಕಮಾಲ್.. ಯಾಕೆ ಗೊತ್ತಾ? appeared first on News First Kannada.

Source: newsfirstlive.com

Source link