ರವಿಚಂದ್ರನ್​ ಅಶ್ವಿನ್.. ಟೀಮ್​ ಇಂಡಿಯಾ ಟೆಸ್ಟ್​ ತಂಡದ ಕೀ ಪ್ಲೇಯರ್​​. ಟೆಸ್ಟ್​ ತಂಡದ ಅವಿಭಾಜ್ಯ ಅಂಗವಾಗಿರುವ ಅಶ್ವಿನ್​, ಅದೆಷ್ಟೋ ಪಂದ್ಯಗಳ ಗೆಲುವಿನ ರೂವಾರಿ. ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ..?

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಅರ್ಧದಾರಿ ಕ್ರಮಿಸಿದೆ. 3 ದಿನಗಳಾಟ ಮುಗಿದಿದ್ದು, ಎದುರಾಳಿ ಕಿವೀಸ್​​​ ಎದುರು ಟೀಮ್​ ಇಂಡಿಯಾ ಹೋರಾಟ ನಡೆಸ್ತಿದೆ. ಬ್ಯಾಟಿಂಗ್​ನಲ್ಲಿ ಸಾಧಾರಣ ಮೊತ್ತ ಕಲೆ ಹಾಕಿರುವ ಭಾರತ, ಗೆಲುವಿಗಾಗಿ ಈಗ ಬೌಲಿಂಗ್​ ವಿಭಾಗದ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಅನುಭವಿ ಆರ್​.ಅಶ್ವಿನ್​ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಅಶ್ವಿನ್​ ಮೇಲೆ ಟೀಮ್​ ಇಂಡಿಯಾದ ಭರವಸೆ
ಸೌತ್​ಹ್ಯಾಂಪ್ಟನ್​ ಮೈದಾನದಲ್ಲಿ ವೇಗಿಗಳು ಮೆರೆದಾಡ್ತಿದ್ರೂ ಸ್ಪಿನ್ನರ್​ ಅಶ್ವಿನ್​ ಮೇಲೆ ಭಾರತದ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಪಿಚ್​ ಕ್ಯುರೇಟರ್​​ 3 ದಿನಗಳ ಬಳಿಕ ಸ್ಪಿನ್​ಗೆ ಪಿಚ್​ ಸಹಾಯಕವಾಗಲಿದೆ ಅನ್ನೋದು ಮಾತ್ರ ಕಾರಣವಲ್ಲ. ರವಿಚಂದ್ರನ್​ ಅಶ್ವಿನ್​ರಲ್ಲಿರೋ ಫೈಟಿಂಗ್​ ಸ್ಪಿರಿಟ್​​​​ ಹಾಗೂ ಪ್ರಯೋಗಗಳನ್ನ ಕರಗತ ಮಾಡಿಕೊಳ್ಳುವ ಕಲೆ, ಮ್ಯಾನೇಜ್​ಮೆಂಟ್​ ಭರವಸೆಯನ್ನ ದುಪ್ಪಟ್ಟಾಗುವಂತೆ ಮಾಡಿದೆ.

​ಸದಾ ಹೊಸ ಪ್ರಯೋಗಗಳಿಗೆ ಮುಂದಾಗುವ ಆ್ಯಷ್​​, ಕಂಫರ್ಟ್​​ ಝೋನ್​ನಲ್ಲಿ ಇರದೆ, ತನ್ನ ಕೌಶಲ್ಯಗಳನ್ನ ಹೆಚ್ಚಿಸಿಕೊಳ್ಳುವ ಯತ್ನದಲ್ಲಿ ಅಶ್ವಿನ್​ ಇರ್ತಾರೆ. ಇದೇ ಆತನನ್ನ ವಿಶೇಷ ಆಟಗಾರನನ್ನಾಗಿ ಮಾಡಿರೋದು. ಇವು ವಿಶ್ವಟೆಸ್ಟ್​​​ ಚಾಂಪಿಯನ್​ಶಿಪ್​ ಫೈನಲ್​ಗೂ ಮುನ್ನ ಟೀಮ್​ ಇಂಡಿಯಾ ಬೌಲಿಂಗ್​ ಕೋಚ್​​ ಭರತ್​ ಅರುಣ್​ ಹೇಳಿದ ಭರವಸೆಯ ಮಾತುಗಳು. ಕೇವಲ ಭರತ್​​ ಅರುಣ್​ ಮಾತು ಮಾತ್ರವಲ್ಲ. ಇಡೀ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಅಶ್ವಿನ್​ ಮೇಲೆ ಅಷ್ಟೇ ಭರವಸೆಯನ್ನಿಟ್ಟಿದೆ.

ಆರಂಭಿಕ ದಿನಗಳಲ್ಲಿ ಕೇವಲ ಸ್ಪಿನ್ನರ್​​ ಆಗಿದ್ದ ಅಶ್ವಿನ್​, ಈಗ ಆಲ್​​ರೌಂಡರ್​ ಆಗಿ ಬದಲಾಗಿದ್ದಾರೆ. ಬಾಲ್​ ಹಾಗೂ ಬ್ಯಾಟ್​​ ಎರಡರಲ್ಲೂ ಪರಾಕ್ರಮ ಮೆರೆಯೋ ಸಾಮರ್ಥವಿರೋದು ಕೂಡ ಅಶ್ವಿನ್​ರನ್ನ ಸ್ಪೆಷಲ್​ ಪ್ಲೇಯರ್​​ನನ್ನಾಗಿ ಮಾಡಿದೆ. ಟೆಸ್ಟ್​ ಕ್ರಿಕೆಟ್​​ನಲ್ಲಿ 5 ಶತಕ, 11 ಅರ್ಧಶತಕ ಸಹಿತ 2,678 ರನ್​ಗಳು, 409 ವಿಕೆಟ್​​ಗಳಂದ್ರೆ ಅದು ಸಾಮಾನ್ಯವಲ್ಲ. ಹೀಗಾಗಿಯೇ ವಿಶ್ವ ಕ್ರಿಕೆಟ್​​ ಲೋಕವೇ ಅಶ್ವಿನ್​ರನ್ನ ಶ್ರೇಷ್ಠ ಪ್ಲೇಯರ್​​ ಎಂದು ಕರೆಯೋದು. ಆದ್ರೂ ಟೀಕೆಗಳು ಅಶ್ವಿನ್​ರನ್ನೂ ಬಿಟ್ಟಿಲ್ಲ.

ಟೀಕೆಗಳಿಗೆ ಪರೋಕ್ಷ ತಿರುಗೇಟು ನೀಡಿದ ಅಶ್ವಿನ್​..!
ಯಶಸ್ಸಿಗೆ ಇದೇ ಕಾರಣ ಎಂದ ಆಫ್​​ ಸ್ಪಿನ್ನರ್​​..!

ಇತ್ತಿಚೇಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​​ ಅಶ್ವಿನ್​ ಗ್ರೇಟೆಸ್ಟ್​ ಕ್ರಿಕೆಟರ್​​ ಅಲ್ಲ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ರು. ಇದು ಭಾರೀ ಚರ್ಚೆಗೂ ಕಾರಣವಾಗಿತ್ತು. ಇದೀಗ ಈ ಬಗ್ಗೆ ಪರೋಕ್ಷವಾಗಿ ಸ್ವತಃ ಅಶ್ವಿನ್​ ತುಟಿ ಬಿಚ್ಚಿದ್ದಾರೆ. ಈ ಬಗ್ಗೆ ಮಾತಾಡಿರುವ ಅಶ್ವಿನ್, ನನಗೆ ನಾನು ಏನು ಮಾಡುತ್ತೇನೆ ಎಂಬುದರ ಮೇಲೆ ನಂಬಿಕೆಯಿದೆ. ನಾನು ವಿವಾದಗಳನ್ನ ಹೆಚ್ಚು ಎಂಜಾಯ್​ ಮಾಡ್ತೀನಿ. ಅದು ನನ್ನನ್ನ ಫೈಟ್​​ಬ್ಯಾಕ್​ ಮಾಡುವಂತೆ ಪ್ರೇರೆಪಿಸುತ್ತೆ. ಹಾಗಿಯೇ ನಾನಿಲ್ಲಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.


ಯಾರನ್ನೋ ಮೆಚ್ಚಿಸಲಿಕ್ಕೆ ನಾನು ಆಡಲ್ಲ. ನನ್ನ ಜೀವನಕ್ಕೆ ಈ ಕ್ರೀಡೆ ಒಂದು ಅರ್ಥ ಕೊಟ್ಟಿದೆ. ನನಗೆ ಟೀಕಾಕಾರರಿಗೆ ಉತ್ತರ ಕೊಡಲು ಸಮಯವೂ ಇಲ್ಲ ಎಂದು ಅಶ್ವಿನ್​ ಖಡಕ್​ ಮಾತುಗಳನ್ನಾಡಿದ್ದಾರೆ. ಜೊತೆಗೆ ನನ್ನ ಯಶಸ್ಸಿಗೆ ಕಾರಣವಾಗಿರೋದು ಕೂಡ ಇದೇ ಅಂಶ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಟೀಕಾಕಾರರಿಗೆ ಪರೋಕ್ಷವಾಗಿಯೇ ತಿರುಗೇಟು ನೀಡಿರುವ ಅಶ್ವಿನ್​, ತನ್ನ ಯಶ್ಸಿಸಿನ ಸಿಕ್ರೇಟ್​​ ಅನ್ನ ಬಿಚ್ಚಿಟ್ಟಿದ್ದಾರೆ. ಇದೀಗ ಚಾಂಪಿಯನ್​​ ಶಿಪ್​ ಫೈನಲ್​ನಲ್ಲಿ ತಂಡವನ್ನೂ ಯಶಸ್ಸಿನೆಡೆಗೆ ಕೊಂಡೊಯ್ಯಲಿ ಅನ್ನೋದೇ ಅಭಿಮಾನಿಗಳ ಆಶಯ.

The post ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ appeared first on News First Kannada.

Source: newsfirstlive.com

Source link