ವಿಶ್ವ ಕ್ರಿಕೆಟ್​ಗೆ ದಿಗ್ಗಜ ಸ್ಪಿನ್ನರ್​ಗಳನ್ನ ನೀಡಿದ ಕೀರ್ತಿ, ಟೀಮ್ ಇಂಡಿಯಾಗೆ ಸೇರುತ್ತೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್​ರಂತಹ ದಿಗ್ಗಜರನ್ನ ನೀಡಿರುವ ಟೀಮ್ ಇಂಡಿಯಾ, ಸದ್ಯ ಮಾಡ್ರನ್ ಡೇ ಕ್ರಿಕೆಟ್​​ನಲ್ಲೂ ಅಶ್ವಿನ್​ರಂಥ ಶ್ರೇಷ್ಠ ಸ್ಪಿನ್ನರ್​​​​ನನ್ನ ಕೊಡುಗೆಯಾಗಿ ನೀಡಿದೆ. ಆದ್ರೆ ಈ ಮೂವರಲ್ಲಿ ಕನ್ನಡಿಗ ಅನಿಲ್​ ಕುಂಬ್ಳೆ ಅಗ್ರ ಸ್ಥಾನಿಯಾಗಿ ಕಾಣಿಸಿಕೊಂಡರೆ, ನಂತರದ ಪಂಕ್ತಿಗೆ ಟರ್ಬನೇಟರ್​ ಹರ್ಭಜನ್​ ಸಿಂಗ್ ಹಾಗೂ ಆರ್​.ಅಶ್ವಿನ್.. ಇಬ್ಬರಲ್ಲಿ ಯಾರು ಟೆಸ್ಟ್​​ ಕ್ರಿಕೆಟ್​ನ ಬೆಸ್ಟ್​ ಬೌಲರ್​ ಎಂಬ ಚರ್ಚೆಗೆ ಕಾರಣವಾಗಿದೆ.

ಆಧುನಿಕ ಕ್ರಿಕೆಟ್​​ನ ಶ್ರೇಷ್ಠ ಸ್ಪಿನ್ನರ್ ಅಶ್ವಿನ್ 
ಆರ್​.ಅಶ್ವಿನ್.. ಸದ್ಯ ವಿಶ್ವ ಕ್ರಿಕೆಟ್​​ನ ಬೆಸ್ಟ್​ ಸ್ಪಿನ್ನರ್. ಡಿಫರೆಂಟ್ ವೇರಿಯೇಷನ್ಸ್​ನಿಂದಲೇ, ವಿಶ್ವ ಟೆಸ್ಟ್​ ಕ್ರಿಕೆಟ್​ನ ವಿಕೆಟ್ ಟೇಕರ್ ಬೌಲರ್​ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಟ್ಟಿದೆ. ದೇಶದ ಯಾವುದೇ ಮೈದಾನ ಆಗಿರಲಿ, ಎದುರಾಳಿಗೆ ಕಂಟಕವಾಗಿ ಕಾಡುವ ಈತ, ಆಧುನಿಕ ಕ್ರಿಕೆಟ್​​ನ ಸ್ಪಿನ್​ ಮಾಸ್ಟರ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಅದ್ರಲ್ಲೂ ಅಂದು ಟರ್ಬನೇಟರ್ ಹರ್ಭಜನ್​ ಸಿಂಗ್ ಸ್ಥಾನದಲ್ಲಿ ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದ ಆರ್​.ಅಶ್ವಿನ್, ಇಂದು ಟೆಸ್ಟ್​ ಕ್ರಿಕೆಟ್​​ನಲ್ಲಿ ಹರ್ಭಜನ್​ ಸಿಂಗ್​​ರನ್ನೇ ಮೀರಿಸುವಂತ ಹಂತಕ್ಕೆ ಬೆಳೆದು ನಿಂತಿದ್ದಾರೆ.

ಹೌದು..! ಸದ್ಯ ಟೆಸ್ಟ್​ ಕ್ರಿಕೆಟ್​​ನಲ್ಲಿ 400ಕ್ಕೂ ಹೆಚ್ಚು ವಿಕೆಟ್​ ಪಡೆದಿರುವ ಅಶ್ವಿನ್, ಟೀಮ್ ಇಂಡಿಯಾದ ಪರ ಈ ಸಾಧನೆ ಮಾಡಿದ ನಾಲ್ಕನೇ ಬೌಲರ್​ ಹಾಗೂ 3ನೇ ಸ್ಪಿನ್ನರ್​ ಆಗಿದ್ದಾರೆ. ಅಷ್ಟೇ ಅಲ್ಲ..! ಬ್ಯಾಟಿಂಗ್​​ನಲ್ಲೂ ತಂಡಕ್ಕೆ ಕೊಡುಗೆ ನೀಡುವ ಅಶ್ವಿನ್, ಟೀಮ್ ಇಂಡಿಯಾದ ಟ್ರಂಪ್​ ಕಾರ್ಡ್​ ಪ್ಲೇಯರ್ ಆಗಿದ್ದಾರೆ​​.. ಆದ್ರೆ ಹರ್ಭಜನ್​ ಸಿಂಗ್ ಸ್ಥಾನದಲ್ಲಿ ತಂಡಕ್ಕೆ ಎಂಟ್ರಿಕೊಟ್ಟಿರುವ ಕೇರಂ ಸ್ಪೆಷಲಿಸ್ಟ್​ ಅಶ್ವಿನ್​​, ಟರ್ಬನೇಟರ್​​ನ ದಾಖಲೆಯನ್ನೇ ಬ್ರೇಕ್​ ಮಾಡುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇದೇ ವಿಚಾರದಿಂದ್ಲೇ ಇಬ್ಬರಲ್ಲಿ ಯಾರು ಟೆಸ್ಟ್​ನ ಬೆಸ್ಟ್​​​​​​​​​​​​​​​​​​​​​ ಸ್ಪಿನ್ನರ್ ಎಂಬ ಡಿಬೇಡ್​​​ಗೆ, ಇದೀಗ ದಾರಿ ಮಾಡಿಕೊಟ್ಟಿರೋದು..!

ಹರ್ಭಜನ್​​ಗಿಂತ ಬೆಸ್ಟ್​​​​​​​ ವಿಕೆಟ್​ ಟೇಕರ್ ಅಶ್ವಿನ್..!
ಟೀಮ್ ಇಂಡಿಯಾ ಪರ ನೂರಕ್ಕೂ ಅಧಿಕ ಟೆಸ್ಟ್​ ಪಂದ್ಯಗಳನ್ನಾಡಿರುವ ಹರ್ಭಜನ್, ಒಂದು ದಶಕದ ಕಾಲ ವಿಶ್ವ ಕ್ರಿಕೆಟ್​​ನಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಅಷ್ಟೇ ಅಲ್ಲ..! ಮ್ಯಾಚ್​ ವಿನ್ನರ್​ ಬೌಲರ್ ಎಂಬುವುದರಲ್ಲಿಯೂ ಎರಡು ಮಾತಿಲ್ಲ.. ಆದ್ರೆ, ಅಶ್ವಿನ್ ಸದ್ಯ ಆಡಿರುವ ಟೆಸ್ಟ್​ ಪಂದ್ಯಗಳಿಗೆ ಹೋಲಿಸಿದರೆ, ಹರ್ಭಜನ್​ ಸಿಂಗ್ ವಿಕೆಟ್ ಬೇಟೆಯಲ್ಲಿ ಹಿಂದೆ ಬಿದ್ದಿದ್ದಾರೆ…. ಹಾಗಾಗಿ ಈ ಇಬ್ಬರ 78 ಟೆಸ್ಟ್​ ಪಂದ್ಯಗಳ ಅಂಕಿಸಂಖ್ಯೆಗಳ ವಿಚಾರದಲ್ಲಿ ಕೇರಂ ಸ್ಪೆಷಲಿಸ್ಟ್​ ಮೇಲುಗೈ ಸಾಧಿಸಿದ್ದಾರೆ.

78 ಟೆಸ್ಟ್​ ಪಂದ್ಯಗಳ ಅಂಕಿಅಂಶ
ಹರ್ಭಜನ್                           ಅಶ್ವಿನ್
78                  ಪಂದ್ಯ              78
332               ವಿಕೆಟ್             409
30.81            ಸರಾಸರಿ           24.69

ಆಸ್ಟ್ರೇಲಿಯಾ ವಿರುದ್ಧ ಸಾಲಿಡ್ ರೆಕಾರ್ಡ್​..!
ಆಸ್ಟ್ರೇಲಿಯನ್ನರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದ ಬೌಲರ್​ ಹರ್ಭಜನ್​ ಸಿಂಗ್.. ಭಜ್ಜಿ ನಿರ್ಗಮನದ ಬಳಿಕ ಆ ಸ್ಥಾನವನ್ನ ಸಮರ್ಥವಾಗಿ ತುಂಬುತ್ತಿರುವ ಸ್ಪಿನ್ನರ್, ಕೇರಂ ಸ್ಪೆಷಲಿಸ್ಟ್ ಅಗಿದ್ದಾರೆ. ಇನ್ನೂ ಆಸ್ಟ್ರೇಲಿಯನ್ನರ ವಿರುದ್ಧದ ಇವರಿಬ್ಬರ ಟ್ರ್ಯಾಕ್​ ರೆಕಾರ್ಡ್​ನಲ್ಲೂ, ಅಶ್ವಿನ್ ಅಗ್ರಸ್ಥಾನದಲ್ಲೇ ನಿಲ್ಲುತ್ತಾರೆ.. ಹರ್ಭಜನ್​ ಸಿಂಗ್ ಆಸಿಸ್​ನ 79 ಬ್ಯಾಟ್ಸ್​ಮನ್​ಗಳನ್ನ ಬಲಿ ಪಡೆದರೆ, ಅಶ್ವಿನ್ 89 ವಿಕೆಟ್​​ ಬೇಟೆಯಾಡಿದ್ದಾರೆ ಅನ್ನೋದು ವಿಶೇಷ….

ಆಸ್ಟ್ರೇಲಿಯಾ ವಿರುದ್ಧ ಬೆಸ್ಟ್ ಪರ್ಫಾಮರ್ಸ್ ಎನಿಸಿಕೊಂಡಿರೋ ಉಭಯ ಆಟಗಾರರು, ವಿದೇಶಿ ನೆಲದಲ್ಲೂ ಮೇಜರ್​ ರೋಲ್​ ಅನ್ನೇ ಪ್ಲೇ ಮಾಡಿದ್ದಾರೆ. ವಿದೇಶದಲ್ಲಿ ಹರ್ಭಜನ್​ ಸಿಂಗ್ ಆಡಿದ 35 ಪಂದ್ಯಗಳಿಂದ 116 ವಿಕೆಟ್​ ಉರುಳಿಸಿದರೆ, ಅಶ್ವಿನ್ 31 ಟೆಸ್ಟ್​ ಪಂದ್ಯಗಳಿಂದ 123 ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿದ್ದಾರೆ. ಅಷ್ಟೇ ಅಲ್ಲ.. ಟೀಮ್ ಇಂಡಿಯಾ ಗೆಲುವಿನ ಕೊಡುಗೆ ನೀಡಿದವರಲ್ಲಿ ಅಶ್ವಿನ್ ಮುಂದೆಯೇ ಇದ್ದಾರೆ. ಭಾರತ ತಂಡ ಗೆದ್ದ 31 ಟೆಸ್ಟ್​ ಪಂದ್ಯಗಳಲ್ಲಿ ಹರ್ಭಜನ್, 171 ವಿಕೆಟ್ ಉರಳಿಸಿದ್ದರೆ, ಅಶ್ವಿನ್ 288 ವಿಕೆಟ್ ಬೇಟೆಯಾಡುವುದರೊಂದಿಗೆ 46 ಪಂದ್ಯಗಳ ಗೆಲುವಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ.

ಇನ್ನೂ ಉಭಯ ಆಟಗಾರರ ಅಂಕಿಅಂಶಗಳೆಲ್ಲಾ ರವಿಚಂದ್ರನ್ ಅಶ್ವಿನ್, ಬೆಸ್ಟ್​ ಟೆಸ್ಟ್ ಸ್ಪಿನ್ನರ್​ ಅಂತಾನೇ ಹೇಳುತ್ತಿವೆ.. ಆದ್ರೆ, ಹರ್ಭಜನ್ ಸಿಂಗ್ ಆಡಿದ ಕಾಲಘಟ್ಟಕ್ಕೂ, ಸದ್ಯದ ಕಾಲಘಟ್ಟಕ್ಕೂ ಹೋಲಿಸಿದರೆ ತಾಂತ್ರಿಕವಾಗಿ ಅಜಗಜಾಂತರ ವತ್ಯಾಸವಿದೆ. ಹಾಗಾಗಿ ಈ ಇಬ್ಬರಲ್ಲಿ ಯಾರು, ಶ್ರೇಷ್ಠ ಸ್ಪಿನ್ನರ್ ಅನ್ನೋದು ಜಸ್ಟ್​ ಅಂಕಿಅಂಶಗಳಿಂದಲೇ ಹೇಳೋದು ಅಸಾಧ್ಯದ ಮಾತು..

The post ಅಶ್ವಿನ್ V/S ಹರ್ಭಜನ್ ಸಿಂಗ್- ಟೀಮ್ ಇಂಡಿಯಾದ ಬೆಸ್ಟ್ ಆಫ್ ಸ್ಪಿನ್ನರ್ ಯಾರು..? appeared first on News First Kannada.

Source: newsfirstlive.com

Source link