ಅಸಲಿ ಆಟ ಶುರು ಮಾಡಿದ ಝೇಂಡೆ; ಕನಸಿನ ಏಣಿಗೆ ಆರ್ಯನೇ ಮೆಟ್ಟಿಲು – Jothe Jotheyali Update Keshav Jende Master Plan to Take property of Vardhan Company


ಅನು ಬಳಿ ಮಾತನಾಡುವಾಗ ಝೇಂಡೆ ಡೇಂಜರ್ ಎಂಬ ವಿಚಾರವನ್ನು ಸಂಜು ಹೇಳಿದ್ದಾನೆ. ಸಂಜುನೇ ಆರ್ಯ ಎಂದು ಗೊತ್ತಾದ ನಂತರ ಝೇಂಡೆ ಸಂಜುಗೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾನೆ. ಆದರೆ, ಝೇಂಡೆ ವಿರುದ್ಧ ಅನು ಕೆಟ್ಟ ಅಭಿಪ್ರಾಯ ನೀಡಾಗಿದೆ.

ಅಸಲಿ ಆಟ ಶುರು ಮಾಡಿದ ಝೇಂಡೆ; ಕನಸಿನ ಏಣಿಗೆ ಆರ್ಯನೇ ಮೆಟ್ಟಿಲು

ಝೇಂಡೆ-ಸಂಜು

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರವನ್ನು ತಿಳಿಸಿದ್ದಾಳೆ ಪ್ರಿಯಾ. ಇದನ್ನು ಕೇಳಿ ಝೇಂಡೆಗೆ ಖುಷಿ ಆಗಿದೆ. ಮತ್ತೊಂದು ಕಡೆ ಅಚ್ಚರಿ ಕೂಡ ಆಗಿದೆ. ಆರ್ಯ ಸದಾ ತನ್ನ ಜತೆಯೇ ಇರಬೇಕು ಎಂಬ ಕಾರಣಕ್ಕೆ ಆತ ಮಾಸ್ಟರ್​ಪ್ಲ್ಯಾನ್ ಮಾಡಲು ಶುರು ಮಾಡಿದ್ದಾನೆ. ಇದೇ ಸಂದರ್ಭದಲ್ಲಿ ಅನುನ ಭೇಟಿ ಮಾಡಿದ್ದಾನೆ ಸಂಜು. ಈ ಭೇಟಿ ವೇಳೆ ಝೇಂಡೆಯಿಂದ ದೂರ ಉಳಿಯಲು ಸಂಜುಗೆ ಅನು ಸೂಚನೆ ನೀಡಿದ್ದಾಳೆ. ಇದನ್ನು ಸಂಜು ಪಾಲಿಸಲು ಒಪ್ಪಿದ್ದಾನೆ.

ಸುಳ್ಳು ಹೇಳಿದ ಝೇಂಡೆ

ಆರ್ಯವರ್ಧನ್​ಗೆ ಅಪಘಾತ ಆಗಿತ್ತು. ಆಗ ಮುಖಕ್ಕೆ ಸಾಕಷ್ಟು ಪೆಟ್ಟಾಗಿತ್ತು. ಹೀಗಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಯಿತು. ಈ ವೇಳೆ ಆರ್ಯನಿಗೆ ಹಾಕಿದ್ದು ವಿಶ್ವನ ಮುಖದ ಚರ್ಮವನ್ನು. ಹೀಗಾಗಿ ಆತ ವಿಶ್ವನ ರೀತಿ ಕಾಣುತ್ತಿದ್ದಾನೆ. ವೈದ್ಯರು, ಪೊಲೀಸರು ಹಾಗೂ ವಿಶ್ವನ ತಾಯಿ ಪ್ರಿಯಾಗೆ ಮಾತ್ರ ಈ ವಿಷಯ ಗೊತ್ತಿದೆ. ಇದನ್ನು ಆಕೆ ಗುಟ್ಟಾಗಿ ಇಟ್ಟಿದ್ದಳು. ಆದರೆ, ಅವಳ ಬಳಿ ಬಂದ ಝೇಂಡೆ ಉಪಾಯದಿಂದ ಅಸಲಿ ವಿಚಾರ ತಿಳಿದುಕೊಂಡಿದ್ದಾನೆ. ಸಂಜುನೇ ಆರ್ಯವರ್ಧನ್ ಎಂಬ ವಿಚಾರವನ್ನು ಪ್ರಿಯಾ ಬಳಿ ರಿವೀಲ್ ಮಾಡಿಸಿದ್ದಾನೆ. ಇದು ಗೊತ್ತಾದ ನಂತರ ಪ್ರಿಯಾಗೆ ಒಂದಷ್ಟು ಸುಳ್ಳುಗಳನ್ನು ಆತ ಹೇಳಿದ್ದಾನೆ.

‘ಆರ್ಯನಿಗೆ ಅವನ ಆಪ್ತರಿಂದಲೇ ಜೀವಕ್ಕೆ ಅಪಾಯ ಇದೆ. ಆಪ್ತರು ಅಂದರೆ ಬೇರಾರೂ ಅಲ್ಲ, ಅನು. ದ್ವೇಷ ಸಾಧಿಸಲು ಆಕೆ ಈತನನ್ನು ಮದುವೆ ಆಗಿದ್ದಾಳೆ. ಕೊಡಬಾರದ ಹಿಂಸೆ ನೀಡಿದ್ದಾಳೆ. ಆಕೆಗೆ ಯಾವುದೇ ಕಾರಣಕ್ಕೂ ಸಂಜುನೇ ಆರ್ಯ ಎನ್ನುವ ವಿಚಾರ ಗೊತ್ತಾಗಬಾರದು. ನನ್ನ ಆರ್ಯನ ನಾನು ಕಾಪಾಡಿಕೊಳ್ಳುತ್ತೇನೆ. ನೀವು ಚಿಂತೆ ಮಾಡಬೇಡಿ. ನೀವು ಇಲ್ಲಿಂದ ಊರಿಗೆ ಹೊರಡಿ. ಇಲ್ಲೇ ಇದ್ದರೆ ನೀವು ಧರ್ಮ ಸಂಕಟಕ್ಕೆ ಸಿಲುಕುತ್ತೀರಿ. ಸಂಜುನೇ ಆರ್ಯ ಎನ್ನುವ ವಿಚಾರ ನನಗೆ ಮೊದಲೇ ಗೊತ್ತಿತ್ತು’ ಎಂದು ಝೇಂಡೆ ಸುಳ್ಳು ಹೇಳಿದ್ದಾನೆ. ಇದನ್ನು ಪ್ರಿಯಾ ನಂಬಿದ್ದಾಳೆ. ನೇರವಾಗಿ ಊರಿಗೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾಳೆ.

ಝೇಂಡೆ ಡೇಂಜರ್ ಎಂದ ಸಂಜು

ಅನು ಬಳಿ ಮಾತನಾಡುವಾಗ ಝೇಂಡೆ ಡೇಂಜರ್ ಎಂಬ ವಿಚಾರವನ್ನು ಸಂಜು ಹೇಳಿದ್ದಾನೆ. ಸಂಜುನೇ ಆರ್ಯ ಎಂದು ಗೊತ್ತಾದ ನಂತರ ಝೇಂಡೆ ಸಂಜುಗೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾನೆ. ಆದರೆ, ಝೇಂಡೆ ವಿರುದ್ಧ ಅನು ಕೆಟ್ಟ ಅಭಿಪ್ರಾಯ ನೀಡಾಗಿದೆ. ಹೀಗಾಗಿ, ಝೇಂಡೆಯಿಂದ ದೂರ ಉಳಿಯುವ ನಿರ್ಧಾರಕ್ಕೆ ಆತ ಬಂದಿದ್ದಾನೆ.

ವೈದ್ಯರ ಭೇಟಿ ಮಾಡಿದ ಆರಾಧನಾ

ಆರಾಧನಾಗೆ ಸಂಜು ನಡೆಯ ಮೇಲೆ ಅನುಮಾನ ಬಂದಿದೆ. ಎಲ್ಲರೂ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಬಲವಾಗಿ ಅನಿಸಿದೆ. ಈ ಕಾರಣಕ್ಕೆ ಸಂಜುಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಆಕೆ ಭೇಟಿ ಮಾಡಿದ್ದಾಳೆ. ವೈದ್ಯರಿಗೆ ಈತ ವಿಶ್ವ ಅಲ್ಲ ಆರ್ಯವರ್ಧನ್ ಎನ್ನುವ ವಿಚಾರ ಗೊತ್ತಿದೆ. ಆದರೆ, ಅದನ್ನು ಹೇಳುವಂತಿಲ್ಲ. ಹೀಗಾಗಿ, ಆರಾಧನಾ ಬಳಿ ನಿಜ ವಿಚಾರವನ್ನು ಅವರು ಹೇಳೋಕೆ ನಿರಾಕರಿಸಿದ್ದಾರೆ. ಇದರಿಂದ ಆರಾಧನಾಗೆ ಬೇಸರ ಆಗಿದೆ. ವೈದ್ಯರಿಂದಲೂ ಅಂದುಕೊಂಡಿದ್ದು ಸಿಕ್ಕಿಲ್ಲ ಎಂಬ ಬೇಸರ ಕಾಡಿದೆ.

ಝೇಂಡೆ ಹೊಸ ಕನಸು

ಈ ವರ್ಧನ್ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದು ಝೇಂಡೆ ಕನಸು. ಈ ಕನಸಿಗೆ ಆರ್ಯನನ್ನು ಮೆಟ್ಟಿಲ ರೀತಿ ಬಳಸಿಕೊಳ್ಳುವ ಆಲೋನಚನೆಯಲ್ಲಿ ಅವನಿದ್ದಾನೆ. ಹೇಗಾದರೂ ಮಾಡಿ ಆರ್ಯನನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂಬುದು ಅವನ ಆಲೋಚನೆ.

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

TV9 Kannada


Leave a Reply

Your email address will not be published.