ಒಂದು ಕಾಲದ ಕಾಂಗ್ರೆಸ್ ನಾಯಕ ಹಿಮಂತ ಬಿಸ್ವ ಸರ್ಮ ಇಂದು ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸತತ ಎರಡನೇ ಬಾರಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಪೂರ್ವ ಮುಖ್ಯಮಂತ್ರಿ ಸರ್ಬಾನಂದ ಸೋನಾವಲ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಹಿಮಂತ ಕಾರ್ಯ ನಿರ್ವಹಿಸಿದ್ದರು.

ಇನ್ನು ಇತ್ತೀಚೆಗೆ ತಾನೆ ನಡೆದ ಅಸ್ಸಾಂ ಚುನಾವಣೆಯಲ್ಲಿ ಒಟ್ಟು 126 ಕ್ಷೇತ್ರಗಳ ಪೈಕಿ ಎನ್​ಡಿಎ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ, ಕಾಂಗ್ರೆಸ್ ಪ್ಲಸ್ 50  ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಪಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಇನ್ನು ಕೇಂದ್ರ ಸರ್ಕಾರ 2019 ರಲ್ಲಿ ಸಿಎಎಯನ್ನು ಜಾರಿಗೊಳಿಸುವ ವಿಚಾರವನ್ನ ಮುನ್ನೆಲೆಗೆ ತಂದ ಸಮುದಾಯದಲ್ಲಿ ಅದಕ್ಕೆ ಭಾರೀ ವಿರೋಧ ವ್ಯಕ್ತವಾದದ್ದು ಅಸ್ಸಾಂನಲ್ಲೇ. ಇದು ಬಿಜೆಪಿಗೆ 2016 ರಲ್ಲಿ ಬಂದಿದ್ಧ ಫಲಿತಾಂಶವನ್ನು 2021 ರ ಚುನಾವಣೆಯಲ್ಲಿ ಉಲ್ಟಾ ಮಾಡಿಬಿಡುತ್ತದೆ ಎಂದು ವಿಪಕ್ಷಗಳು ನಂಬಿಕೊಂಡಿದ್ದವು.

2016 ಚುನಾವಣೆಯಲ್ಲಿ ಬಿಜೆಪಿ 126 ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಗೆದ್ದಿತ್ತು ಇನ್ನು ಅಸೊಮ್ ಗಣ ಪರಿಷದ್ 14 ಕ್ಷೇತ್ರಗಳಲ್ಲಿ ಗೆದ್ದಿತ್ತು, ಇತ್ತ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ 12 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದರೆ ಕಾಂಗ್ರೆಸ್ 26, ಹಾಗೂ ಎಐಯುಡಿಎಫ್ 13 ಕ್ಷೇತ್ರಗಳನ್ನ ತನ್ನದಾಗಿಸಿಕೊಂಡಿತ್ತು. ವಿಶೇಷ ಅಂದ್ರೆ ಈ ಬಾರಿಯೂ ಬಿಜೆಪಿ 60 ಸ್ಥಾನಗಳನ್ನೇ ಗೆದ್ದುಕೊಂಡಿದೆ.

 

 

The post ಅಸ್ಸಾಂನಲ್ಲಿ ಬಿಜೆಪಿಯಲ್ಲಿ ಹೊಸ ಪರ್ವ: ನೂತನ ಸಿಎಂ ಆಗಿ ಹಿಮಂತ ಬಿಸ್ವ ಸರ್ಮ ಆಯ್ಕೆ appeared first on News First Kannada.

Source: newsfirstlive.com

Source link