ಗುವಾಹಟಿ: ಇಂದು ಬೆಳಗ್ಗೆ ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಕಂಪನ ದಾಖಲಾಗಿದೆ. ಅಸ್ಸಾಂನ ತೇಜ್‌ಪುರದಿಂದ ಪಶ್ಚಿಮಕ್ಕೆ 43 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದುವನ್ನ ಗುರುತಿಸಲಾಗಿದೆ. ಇಂದು ಬೆಳಿಗ್ಗೆ 7:51ಕ್ಕೆ ಭೂಮಿಯ ಮೇಲ್ಮೈಯಿಂದ 17 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಈಶಾನ್ಯ ಮತ್ತು ಉತ್ತರ ಬಂಗಾಳದಲ್ಲಿ ಕೂಡ ಪ್ರಬಲ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಈವರೆಗೆ ಭೂಕಂಪನದಿಂದ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಕೆಲವೆಡೆ ಕಟ್ಟಡಗಳ ಗೋಡೆ ಕುಸಿದುಬಿದ್ದಿರುವುದು ಹಾಗೂ ಬಿರುಕು ಬಿಟ್ಟಿರುವ ಫೋಟೋಗಳನ್ನ ಅಲ್ಲಿನ ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಪ್ರದೇಶದಲ್ಲಿ ಮೂರು ಆಫ್ಟರ್​ಶಾಕ್​​(ಭೂಕಂಪನದ ನಂತರದ ಅಲೆ) ವರದಿಯಾಗಿದೆ.

ಈ ಕುರಿತು ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಮಾತನಾಡಿದ್ದು, ಎಲ್ಲರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಮತ್ತು ಎಲ್ಲರೂ ಜಾಗರೂಕರಾಗಿರಿ ಎಂದು ವಿನಂತಿಸುತ್ತೇನೆ. ಎಲ್ಲಾ ಜಿಲ್ಲೆಗಳಿಂದ ನಾನು ಮಾಹಿತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.

 

The post ಅಸ್ಸಾಂನಲ್ಲಿ 6.4 ತೀವ್ರತೆಯ ಭೂಕಂಪನ appeared first on News First Kannada.

Source: newsfirstlive.com

Source link