ಗುವಾಹಟಿ: ಅಸ್ಸಾಂನ ಮಹಿಳಾ ವೈದ್ಯೆಯೊಬ್ಬರು ಒಂದೇ ಸಮಯದಲ್ಲಿ ಕೋವಿಡ್‌ನ ಎರಡು ವಿಭಿನ್ನ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾರೆ. ಈ ರೀತಿ ಒಂದೇ ಸಮಯದಲ್ಲಿ ಎರಡೆರಡು ಸೋಂಕಿಗೆ ಒಳಗಾಗುವ ಭಾರತದ ಮೊದಲ ರೋಗಿ ಈ ವೈದ್ಯೆಯಾಗಿದ್ದಾರೆ.

ಕೊರೊನಾದ ಆಲ್ಫಾ ಮತ್ತು ಡೆಲ್ಟಾ ಎರಡೂ ರೂಪಾಂತರಗಳಿಂದ ಮಹಿಳಾ ವೈದ್ಯರೊಬ್ಬರು ಸೋಂಕಿಗೆ ಒಳಗಾಗಿದ್ದಾರೆ ಅಂತ  ವರದಿಯಾಗಿದೆ. ಈ ವರದಿಯನ್ನು ದೃಢಪಡಿಸಿದ ಡಾ.ಬಿಸ್ವಾಜ್ಯೋತಿ ಬೊರ್ಕಕೊಟಿ, “ಮಹಿಳೆ ವೈದ್ಯೆಯರಲ್ಲಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ರೂಪಾಂತರದ ಕೊರೊನಾವೈರಸ್‌ ಸೋಂಕು ಇರುವುದು ಪರೀಕ್ಷೆಯಿಂದ ಪತ್ತೆ ಹಚ್ಚಲಾಗಿದೆ. ಈ ಮಹಿಳೆ ವೈದ್ಯೆಗೆ ಎರಡೂ ಡೋಸ್‌ ಲಸಿಕೆಗಳನ್ನು ನೀಡಲಾಗಿತ್ತು. ಆದ್ರೂ ಎರಡು ವಿಭಿನ್ನ ರೂಪಾಂತರ” ಎಂದು ತಿಳಿಸಿದ್ದಾರೆ.

“ನಮ್ಮ ಪ್ರಯೋಗಾಲಯದಲ್ಲಿ ನಾವು ಮಹಿಳಾ ವೈದ್ಯೆಯ ಮಾದರಿಗಳನ್ನು ಪರೀಕ್ಷಿಸಿದಾಗ, ವೈದ್ಯೆಯ ದೇಹದಲ್ಲಿ ಒಂದೇ ಸಮಯದಲ್ಲಿ SARS-CoV-2ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳು ಇದೆ. ಈ ಎರಡೂ ರೂಪಾಂತರಗಳಿಂದ ವೈದ್ಯೆ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯೆಯ ಪತಿಗೆ ಆಲ್ಫಾ ರೂಪಾಂತರದಿಂದ ಸೋಂಕು ತಗುಲಿತ್ತು. ಇದರಿಂದ ಪತ್ನಿಗೆ ಎರಡೂ ರೂಪಾಂತರಗಳಿಗೆ ಒಳಗಾಗಿದ್ದಾರೆ” ಎಂದು ತಿಳಿಸಿದರು.

The post ಅಸ್ಸಾಂ ವೈದ್ಯೆಯಲ್ಲಿ ಒಂದೇ ಸಲಕ್ಕೆ ಆಲ್ಫಾ, ಡೆಲ್ಟಾ ಎರಡೆರಡು ರೂಪಾಣು ಪತ್ತೆ appeared first on News First Kannada.

Source: newsfirstlive.com

Source link