ಬಿಗ್‍ಬಾಸ್ ಮೊದಲನೇ ಇನ್ನಿಂಗ್ಸ್ ಕೊರೊನಾದಿಂದಾಗಿ ರದ್ದಾಗಿ, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕ ದಿನದಲ್ಲೇ ಚಕ್ರವರ್ತಿ ಚಂದ್ರಚೂಡ್ ಅವರು ಪ್ರತಿಸ್ಪರ್ಧಿಗಳಿಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ.

6 ವಾರಗಳ ಕಾಲ ಮನೆಯಲ್ಲಿ ಇದ್ದು ಮನೆಯಿಂದ ಹೊರ ಹೋಗಿದ್ದ ಚಕ್ರವರ್ತಿ, ಇದೀಗ ಸೆಕೆಂಡ್ ಇನ್ನಿಂಗ್ಸ್ ಆಡಲು ಬಿಗ್ ಮನೆಗೆ ಕಾಲಿಟ್ಟಿದ್ದಾರೆ. ಈ ಸಂದರ್ಭ ಸುದೀಪ್ ಅವರು ಮನೆಯಿಂದ ಹೊರ ಹೋದವರು ಮತ್ತೆ ಬಂದಿದ್ದೀರಿ. ಇದೀಗ ಏನು ಬದಲಾವಣೆಯೊಂದಿಗೆ ಬಂದಿದ್ದೀರಿ ಎಂದಾಗ ಚಕ್ರವರ್ತಿ, ನನ್ನಲ್ಲಿ ಒಂದು ಸ್ವಭಾವ ಇದೆ. ನಾನು ಅಹಂಕಾರ ಮಾಡಿದ್ರೆ ಮುದ್ದು ಮಾಡ್ತೀನಿ, ದುರಾಂಕಾರ ತೋರಿಸಿದ್ರೆ ಮದ್ದಾನೆ ಆಗ್ತೀನಿ. ಈ ಹಿಂದೆ ಅಣ್ಣ ಅಂದ್ರೆ ಅವರು ತಂಗಿ ಅಂದುಕೊಂಡಿದ್ದೆ, ಅಪ್ಪ ಎಂದರೆ ಅವರು ಮಗಳು ಅಂದುಕೊಂಡಿದ್ದೆ. ಆದರೆ ಆ ಎರಡು ಹೆಸರಲ್ಲಿ ಸಿಕ್ಕಾಪಟ್ಟೆ ಬೆನ್ನಿಗೆ ಚೂರಿ ಬಿದ್ದಿದೆ. ಈ ಬಾರಿ ಆ ಚೂರಿನ ಅವರ ಕೈಯಲ್ಲಿ ತೆಗಿಸಬೇಕೆಂದುಕೊಂಡು ಬಂದಿದ್ದೇನೆ ಎಂದು ಪ್ರತಿಸ್ಪರ್ಧಿಗಳಿಗೆ ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ:  ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

ಬಿಗ್‍ಬಾಸ್‍ನಲ್ಲಿ ನನ್ನನ್ನು ನೋಡಿ, ಏನೋ ಹೊಸತನ ಕಲಿಕೆಗೆ ಇದೆ. ನೀನು ಹೋಗಿ ಇನ್ನಷ್ಟು ಬದಲಾವಣೆ ಆಗಿದ್ದಿ, ಹೀಗೆ ಮುಂದುವರಿ ಎಂದು ನನ್ನ ಆಪ್ತರು ಸಲಹೆ ನೀಡಿದ್ದಾರೆ. ಹಾಗೆ ಕರ್ನಾಟಕದ ಜನ ನನಗೆ ಭಯೋತ್ಪಾದಕನ ರೂಪದ ಬುದ್ಧ ಎಂಬ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಂತೋಷ ಪಟ್ಟರು.

ಈ ಮೊದಲು ಮಾತು ಪ್ರಾರಂಭಿಸಿದ ಚಕ್ರವರ್ತಿ, ನನ್ನನ್ನು ಮೊದಲು ಮನುಷ್ಯ ಅಂದುಕೊಂಡಿದ್ದರು, ಇದೀಗ ತುಂಬಾ ಒಳ್ಳೆ ಮನುಷ್ಯ ಅಂದುಕೊಂಡಿದ್ದಾರೆ. ಈ ಹಿಂದೆ ನಾನು ಒರಟು ಮನುಷ್ಯ ಹಾಗಾಗಿ ಹೆಣ್ಣು ಮಕ್ಕಳು ಪ್ರೀತಿ ಮಾಡಲ್ಲ ಅಂದುಕೊಂಡಿದ್ದೆ. ಇಲ್ಲಿಂದ ಹೊರ ಹೋದ ಬಳಿಕ ತುಂಬಾ ಹೆಣ್ಣು ಮಕ್ಕಳು ಪ್ರೀತಿಸಲು ಮತ್ತು ಅಭಿಮಾನಿಸಲು ಪ್ರಾರಂಭಿಸಿದ್ದಾರೆ ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ದೊಡ್ಮನೆಯಲ್ಲಿ ಟೂ ವೀಲರ್ ಮಾತ್ರವಿಲ್ಲ – ದಿವ್ಯಾ ಕಾಲೆಳೆದ ಸುದೀಪ್

The post ಅಹಂಕಾರ ಮಾಡಿದ್ರೆ ಮುದ್ದು ಮಾಡ್ತೀನಿ, ದುರಾಂಕಾರ ತೋರಿದ್ರೆ ಮದ್ದಾನೆ ಆಗ್ತೀನಿ: ಚಕ್ರವರ್ತಿ appeared first on Public TV.

Source: publictv.in

Source link