ಅಹಿಂದ ನಾಯಕನೆಂದು ಅಧಿಕಾರಕ್ಕೆ ಬಂದಮೇಲೆ ದಲಿತರ ಪರ ಕೆಲಸ ಮಾಡುವುದು ಕರ್ತವ್ಯ: ಬಿಜೆಪಿ ಟ್ವೀಟ್ | BJP Karnataka Tweet against Congress Leader Siddaramaiah on Dalits


ಅಹಿಂದ ನಾಯಕನೆಂದು ಅಧಿಕಾರಕ್ಕೆ ಬಂದಮೇಲೆ ದಲಿತರ ಪರ ಕೆಲಸ ಮಾಡುವುದು ಕರ್ತವ್ಯ: ಬಿಜೆಪಿ ಟ್ವೀಟ್

ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಅಹಿಂದ ನಾಯಕನೆಂದು ಅಧಿಕಾರಕ್ಕೆ ಬಂದ ಮೇಲೆ ದಲಿತರ ಪರ ಕೆಲಸ ಮಾಡುವುದು ನಿಮ್ಮ ಕರ್ತವ್ಯ. ಅದರಲ್ಲಿ ನೀವು ಹೆಚ್ಚುಗಾರಿಕೆ ಮೆರೆಯುವ ಅಗತ್ಯವಿಲ್ಲ. ನಾನೇ ಮಾಡಿದ್ದು ಎಂದು ಬೀಗುವಾಗ 10 ಬಾರಿ ಯೋಚಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್ ನೀಡಿದೆ. ಸಿದ್ದರಾಮಯ್ಯನವರೇ ಎಷ್ಟು ಬಾರಿ ಹಳೇ ಕತೆ ಹೇಳುತ್ತೀರಿ? ಜನ ಹೊಸದನ್ನು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದಲಿತರನ್ನು ಸಿಎಂ ಮಾಡುವೆ. ನಾನೇ ಮುಂದೆ ನಿಂತು ದಲಿತರನ್ನು ಸಿಎಂ ಮಾಡುತ್ತೇನೆ ಅನ್ನಿ. ಆಗ ನಿಮ್ಮ ದಲಿತ ಪ್ರೇಮ ಒಪ್ಪಿಕೊಳ್ಳೋಣ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯಗೆ ದಲಿತರು ಅಂದ್ರೆ ಕೇವಲ ವೋಟ್‌ ಬ್ಯಾಂಕ್. ಹೀಗಾಗಿಯೇ ದಲಿತರ ಅಭಿವೃದ್ಧಿಗೆ ಹಣ ನೀಡಿದ್ದೇನೆ ಎನ್ನುತ್ತಾರೆ. ಆಂತರ್ಯದಲ್ಲಿ ದಲಿತ ನಾಯಕರನ್ನ ತುಳಿದು ಅಧಿಕಾರಕ್ಕೇರ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯರದ್ದು ಬಣ್ಣದ ತಗಡಿನ ತುತ್ತೂರಿ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ಸಿದ್ದರಾಮಯ್ಯನವರೇ ದಲಿತ ಪರ ಕಾಳಜಿ ಮೆರೆದಿದ್ದೀರಲ್ಲವೇ? ಹಾಗಾದ್ರೆ ದಲಿತ ನಾಯಕ ಪರಮೇಶ್ವರ್‌ರನ್ನ ಸೋಲಿಸಿದ್ಯಾರು? ಸಿಎಂ ಆಗುವುದಕ್ಕೆ ಅಡ್ಡಿಯಾಗ್ತಾರೆಂದು ನೀವೇ ಸೋಲಿಸಿಲ್ಲವೇ? ಸತ್ಯದರ್ಶನ ಮಾಡಿಸುವಿರಾ ಸಿದ್ದರಾಮಯ್ಯನವರೇ? ನೀವು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಹೊಟ್ಟೆಪಾಡಿಗಾಗಿಯೇ? ಖರ್ಗೆರನ್ನು ದೆಹಲಿಗೆ ಸಾಗಹಾಕಿದ್ದು ಹೊಟ್ಟೆಪಾಡಿಗಾಗಿಯೇ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಆ ರೀತಿ ಮಾತನಾಡಲು ಸಾಧ್ಯವೇ ಇಲ್ಲ: ದಲಿತ ವಿರೋಧಿ ಹೇಳಿಕೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಇದನ್ನೂ ಓದಿ: ಉಪಚುನಾವಣೆ ಫಲಿತಾಂಶದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ: ಡಿಕೆ ಶಿವಕುಮಾರ್

TV9 Kannada


Leave a Reply

Your email address will not be published. Required fields are marked *