ಅ.11 ರಂದು ಕಾಂಗ್ರೆಸ್​ನಿಂದ ದೇಶದಾದ್ಯಂತ ಮೌನ ಪ್ರತಿಭಟನೆಗೆ ಕರೆ

ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ್​ನಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ಅಕ್ಟೋಬರ್​ 11 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಮೌನ ಪ್ರತಿಭಟನೆ ಮಾಡಲು ನಿರ್ಧರಿಸಿದೆ.

ಲಖೀಂಪುರ್​ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾಗೊಳಿಸುವಂತೆ ಮತ್ತು ಪುತ್ರ ಆಶಿಶ್​ ಮಿಶ್ರಾ ಸೇರಿ ಇತರೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮೌನ ಪ್ರತಿಭಟನೆ ಕೈಗೊಳ್ಳಲು ಕಾಂಗ್ರೆಸ್​ ತೀರ್ಮಾನಿಸಿದೆ.

ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೇಂದ್ರ ಕಚೇರಿಗಳು ಅಥವಾ ರಾಜಭವನಗಳ ಮುಂದೆ ಸೋಮವಾರ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮೌನ ಪ್ರತಿಭಟನೆ ಕೈಗೊಳ್ಳುವಂತೆ ಕಾಂಗ್ರೆಸ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಪಕ್ಷದ ರಾಜ್ಯಾಧ್ಯಕ್ಷರಿಗೆ ಸೂಚಿಸಿದ್ದಾರೆ.

ಇನ್ನು ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಕೇಂದ್ರ ಸಚಿವರ ಪುತ್ರನಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಅಧಿಕಾರಿಗಳು ನೋಟಿಸ್ ನೀಡಿದ ಬೆನ್ನಲ್ಲೇ ಆಶಿಶ್​ ಮಿಶ್ರಾ ಇಂದು ಕ್ರೈಂ ಬ್ರ್ಯಾಂಚ್ ಕಚೇರಿಗೆ ಹಾಜರಾಗಿದ್ದಾರೆ.

ಇದನ್ನೂ ಓದಿ:ಕೊನೆಗೂ ವಿಚಾರಣೆಗೆ ಹಾಜರಾದ ಆಶಿಶ್ ಮಿಶ್ರಾ; ‘ನನ್ನ ಮಗ ಮುಗ್ಧ’ ಅಂದ್ರು ಕೇಂದ್ರ ಸಚಿವ ಅಜಯ್ ಮಿಶ್ರಾ

ಇದನ್ನೂ ಓದಿ:ಲಖೀಂಪುರ್​ ಹಿಂಸಾಚಾರ: ಅ.18 ರಂದು ರೈತರಿಂದ ‘ರೈಲ್ ರೋಕೋ’ ಪ್ರತಿಭಟನೆಗೆ ಕರೆ

News First Live Kannada

Leave a comment

Your email address will not be published. Required fields are marked *