ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಈ ಇಬ್ಬರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಸರಣಿ? ಮುಂದಿನ ದಿನಗಳಲ್ಲಿ ಯುವ ಆಟಗಾರರ ಪೈಪೋಟಿಯಲ್ಲಿ ಇವರು ಕಳೆದುಹೋಗೋದು ಬಹುತೇಕ ಖಚಿತ? ಯಾರು ಆ ಆಟಗಾರರು? ಯಾಕೆ ಅವರಿಗೆ ಅವಕಾಶ ಸಿಗಲ್ಲ?

ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ, ಈ ಇಬ್ಬರು ಆಟಗಾರರು ಶತಾಯಗತಾಯ ಸ್ಥಾನ ಪಡೆದುಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಈ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನ ಹೊರಹಾಕಿದ್ರಷ್ಟೇ, ಇವರಿಗೆ ಭವಿಷ್ಯ. ಇಲ್ಲ ಅಂದ್ರೆ, ಇವರು ಪೈಪೋಟಿಯಲ್ಲಿ ಕಳೆದು ಹೋಗ್ತಾರಷ್ಟೇ.

ಟ್ಯಾಲೆಂಟ್​ ಪ್ರೂವ್​ ಮಾಡಿದ್ರಷ್ಟೇ ಸಾಹಗೆ ಮತ್ತೆ ಟಿಕೆಟ್​​!
ಟೀಮ್​ ಇಂಡಿಯಾ ಟೆಸ್ಟ್​ ತಂಡದಲ್ಲಿ ಖಾಯಂ ಟಿಕೆಟ್​​ಗಿಟ್ಟಿಸಿಕೊಳ್ಳೋ ಸಾಹ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಮಾತ್ರ ಕಾಣಿಸಿಕೊಳ್ತಿಲ್ಲ. ಕಳೆದ ಆಸ್ಟ್ರೇಲಿಯಾ ಸರಣಿಯ ಬಳಿಕ ಸಾಹ ಸ್ಥಾನವನ್ನ ಪಂತ್​ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ತನ್ನ ಟ್ಯಾಲೆಂಟ್​ ಪ್ರೂವ್​ ಮಾಡೋಕು ಅವಕಾಶ ಸಿಗ್ತಿಲ್ಲ. ಇದರ ನಡುವೆ ವಯಸ್ಸೂ ಕೂಡ 36ರ ಗಡಿ ದಾಟಿದೆ. ಬ್ಯಾಕ್​ ಅಪ್​ ಕೀಪರ್​ ಆಗಿ ಭರತ್​​ ತಂಡದಲ್ಲಿದ್ದಾರೆ. ಈ ಏಜ್​​ ಫ್ಯಾಕ್ಟ್​​ರ್​, ಪೈಪೋಟಿ ಎರಡೇ ಸಾಹಗೆ ಮತ್ತೇ ಅವಕಾಶ ಸಿಗದಂತೆ ಮಾಡೋ ಸಾಧ್ಯತೆಯಿದೆ.

ಇಶಾಂತ್​ ಶರ್ಮಾಗೂ ಇದು ಕೊನೆಯ ಕರೆಯಾ?
ಆಡಿದ 102 ಟೆಸ್ಟ್​ ಪಂದ್ಯಗಳಲ್ಲಿ 306 ವಿಕೆಟ್ಸ್​​. ಇಶಾಂತ್​ ಶರ್ಮಾ ಸಾಧನೆ ಏನು ಅನ್ನೋದಕ್ಕೆ ಇದೇ ಸಾಕ್ಷಿ. ಈ ಸಾಧನೆ ಇದ್ರೂ ಡೆಲ್ಲಿ ವೇಗಿಯ ಸ್ಥಾನ ಅಭದ್ರವಾಗಿದೆ. ಮೊದಲ ಚಾರ್ಮ್​​ ಕಳೆದುಕೊಂಡಿರೋ ಇಶಾಂತ್​, ಲೈನ್​ ಆ್ಯಂಡ್​ ಲೆಂಥ್​​, ವೇರಿಯೇಶನ್​ ಸ್ಪೆಲ್​​ಗಳನ್ನ ಮಾಡುವಲ್ಲಿ ವಿಫಲರಾಗ್ತಿದ್ದಾರೆ. ಫಿಟ್​​ನೆಸ್​ ಕಾಯ್ದುಕೊಳ್ಳೋದು ಕೂಡ ಸವಾಲಾಗಿದೆ. ಈ ಎರಡು ಹಿನ್ನೆಡೆಗಳ ನಡುವೇ ಸ್ಥಾನಕ್ಕಾಗಿ ಮೊಹಮದ್​ ಸಿರಾಜ್​ ಟಫ್​ ಫೈಟ್​ ನಡೆಸ್ತಾ ಇದ್ದಾರೆ. ಹೀಗಾಗಿ ಆಂಗ್ಲರ ವಿರುದ್ಧ ನೀಡೋ ಪರ್ಫಾಮೆನ್ಸ್​ ನಿರ್ಣಾಯಕವಾಗಲಿದೆ.

ಇಂಗ್ಲೆಂಡ್​​​ ವಿರುದ್ಧ ಸಖತ್​​ ಪರ್ಫಾಮೆನ್ಸ್​ ನೀಡಿದ್ರೆ ಇವರ ಸ್ಥಾನ ಭದ್ರವಾಗುತ್ತೆ ನಿಜ. ಆದ್ರೆ, ಆಂಗ್ಲರ ವಿರುದ್ಧದ ಸರಣಿಯಲ್ಲಿ ಪಂತ್​, ಸಿರಾಜ್​ ಪೈಪೋಟಿಯ ಮುಂದೆ ಇವರಿಗೆ ಪ್ಲೇಯಿಂಗ್​ ಇಲೆವೆನ್​ ಟಿಕೆಟ್​ ಸಿಗುತ್ತಾ ಅನ್ನೋದೇ ಕುತೂಹಲ ಮೂಡಿಸಿದ ವಿಚಾರವಾಗಿದೆ.

The post ಆಂಗ್ಲರ ವಿರುದ್ಧದ ಟೆಸ್ಟ್​ ಸರಣಿಯೇ ಇಶಾಂತ್​, ಸಹಾ ಪಾಲಿಗೆ ಕೊನೆಯಾಗಲಿದ್ಯಾ? appeared first on News First Kannada.

Source: newsfirstlive.com

Source link