ಆಂಜನೇಯ ಸ್ವಾಮಿಯ ದ್ವಾದಶ ನಾಮಾವಳಿ ಸ್ಮರಣೆಯಿಂದ ಎಲ್ಲ ಸಂಕಷ್ಟ ದೂರವಾಗುತ್ತದೆ, ಅದೃಷ್ಟವೂ ಕೈಹಿಡಿಯುತ್ತದೆ! | Chanting anjaneya swamy hanuman 12 names will bring you fortune and all difficulties will be wiped out


ಆಂಜನೇಯ ಸ್ವಾಮಿಯ ದ್ವಾದಶ ನಾಮಾವಳಿ ಸ್ಮರಣೆಯಿಂದ ಎಲ್ಲ ಸಂಕಷ್ಟ ದೂರವಾಗುತ್ತದೆ, ಅದೃಷ್ಟವೂ ಕೈಹಿಡಿಯುತ್ತದೆ!

ಆಂಜನೇಯ ಸ್ವಾಮಿಯ ದ್ವಾದಶ ನಾಮಾವಳಿ ಸ್ಮರಣೆಯಿಂದ ಎಲ್ಲ ಸಂಕಷ್ಟ ದೂರವಾಗುತ್ತದೆ, ಅದೃಷ್ಟವೂ ಕೈಹಿಡಿಯುತ್ತದೆ!

ಅಂಜನಿ ಪುತ್ರ ಬಜರಂಗಬಲಿ ಅಥವಾ ಆಂಜನೇಯ ಸ್ವಾಮಿಯ ಈ 12 ಹೆಸರುಗಳನ್ನು (12 Names of God Hanuman) ಸ್ಮರಣೆ ಮಾಡುವುದರಿಂದ ಎಲ್ಲ ಸಂಕಷ್ಟಗಳೂ ದೂರವಾಗುತ್ತವೆ, ಸುಪ್ತ ಅದೃಷ್ಟವೂ ಕೈಗೂಡುತ್ತದೆ! ಕಲಿಯುಗದಲ್ಲಿ ಹನುಮಾನ್ ಈ ಭೂಮಿಯ ಮೇಲೆ ವಾಸಿಸುತ್ತಾನೆ ಎಂಬ ಪ್ರತೀತಿ ಇದೆ. ಸಂಕಟ ನಿವಾರಕ ಆಂಜನೇಯ ತನ್ನ ಭಕ್ತರ ಪ್ರತಿಯೊಂದು ಸಮಸ್ಯೆಯನ್ನೂ ನಿವಾರಿಸುತ್ತಾನೆ. ಇದೇ ಕಾರಣಕ್ಕೆ ಸನಾತನ ಧರ್ಮದಲ್ಲಿ ಕಲಿಯುಗ ಅಂದರೆ ಪ್ರಚಲಿತ ಯುಗಧರ್ಮದಲ್ಲಿ ಆಂಜನೇಯನ ಉಪಾಸನೆಯಿಂದ ಎಲ್ಲ ಲೋಕಗಳಲ್ಲೂ ಒಳ್ಳೆಯದು ಆಗುತ್ತದೆ. ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡುವ ವಿಧಾನಗಳು ನಾನಾ ರೀತಿಯಲ್ಲಿರುತ್ತವೆ. ಅದರಲ್ಲಿ ಈ ದ್ವಾದಶ ನಾಮಾವಳಿ ಜಪಿಸುವುದರಿಂದ ಅಂದರೆ 12 ಹೆಸರುಗಳನ್ನು ಹೇಳುವುದರಿಂದ ಅದರಲ್ಲೂ ಮಂಗಳವಾರ ಸಾಯಂಕಾಲ ಜಪಿಸುವುದರಿಂದ ಅನೇಕ ಪ್ರಯೋಜನಗಳಿವೆ. ಪವನ ಸುತ ಆಂಜನೇಯ ಸ್ವಾಮಿಯ ದ್ವಾದಶ ನಾಮಾವಳಿಯನ್ನು ಬೆಳಗಿನ ವೇಳೆ, ಮಧ್ಯಾಹ್ನ, ಸಂಜೆ, ಹಾಗೂ ಮಲಗುವ ಮುನ್ನ ಪಠಣ ಮಾಡುವುದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ನೆಮ್ಮದಿ ನೆಲೆಸುತ್ತದೆ. ಸುಖ ಶಾಂತಿ ನೆಲೆಗೂಳ್ಳುತ್ತದೆ.

ಆಂಜನೇಯ ಸ್ವಾಮಿಯ ದ್ವಾದಶ ನಾಮಾವಳಿ ಹೀಗಿದೆ:
1. ಓಂ ಹನುಮಾನ್ (Om Hanuman): ಅಂಜನೇಯ ತನ್ನ ಗಲ್ಲದಲ್ಲಿ ಸೀಳು ಹೊಂದಿದ್ದಾನೆ. ಹಾಗಾಗಿ ಓಂ ಹನುಮಾನ್ ಎಂದು ಜಪಿಸುವುದರಿಂದ ಅದು ಭಕ್ತರ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ.

2. ಅಂಜನೀಸುತ (Anjani Sut): ವಾಯುಪುತ್ರನ ಈ ಹೆಸರನ್ನುಜಪಿಸುವುದರಿಂದ ಅಂಜನೀ ದೇವಿಯ ಆಶೀರ್ವಾದವೂ ಲಭಿಸುತ್ತದೆ.

3. ವಾಯುಪುತ್ರ (Vayu Putra): ಗಾಳಿಯ ಪುತ್ರ ಆಂಜನೇಯಸ್ವಾಮಿಯ ಈ ಹೆಸರನ್ನು ಜಪಿಸುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಸುತ್ತದೆ.

4. ಮಹಾಬಲ (Om Mahabal): ವಾಯುಪುತ್ರ ಅತ್ಯಂತ ಬಲಾಢ್ಯ. ಇದರಿಂದ ಧನಾತ್ಮಕ ಶಕ್ತಿ ವೃದ್ಧಿಸುತ್ತದೆ.

5. ರಾಮೇಷ್ಟ (Om Rameshtha): ಆಂಜನೇಯ ರಾಮನ ಭಕ್ತ, ಇದರಿಂದ ದೈವೀಶಕ್ತಿಗಳು ಮೇಳೈಸುತ್ತವೆ.

6. ಫಾಲ್ಗುಣ ಸಖ (Om Phalguna Sakha): ವಾಯುಪುತ್ರ ಅರ್ಜುನನ ಸ್ನೇಹಿತ. ಹಾಗಾಗಿ ಸಕಾರಾತ್ಮಕ ಸಮುದಾಯ ಬಾಧವ್ಯ ಮೂಡಿಸುತ್ತಾನೆ.

7. ಪಿಂಗಳ (Om Pingaksha): ಆಂಜನೇಯನ ಕಣ್ಣುಗಳು ಕೆಂಪು-ಕಂದು ಬಣ್ಣದ ಚುಕ್ಕೆಯಿಂದ ಕಂಗೊಳಿಸುತ್ತದೆ. ಆಂಜನೇಯ ಶತೃ ಸಂಹಾರ ಮಾಡಿ, ವಿಜಯೀಭವವಾದಾಗ ಆಂಜನೇಯನ ಕಣ್ಣುಗಳು ಹಾಗಾಗುತ್ತದೆ. ಇದರರ್ಥ ಭಕ್ತರು ಈಹೆಸರನ್ನು ಜಪಿಸುವುದರಿಂದ ಶತ್ರುಗಳನ್ನು ಗೆದ್ದು, ವಿಜಯ ಸಾಧಿಸಬಹುದು ಎಂದು.

8. ಅಮಿತ್​ ವಿಕ್ರಮ (Om Amit Vikrama): ಆಂಜನೇಯ ಅದಮ್ಯ ಚೇತನ, ಅನಂತ ಶಕ್ತಿವಂತ. ಅಂದರೆ ಭಕ್ತರು ಆಂಜನೇಯನ ಈ ಹೆಸರನ್ನು ಸ್ಮರಿಸುವುದರಿಂದ ಅವರೂ ಸಹ ಅನಂತ ಶಕ್ತಿವಂತರಾಗುತ್ತಾರೆ.

9. ಉದಧಿಕ್ರಮಣ್ (Om Uddhikaramana):
ತತ್​ ಸಮುದ್ರೋ ಅರ್ಣವ: ಅಂದರೆ ಆಂಜನೇಯ ಸಮುದ್ರವನ್ನು ಉಲ್ಲಂಘನ ಮಾಡಿದವ. ಸಮುದ್ರವನ್ನೇ ಆಕ್ರಮಣ ಮಾಡಿದವ. ಹಾಗಾಗಿ, ಆಂಜನೇಯನನ್ನು ಅರ್ಣವ ಹೆಸರಿನಿಂದ ಪೂಜಿಸಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವಷ್ಟು ಬಲಿಷ್ಠ ಶಕ್ತಿ ಭಕ್ತರಲ್ಲಿ ಮೂಡುತ್ತದೆ.

10. ಸೀತಾ ಶೋಕ ವಿನಾಶಕ (Om Sita Shoka Vinashana): ಅನಿಲ ಕಮಾರ ಅಂದರೆ ವಾಯುಪುತ್ರ ರಾಮಾಯಣದ ಕೇಂದ್ರಬಿಂದು. ನಿರಂತರ ಪ್ರಯತ್ನದಿಂದ ಸೀತೆಯ ತಂಗುದಾಣವನ್ನು ಪತ್ತೆ ಹಚ್ಚಿದ್ದ. ರಾಮನ ಸಂದೇಶವಾಹಕನಾಗಿ ಸೀತೆಯನ್ನು ಭೇಟಿ ಮಾಡಿ, ತಾನು ರಾಮನ ಭಕ್ತ ಹನುಮ ಎಂದು ಹೇಳುತ್ತಾನೆ. ಇದರಿಂದ ಸೀತಾಮಾತೆಯ ದುಃಖವನ್ನು ನೀಗುತ್ತಾನೆ. ಅಂದರೆ ಈ ಹೆಸರನ್ನು ಜಪಿಸುವುದರಿಂದ ಆಂಜನೇಯ ತನ್ನ ಭಕ್ತರ ಸಂಕಷ್ಟಗಳೆನ್ನೆಲ್ಲ ನಿವಾರಣೆ ಮಾಡುತ್ತಾನೆ ಎಂದರ್ಥ.

11. ಲಕ್ಷ್ಮಣ ಪ್ರಾಣದಾತ (Om Lakshmana Pran Data): ಆಂಜನೇಯ ಮೂರ್ತಿ ರಾಮನ ತಮ್ಮ ಲಕ್ಷ್ಮಣನಿಗೆ ಜೀವ ನೀಡಿದವನು. ರಾವಣನ ಪುತ್ರ ಮೇಘಾನಂದ ಬಿಟ್ಟ ಬಾಣದಿಂದ ಲಕ್ಷ್ಮಣ ಧರಾಶಾಯಿಯಾಗಿ ಬಿದ್ದಿರುವಾಗ ಸಂಜೀವಿನ ಪರ್ವತವನ್ನು ತಂದು ಅದರಲ್ಲಿರುವ ಆಯುರ್ವೇದದ ಗಿಡಮೂಲಿಕೆಗಳಿಂದ ಲಕ್ಷ್ಮಣನ ಪ್ರಾಣ ಕಾಪಾಡುತ್ತಾನೆ. ಎಂತಹುದೇ ದುರ್ಗಮ ಪರಿಸ್ಥಿತಿಯಲ್ಲೂ ಭಕ್ತರು ಆಂಜನೇಯನ ಈ ಹೆಸರನ್ನು ಜಪಿಸುವುದರಿಂದ ಮರುಜೀವ ಪಡೆಯಬಹುದು.

12. ದಶಗ್ರೀವ ದರ್ಪಹ (Om Dashagriva Darpaha): ರಾವಣನನ್ನು ಕಂಡರೆ ಆಂಜನೇಯನಿಗೆ ಭಯ ಎಂಬುದೇ ಇಲ್ಲ. ಅಷ್ಟೊಂದು ಧೈರ್ಯಶಾಲಿ ಆಂಜನೇಯ. ಲಂಕೆಯ ಅಸುರನನ್ನು ಕಂಡರೆ ಕಿಂಚಿತ್ತೂ ಅಳುಕಾಗಲಿ ಅಥವಾ ಹಿಂಜರಿಕೆಯಾಗಲಿ ಆಂಜನೇಯನಿಗೆ ಇರುವುದಿಲ್ಲ. ತನ್ನ ಬಾಲದ ಬೆಂಕಿಯಿಂದ ರಾವಣನ ಅಹಂ ಅನ್ನು ಸುಟ್ಟು ಭಸ್ಮ ಮಾಡಿದ ಬೃಹದಾಕಾರದವ ಆಂಜನೇಯ. ಇದರಿಂದ ಈ ಹೆಸರನ್ನು ಜಪಿಸುವ ಭಕ್ತರೂ ಸಹ ಅಸುರ ಶಕ್ತಿಗಳ ನಿರ್ನಾಮ ಮಾಡಿ, ಶತೃವಿನ ಅಹಂ ಅನ್ನು ಸುಟ್ಟು ಭಸ್ಮ ಮಾಡುವ ಶಕ್ತಿ ಪ್ರಾಪ್ತಿಯಾಗುತ್ತದೆ.

TV9 Kannada


Leave a Reply

Your email address will not be published. Required fields are marked *