ಆಂಜನೇಯ ಸ್ವಾಮಿ ಪಂಚಮುಖಿ ಅವತಾರ ಎತ್ತಿದ್ದು ಏಕೆ, ಹೇಗೆ? ಉಳಿದ ಆ ನಾಲ್ಕು ಮುಖಗಳು ಯಾವುವು? | Anjaneya swamy in panchamukhi avatar why and how know in kannada


ಆಂಜನೇಯ ಸ್ವಾಮಿ ಪಂಚಮುಖಿ ಅವತಾರ ಎತ್ತಿದ್ದು ಏಕೆ, ಹೇಗೆ? ಉಳಿದ ಆ ನಾಲ್ಕು ಮುಖಗಳು ಯಾವುವು?

ಆಂಜನೇಯ ಸ್ವಾಮಿ ಪಂಚಮುಖಿ ಅವತಾರ ಎತ್ತಿದ್ದು ಹೇಗೆ, ಏಕೆ? ಉಳಿದ ಆ ನಾಲ್ಕು ಮುಖಗಳು ಯಾವುವು?

ರಾಮ ಲಕ್ಷಣರನ್ನ ಕಾಪಾಡಬೇಕೆಂದು ಹನುಮಂತನು ತನ್ನ ಬಾಲದಿಂದ ಬೃಹತ್ ಆಕಾರದ ಕೋಟೆಯನ್ನ ಕಟ್ಟುತ್ತಾನೆ. ಆದರೆ ಮಾಯಾವಿಯಾಯಾಗಿದ್ದ ಮಹಿರಾವಣ ರಾವಣನ ಸಹೋದರ ವಿಭೀಷಣನ ರೂಪದಲ್ಲಿ ಬಂದು ಶ್ರೀರಾಮ ದರ್ಶನ ಪಡೆಯಬೇಕೆಂದು ಹನುಮಂತ ಬಾಲದಿಂದ ಕಟ್ಟಿದ ಕೋಟೆಯೊಳಗಡೆ ಪ್ರವೇಶ ಮಾಡಿ ಅಲ್ಲಿಂದಲೆ ರಾಮ ಲಕ್ಷಣರನ್ನ ಅಪಹರಿಸಿ ಪಾತಾಳ ಲೋಕಕ್ಕೆ ಎತ್ತಿಕೊಂಡು ಹೋಗುತ್ತಾನೆ.

ಹಿಂದೂ ಮಹಾಕಾವ್ಯಗಳಲ್ಲಿ (Spiritual) ಒಂದಾದ ರಾಮಾಯಣದ ಕತೆಯನ್ನ ಓದಿರುತ್ತೀರಾ.. ದೃಶ್ಯಕಾವ್ಯಗಳಲ್ಲೂ ವೀಕ್ಷಣೆ ಮಾಡಿರುತ್ತೀರಾ. ಇನ್ನು ರಾಮಾಯಣದಲ್ಲಿ ಶ್ರೀರಾಮನ ಬಳಿಕ ಕೇಳಿ ಬರುವ ಪ್ರಮುಖ ಪಾತ್ರ ವಾಯುಪುತ್ರ ಆಂಜನೇಯ. ಈತ ಶ್ರೀರಾಮನ ಮಹಾನ್ ಭಕ್ತ. ಶಿವಾಂಶ ಸಂಭೂತ. ಶಕ್ತಿ ಪರಾಕ್ರಮಗಳಲ್ಲಿ ಹಾಗೂ ಬುದ್ದಿಗೆ ಪ್ರತೀಕವೆ ಈ ಅಂಜನಿ ಪುತ್ರ ಹನುಮಂತ. ಇನ್ನು ಭಜರಂಗಿಯ ಅವತಾರಗಳಲ್ಲಿ ಪ್ರಮುಖವಾದದ್ದು ಪಂಚಮುಖಿ ಆಂಜನೇಯ ಸ್ವಾಮಿ.. (Anjaneya swamy) ಕಂಬರಾಮಾಯಣದಲ್ಲಿ ಪಂಚಮುಖಿ ಹನುಮಂತನ ಬಗ್ಗೆ ಬಹಳ ಸುಂದರವಾಗಿ ಹೇಳಲಾಗಿದೆ.. (panchamukhi avatar).

ಸೀತೆಮಾತೆಯನ್ನ ಅಪಹರಿಸಿಕೊಂಡು ಹೋದ ಲಂಕಾಧಿಪತಿ ದಶಕಂಠ ರಾವಣ ಹಾಗೂ ಭಗವಾನ್ ಶ್ರೀರಾಮ ಸೇನೆಯ ನಡುವೆ ಭಯಂಕರವಾದ ಯುದ್ಧ ನಡೆಯುತ್ತದೆ. ರಾವಣನ ಸಹೋದರ ಕುಂಭಕರ್ಣ, ರಾವಣನ ಮಗ ಇಂದ್ರಜಿತ್ ಸೇರಿದಂತೆ ಹಲವಾರು ಮಹಾನ್ ರಾಕ್ಷಸ ಯೋಧರ ವಧೆಯಾಗಿ ಹೋಗಿರುತ್ತದೆ. ಇನ್ನು ರಾಮ ರಾವಣರ ನಡುವೆ ಯುದ್ಧ ತೀವ್ರವಾಗುತ್ತಾ ಹೋಗುತ್ತದೆ. ಇನ್ನು ತನಗೆ ನರಮನುಷ್ಯ ರಾಮನಿಂದ ಸೋಲಾಗಬಾರದು ಎಂದು ಹೆದರಿದ ರಾವಣ, ಹೇಗಾದರೂ ಮಾಡಿ ರಾಮ ಲಕ್ಷ್ಮಣರ ವಧೆ ಮಾಡಿಸಬೇಕೆಂದು ಪಾತಾಳ ಲೋಕದ ಅಧಿಪತಿಯಾಗಿದ್ದ ಮಹಿರಾವಣನ ಸಹಾಯ ಪಡೆಯುತ್ತಾನೆ.

ಇನ್ನು ಇದರ ಸೂಚನೆ ಸಿಕ್ಕ ಬಳಿಕ ರಾಮ ಲಕ್ಷಣರನ್ನ ಕಾಪಾಡಬೇಕೆಂದು ಹನುಮಂತನು ತನ್ನ ಬಾಲದಿಂದ ಬೃಹತ್ ಆಕಾರದ ಕೋಟೆಯನ್ನ ಕಟ್ಟುತ್ತಾನೆ. ಆದರೆ ಮಾಯಾವಿಯಾಯಾಗಿದ್ದ ಮಹಿರಾವಣ ರಾವಣನ ಸಹೋದರ ವಿಭೀಷಣನ ರೂಪದಲ್ಲಿ ಬಂದು ಶ್ರೀರಾಮ ದರ್ಶನ ಪಡೆಯಬೇಕೆಂದು ಹನುಮಂತ ಬಾಲದಿಂದ ಕಟ್ಟಿದ ಕೋಟೆಯೊಳಗಡೆ ಪ್ರವೇಶ ಮಾಡಿ ಅಲ್ಲಿಂದಲೆ ರಾಮ ಲಕ್ಷಣರನ್ನ ಅಪಹರಿಸಿ ಪಾತಾಳ ಲೋಕಕ್ಕೆ ಎತ್ತಿಕೊಂಡು ಹೋಗುತ್ತಾನೆ. ಇನ್ನು ಈ ವಿಷಯ ತನ್ನ ಗಮನಕ್ಕೆ ಬಂದ ಕೂಡಲೇ ಹನುಮಂತನು ಪಾತಾಳಕ್ಕೆ ಜಿಗಿಯುತ್ತಾನೆ. ಅಲ್ಲಿ ಪಾತಾಳ ಲೋಕದ ಅರಮನೆಯಲ್ಲಿ ರಾಮ ಲಕ್ಷ್ಮಣರನ್ನ ಹುಡುಕುತ್ತಿರುತ್ತಾನೆ. ಇದೆ ವೇಳೆ ಪಾತಾಳ ಲೋಕದ ಐದು ದಿಕ್ಕಿನಲ್ಲಿರುವ ದೀಪಗಳನ್ನ ಒಂದೇ ಬಾರಿಗೆ ಆರಿಸಿದರೆ ಮಾತ್ರ ಮಹಿರಾವಣನ ಸಾವಾಗುತ್ತದೆ ಎಂಬ ರಹಸ್ಯ ತಿಳಿಯುತ್ತದೆ.

ಮಹಿರಾವಣನನ್ನ ಸಂಹಾರ ಮಾಡುವ ಸಲುವಾಗಿ ವಾಯುಪುತ್ರ ಹನುಮಂತನು ಪಂಚಮುಖಿ ಆಂಜನೇಯಸ್ವಾಮಿಯಾಗಿ ಅವತಾರ ತಾಳುತ್ತಾನೆ. ಪಂಚಮುಖಿ ಎಂದರೆ ಐದು ಮುಖಗಳು ಎಂದರ್ಥ. ಇದರಲ್ಲಿ ಹನುಮಂತನ ಮುಖ ಸೇರಿದಂತೆ ನರಸಿಂಹ, ವರಾಹ, ಹಯಗ್ರೀವ ಹಾಗೂ ಗರುಡ ಸೇರಿದಂತೆ ಐದು ಮುಖಗಳಾಗಿವೆ. ಆಗ ಪಂಚಮುಖಿ ಆಂಜನೇಯ ಸ್ವಾಮಿಯು ತನ್ನ ಐದು ಮುಖಗಳಿಂದಲೂ ಆ ಐದು ದೀಪಗಳನ್ನ ಒಂದೇ ಬಾರಿಗೆ ಆರಿಸಿ ರಕ್ಕಸ ಮಹಿರಾವಣನ ಅಂತ್ಯ ಮಾಡುತ್ತಾನೆ. ಬಳಿಕ ರಾಮ ಲಕ್ಷ್ಮಣರನ್ನ ತನ್ನ ಹೆಗಲ ಮೇಲೆ ಕುಳ್ಳರಿಸಿಕೊಂಡು ಭೂಮಿಗೆ ತರುತ್ತಾನೆ ಎಂಬುದು ರಾಮಾಯಣದಲ್ಲಿ ಉಲ್ಲೇಖ ಮಾಡಲಾಗಿದೆ. ಇದು ಪಂಚ ಮುಖಿ ಆಂಜನೇಯ ಸ್ವಾಮಿ ಅವತಾರದ ರಹಸ್ಯವಾಗಿದೆ.

TV9 Kannada


Leave a Reply

Your email address will not be published. Required fields are marked *