ಆಂತರಿಕ ಕಲಹದ ನಡುವೆಯೂ ಸೋದರಳಿಯನಿಗೆ ಮತ್ತೆ ಟಿಎಂಸಿಯ ಉನ್ನತ ಹುದ್ದೆ ನೀಡಿದ ಮಮತಾ ಬ್ಯಾನರ್ಜಿ | Mamata banerjee re appoints nephew abhishek banerjee as tmc national secretary amid infighting sct


ಆಂತರಿಕ ಕಲಹದ ನಡುವೆಯೂ ಸೋದರಳಿಯನಿಗೆ ಮತ್ತೆ ಟಿಎಂಸಿಯ ಉನ್ನತ ಹುದ್ದೆ ನೀಡಿದ ಮಮತಾ ಬ್ಯಾನರ್ಜಿ

ಅಭಿಷೇಕ್ ಬ್ಯಾನರ್ಜಿ

ಕೊಲ್ಕತ್ತಾ: ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಇಂದು ಹೊಸ ಪದಾಧಿಕಾರಿಗಳ ಸಮಿತಿಯನ್ನು ರಚಿಸಿದ್ದು, ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹಿರಿಯ ನಾಯಕ ಯಶವಂತ್ ಸಿನ್ಹಾ ಅವರನ್ನು ಉಪಾಧ್ಯಕ್ಷರಾಗಿ ಮರು ನೇಮಕ ಮಾಡಿದ್ದಾರೆ. ಟಿಎಂಸಿಯ ಹಿರಿಯ ನಾಯಕರಾದ ಸುಬ್ರತಾ ಬಕ್ಷಿ ಮತ್ತು ಚಂದ್ರಿಮಾ ಭಟ್ಟಾಚಾರ್ಯ ಅವರಿಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

ಇತರರ ಪೈಕಿ, ಟಿಎಂಸಿ ಸಚಿವ ಅರೂಪ್ ಬಿಸ್ವಾಸ್ ಅವರನ್ನು ಖಜಾಂಚಿಯನ್ನಾಗಿ ನೇಮಕ ಮಾಡಲಾಗಿದೆ ಮತ್ತು ಕೊಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರಿಗೆ ಸಮನ್ವಯದ ಉಸ್ತುವಾರಿ ವಹಿಸಲಾಗಿದೆ.

ಟಿಎಂಸಿ ಯುವ ನಾಯಕರ ನಡುವೆ ಹೆಚ್ಚುತ್ತಿರುವ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಕಳೆದ ವಾರ ಹಿಂದಿನ ರಾಷ್ಟ್ರೀಯ ಪದಾಧಿಕಾರಿಗಳ ಸಮಿತಿ ಮತ್ತು ಅದರೊಂದಿಗೆ ಬಂದ ಖಾತೆಗಳನ್ನು ವಿಸರ್ಜಿಸಿದ್ದರು. ನಂತರ ಅವರು 20 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದರು. ಅದರಲ್ಲಿ ತಮ್ಮ ಪಕ್ಷದ ಅನುಭವಿಗಳಿಗೆ ಸ್ಥಾನ ನೀಡಿದ್ದರು

ಆಂತರಿಕ ಭಿನ್ನಾಭಿಪ್ರಾಯದ ಚರ್ಚೆಯ ಹೊರತಾಗಿಯೂ ನಾಲ್ಕು ಪ್ರಮುಖ ಪಟ್ಟಣಗಳಿಗೆ ಮುನ್ಸಿಪಲ್ ಚುನಾವಣೆಗಳಲ್ಲಿ ಪಕ್ಷವು ಜಯ ಗಳಿಸಿದ ದಿನಗಳ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಸಭೆ ನಡೆಯಿತು.

TV9 Kannada


Leave a Reply

Your email address will not be published. Required fields are marked *