ಆಂತರಿಕ ವಿಚಾರ ನಿಮ್ಗೆ ಬೇಡ, LAC ಸಮಸ್ಯೆ ಪರಿಹರಿಸಿ -ಚೀನಾಗೆ ಭಾರತ ಎಚ್ಚರಿಕೆ

ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ರು. ಇದಕ್ಕೆ ಗುಳ್ಳೆನರಿ ಬುದ್ಧಿಯ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಚೀನಾದ ಉದ್ಧಟತನಕ್ಕೆ ತೀಕ್ಷಣವಾಗಿಯೇ ಪ್ರತಿಕ್ರಿಯಿಸಿರೋ ಭಾರತ, ನಮ್ಮ ನಾಯಕರು ಇತರೆ ರಾಜ್ಯಗಳಿಗೆ ಭೇಟಿ ನೀಡುವಂತೆ ಅರುಣಾಚಲ ಪ್ರದೇಶಕ್ಕೂ ಭೇಟಿ ನೀಡುತ್ತಾರೆ. ದೇಶದ ಆಂತರಿಕ ವಿಚಾರಕ್ಕೆ ತೆಲೆಹಾಕದಂತೆ ಚೀನಾಗೆ ಎಚ್ಚರಿಕೆ ನೀಡಲಾಗಿದೆ.

ಉದ್ಧಟತನ ಪ್ರದರ್ಶಿಸಿದ ಚೀನಾ
ಉಪ ರಾಷ್ಟ್ರಪತಿಗಳ ಈ ಭೇಟಿ ಬಗ್ಗೆ “ಚೀನಾದ ಅಧಿಕೃತ ವಕ್ತಾರರು ಟೀಕೆ ಮಾಡಿದ್ರು. ಅರುಣಾಚಲ ಪ್ರದೇಶ ಟಿಬೆಟ್‌ನ ಭಾಗವಾಗಿದ್ದು ಅದನ್ನು ಭಾರತ ಆಕ್ರಮಿಸಿದೆ. ಅರುಣಾಚಲ ಪ್ರದೇಶಕ್ಕೆ ಭಾರತೀಯ ನಾಯಕರ ಭೇಟಿಯನ್ನು ಚೀನಾ ವಿರೋಧಿಸುತ್ತದೆ. ಸದ್ಯದ ಬೆಳವಣಿಗೆಯಲ್ಲಿ ಉಪರಾಷ್ಟ್ರಪತಿಗಳು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರೋದಕ್ಕೆ ನಮ್ಮ ವಿರೋಧವಿದೆ ಎಂದಿದ್ದರು.

ಕ್ಯಾತೆಕೋರ ಚೀನಾದ ಈ ಕಪಟದ ಮಾತಿಗೆ ಭಾರತ ಕೂಡ ಅಷ್ಟೇ ತೀಕ್ಷ್ಣವಾಗಿಯೇ ಪ್ರತ್ಯುತ್ತರ ಕೊಟ್ಟಿದೆ. ನಮ್ಮ ನಾಯಕರು ಇತರೆ ರಾಜ್ಯಗಳಿಗೆ ಭೇಟಿ ನೀಡುವಂತೆ ಅರುಣಾಚಲ ಪ್ರದೇಶಕ್ಕೂ ಭೇಟಿ ನೀಡುತ್ತಾರೆ. ಇದು ನಮ್ಮ ದೇಶದ ಆಂತರಿಕ ವಿಚಾರವಾಗಿದೆ. ಈ ಕುರಿತು ತೆಲೆ ಹಾಕದಿರಲು ಚೀನಾಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.

ಚೀನಾಗೆ ಖಡಕ್ ಎಚ್ಚರಿಕೆ
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಾಮ್ ಬಾಗ್ಚಿ ತಿರುಗೇಟು ನೀಡಿದ್ದಾರೆ. ಚೀನಾದ ಇಂತಹ ಟೀಕೆಗಳನ್ನು ನಾವು ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ನಮ್ಮ ನಾಯಕರು ಇತರೆ ರಾಜ್ಯಗಳಂತೆ ಅರುಣಾಚಲ ಪ್ರದೇಶಕ್ಕೂ ಭೇಟಿ ನೀಡುತ್ತಾರೆ. ನಮ್ಮ ದೇಶದ ಆಂತರಿಕ ವಿಚಾರಕ್ಕೆ ತಲೆ ಹಾಕದಿರುವಂತೆ ಎಚ್ಚರಿಕೆ ನೀಡಿದ್ದಾರೆ.

ಪೂರ್ವ ಲಡಾಖ್ ಸೇರಿದಂತೆ ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿ ಚೀನಾ ದುರುದ್ದೇಶದಿಂದ ಆಕ್ರಮಿಸುವ ಕೆಲಸ ಮಾಡುತ್ತಿದೆ. ಇದು ನಿಜಕ್ಕೂ ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ. ಮೊದಲು ಚೀನಾ ಇದನ್ನ ಅರಿತುಕೊಂಡು ಸರಿಪಡಿಸಿಕೊಳ್ಳಬೇಕೆೇಂದು ಅರಿಂದಾಮ್ ಬಾಗ್ಚಿ ಎಚ್ಚರಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *