ಆಂಧ್ರಪ್ರದೇಶದ ವಿಶಾಖಪಟ್ಟಣಂ: ವಿಷಕಾರಿ ಅನಿಲ ಸೋರಿಕೆಯಾಗಿ 140 ಜನರು ಅಸ್ವಸ್ಥ | Visakhapatnam Gas Leak: 140 People Affected, Many Fall Unconscious


ಆಂಧ್ರಪ್ರದೇಶದ ವಿಶಾಖಪಟ್ಟಣಂ: ವಿಷಕಾರಿ ಅನಿಲ ಸೋರಿಕೆಯಾಗಿ 140 ಜನರು ಅಸ್ವಸ್ಥ

ವಿಷಾ ಅನಿಲ ಸೋರಿಕೆಯಾಗಿ ಅಸ್ವಸ್ಥಗೊಂಡ ಮಹಿಳೆ

ವಿಷಕಾರಿ ಅನಿಲ ಸೋರಿಕೆಯಾಗಿ 140 ಜನರು ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅಚ್ಚುತಪುರಂನಲ್ಲಿ ನಡೆದಿದೆ. ಶುಕ್ರವಾರ ವಿಶಾಖಪಟ್ಟಣಂನ ಅಚ್ಚುತಪುರಂನಲ್ಲಿರುವ ಪೋರಸ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ವಿಷಕಾರಿ ಅನಿಲ ಸೋರಿಕೆಯಾಗಿದೆ.

ನವದೆಹಲಿ: ವಿಷಕಾರಿ ಅನಿಲ ಸೋರಿಕೆಯಾಗಿ (toxic gas leak)  140 ಜನರು ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂ (Visakhapatnam) ಜಿಲ್ಲೆಯ ಅಚ್ಚುತಪುರಂನಲ್ಲಿ ನಡೆದಿದೆ. ಶುಕ್ರವಾರ ವಿಶಾಖಪಟ್ಟಣಂನ ಅಚ್ಚುತಪುರಂನಲ್ಲಿರುವ ಪೋರಸ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ (gas leakage from Porus laboratories Pvt Ltd) ವಿಷಕಾರಿ ಅನಿಲ ಸೋರಿಕೆಯಾಗಿದೆ. ಪರಿಣಾಮ ಅನೇಕ ಮಹಿಳಾ ಕಾರ್ಮಿಕರು ವಿಷಾ ಅನಿಲ ಸೇವಿಸಿ ಅಸ್ವಸ್ತಗೊಂಡಿದ್ದಾರೆ.

 ಅಸ್ವಸ್ಥಗೊಂಡ 140 ಜನರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.  ವಿಷಾ ಅನಿಲ ಸೋರಿಕೆಯ ಹಿಂದಿನ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಎಂದು ವಿಶಾಖಪಟ್ಟಣಂ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಲಕ್ಷ್ಮಣ್ ಸ್ವಾಮಿ ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಇದನ್ನು ಓದಿ: ಅಂತರಾಷ್ಟ್ರೀಯ ಸಂಬಂಧದಲ್ಲೂ ಮತ ಬ್ಯಾಂಕ್ ರಾಜಕಾರಣ: ಅಮೆರಿಕದ ವರದಿಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ಪೋರಸ್ ಲ್ಯಾಬೊರೇಟರೀಸ್‌ನಲ್ಲಿ ಅನಿಲ ಸೋರಿಕೆಯಿಂದ ಅಚ್ಯುತಪುರಂ ಪ್ರದೇಶದಲ್ಲಿನ ವಿಶೇಷ ಆರ್ಥಿಕ ವಲಯದ (ಎಸ್‌ಇಝಡ್) ಪಕ್ಕದ ಸಂಸ್ಥೆಯ ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ. ಪೀಡಿತ ಜನರು ವಾಂತಿ, ತಲೆನೋವು ಮತ್ತು ಕಣ್ಣು ಉರಿಯಿಂದ ಬಳಸಲುತ್ತಿದ್ದಾರೆ.  ಎಲ್ಲ ನೌಕರರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ ಮಾರಣಾಂತಿಕವಲ್ಲ ಎಂದು ಅನಕಾಪಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗೌತಮಿ ಸಾಲಿ ಹೇಳಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣಂ ಅನಿಲ ಸೋರಿಕೆ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

ಇದನ್ನು ಓದಿ: ಬಾವಿಗೆ ಇಳಿದು ನೀರು ಕೊಂಡೊಯ್ಯುವ ಪರಿಸ್ಥಿತಿ, ಅಯ್ಯೋ ಈ ಗ್ರಾಮದ ಜನರ ಸ್ಥಿತಿ ಕೇಳುವವರು ಯಾರು?

ಕಂಪನಿಯ ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಬಾಧಿತ ನೌಕರರನ್ನು ಅಚ್ಯುತಪುರಂನಲ್ಲಿರುವ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅನಕಪಲ್ಲಿಯ ಎನ್‌ಟಿಆರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು ಎಲ್ಲಾ 1,800 ಉದ್ಯೋಗಿಗಳನ್ನು ಪರೀಕ್ಷಿಸುತ್ತಿದ್ದಾರೆ. ಘಟನೆಯ ನಂತರ, ಬ್ರಾಂಡಿಕ್ಸ್ ಕೆಲಸವನ್ನು ಸ್ಥಗಿತಗೊಳಿಸಿತು ಮತ್ತು ಎಲ್ಲಾ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತು. 1,000 ಎಕರೆ ಪ್ರದೇಶದಲ್ಲಿರುವ ಕಂಪನಿಯಲ್ಲಿ 1,800 ಮಂದಿ ಕೆಲಸ ಮಾಡುತ್ತಿದ್ದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *