ಆಂಧ್ರ ರಾಜಕೀಯ ನಾಯಕರಿಗೆ ಕೈ ಮುಗಿದು ಮನವಿ ಮಾಡಿ Jr NTR ಹೇಳಿದ್ದೇನು..?


ಹೈದರಾಬಾದ್: ರಕ್ತಸಿಕ್ತ ರಾಜಕಾರಣಕ್ಕೇ ಕುಖ್ಯಾತಿ ಪಡೆದಿರುವ ಆಂಧ್ರದಲ್ಲಿ ಸಿಎಂ ಜಗನ್ ಮೋಹನ್​ ರೆಡ್ಡಿ ಹಾಗೂ ಮಾಜಿ ಸಿಎಂ, ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ನಡುವಿನ ಕಾಳಗ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ನಿನ್ನೆ ವಿಧಾನಸಭೆಯಲ್ಲಿ ಮಾಜಿ ಸಿಎಂ ಎನ್​​​ಟಿಆರ್​ ಪುತ್ರಿ, ಚಂದ್ರಬಾಬು ನಾಯ್ಡು ಅವರ ಪುತ್ರಿ ಭುವನೇಶ್ವರಿ ಅವರ ನಡತೆಯ ಬಗ್ಗೆ ಮಾತನಾಡಿದ್ದು, ಎರಡು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ವಾಕ್​​​ ಯುದ್ಧಕ್ಕೆ ಕಾರಣವಾಗಿದೆ. ಈ ಘಟನೆ ಕುರಿತಂತೆ ನಟ ಜ್ಯೂ.ಎನ್​​ಟಿಆರ್​ ಪ್ರತಿಕ್ರಿಯೆ ನೀಡಿದ್ದು, ಆಂಧ್ರ ರಾಜಕೀಯ ನಾಯಕರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಯಲಲಿತಾ ಮಾಡಿದ್ದ ಶಪಥ ನೆನಪಿಸಿತು ನಾಯ್ಡು ಕಣ್ಣೀರು; ಜಗನ್ ವಿರುದ್ಧ ತೊಡೆ ತಟ್ಟಲು ಕಾರಣ ಏನು ಗೊತ್ತಾ..?

ಭುವನೇಶ್ವರಿ ಅವರ ವೈಯಕ್ತಿಕ ತೇಜೋವಧೆಗೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜ್ಯೂ.ಎನ್​ಟಿಆರ್​.. ಮಾತು ನಮ್ಮ ನಡೆಯ ಪ್ರತೀಕವಾಗಿದೆ. ರಾಜಕೀಯದಲ್ಲಿ ವಿಮರ್ಶೆ, ಟೀಕೆಗಳು ಸಾಮಾನ್ಯ. ಆದರೆ ಇಂತಹ ವಿಮರ್ಶೆಗಳು ಜನರ ಸಮಸ್ಯೆ ಬಗ್ಗೆ ಆಗಬೇಕೆ ವಿನಃ.. ವೈಯುಕ್ತಿಕವಾಗಿ ಇರಬಾರದು.

ನಿನ್ನೆ ಅಸೆಂಬ್ಲಿಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತೀವ್ರ ದುಃಖವಾಗಿದೆ. ಯಾವಾಗ ಜನರ ಸಮಸ್ಯೆಗಳನ್ನು ಪಕ್ಕ ಇಟ್ಟು ವೈಯುಕ್ತಿಕ ನಿಂದನೆಗೆ ಇಳಿಯುತ್ತಿದ್ದಾರೆ ಎಂದರೇ ಅದು, ಕೆಟ್ಟ ಆಡಳಿತದ ಸೂಚಕವಾಗಿದೆ. ಮುಖ್ಯವಾಗಿ ಮಹಿಳೆಯರ ಬಗ್ಗೆ ಪುರುಷರ ಪದಜಾಲದೊಂದಿಗೆ ಮಾತನಾಡುತ್ತಿದ್ದಾರೆ ಅದು ಅತ್ಯಂತ ಕೆಟ್ಟ ಆಡಳಿತ ಸಂಕೇತ. ಆದರೆ ಇದು ನಮ್ಮ ಸಂಸ್ಕೃತಿ ಅಲ್ಲ. ಮಹಿಳೆಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿಯ ಮುಖ್ಯಭಾಗ. ಆದರೆ ಅದನ್ನು ನಾಶ ಪಡಿಸಿ ಬರೋ ಯುವ ಜನತೆಗೆ ಹೊಸ ಹಾದಿ ಹಾಕುತ್ತಿದ್ದೇವೆ ಎಂದರೇ ಅದು ನಾವು ಮಾಡುತ್ತಿರುವ ದೊಡ್ಡ ತಪ್ಪು.

ಇದನ್ನೂ ಓದಿ: ಗಳಗಳನೇ ಕಣ್ಣೀರಿಟ್ಟ ಚಂದ್ರಬಾಬು ನಾಯ್ಡು- ಮತ್ತೆ ಸಿಎಂ ಆಗಿಯೇ ಅಸೆಂಬ್ಲಿಗೆ ಬರ್ತೀನಿ ಅಂತ ಶಪಥ

ನಾನು ಈ ಮಾತುಗಳನ್ನು ಒಬ್ಬ ಮಗನಾಗಿ, ಹೆಣ್ಣು ಮಗುವಿನ ತಂದೆಯಾಗಿ, ಜವಾಬ್ದಾರಿಯುತ ಪ್ರಜೆಯಾಗಿ ಮಾತನಾಡುತ್ತಿದ್ದು, ರಾಜಕೀಯ ನಾಯಕರಿಗೆ ಇಂತಹ ಅರಾಚಕತೆ ಸಂಸ್ಕೃತಿಯನ್ನು ಇಲ್ಲಿಗೆ ನಿಲ್ಲಿಸಿ. ಜನರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ. ಇಂತಹ ಘಟನೆಗಳು ಇಲ್ಲಿಗೆ ನಿಲ್ಲುತ್ತದೆ ಎಂದು ಭಾವಿಸುತ್ತಿದ್ದೇನೆ ಎಂದು ಕೈ ಮುಗಿದು ಮನವಿ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *