ಬೆಂಗಳೂರು: ಆ್ಯಂಬುಲೆನ್ಸ್ ಡ್ರೈವರ್ಗಳು ಹಣಕ್ಕೆ ಡಿಮ್ಯಾಂಡ್ ಇಟ್ರೆ ಬಲಿ ಹಾಕ್ತೀವಿ ಅಂತ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ನ್ಯೂಸ್​​ಫಸ್ಟ್  ಜೊತೆ ಮಾತನಾಡಿದ ಅವರು, ಈಗಾಗಲೇ ನಾಲ್ವರು ಆ್ಯಂಬುಲೆನ್ಸ್ ಡ್ರೈವರ್ ಗಳನ್ನ ಅರೆಸ್ಟ್ ಮಾಡಿದ್ದೀವಿ. ನಾಳೆಯಿಂದ ಕಠಿಣ ನಿಯಮ ಅನ್ವಯ ಆಗತ್ತೆ ಎಂದರು. ಇನ್ನು ನಾಳೆ ನಿರ್ಮಾಣ ಕಾಮಗಾರಿಗಳು ಒಪನ್ ಇರತ್ತೆ. ಆದ್ರೆ ಯಾವುದೇ ಅಂಗಡಿ ಮುಂಗಟ್ಟು ತೆರೆದಿರಲ್ಲ ಎಂದು ಅವರು ಹೇಳಿದ್ರು.

ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಹೊಸದಾಗಿ ಎರಡು ಕಡೆ ಚಿತಾಗಾರ ಮಾಡಲಾಗಿದೆ. ತಾವರಕೆರೆ ಬಳಿಯ ಗಿಡ್ಡೆನಹಳ್ಳಿಯಲ್ಲಿ ಒಂದು ಚಿತಾಗಾರ ಮಾಡಲಾಗಿದೆ. ಆದ್ರೆ ಚಿತಾಗಾರ ದೂರ ಇದೆ ಅಂತ ಆಂಬುಲೆನ್ಸ್ ಡ್ರೈವರ್ಗಳು ಇಲ್ಲಿಗೆ ಬರ್ತಿಲ್ಲ ಅನ್ನೊ ಮಾಹಿತಿ ಇದೆ.  ಹಣಕ್ಕೆ ಯಾರಾದ್ರು ಬೇಡಿಕೆ ಇಟ್ಟು ದಂಧೆ ಮಾಡಲಿಕ್ಕೆ ಹೋದ್ರೆ ಅವರನ್ನ ಬಲಿ ಹಾಕ್ತೀವಿ ಎಂದು ಖಡಕ್ ಎಚ್ಚರಿಕೆ ಕೊಟ್ಟರು.

The post ಆಂಬುಲೆನ್ಸ್ ಡ್ರೈವರ್ಗಳು ಹಣಕ್ಕೆ ಡಿಮ್ಯಾಂಡ್ ಇಟ್ರೆ ಬಲಿ ಹಾಕ್ತೀವಿ -ಅಶೋಕ್ ವಾರ್ನಿಂಗ್ appeared first on News First Kannada.

Source: News First Kannada
Read More