ವಿಕಟಕವಿ ನಿರ್ದೇಶಕ ಯೋಗ್ರಾಜ್ ಭಟ್ ಗಣೇಶ್ ಜೊತೆ ಗಾಳಿಪಟ ಹಾರಿಸೋಕೂ ಮುಂಚೆ..”ಗರಡಿ” ಮನೆಯಲ್ಲಿ ನಿಂತಿದ್ದಾರೆ..ಅಷ್ಟಕ್ಕೂ ಭಟ್ರು ಗಾಳಿಪಟ ಹಾರಿಸೋದ ಬಿಟ್ಟು ಅದ್ಯಾವ ಕಾರಣಕ್ಕೆ ‘ಗರಡಿ’ ಮನೆ ಸೇರಿದ್ರು.. ಭಟ್ಟರ ಜೊತೆ ಯಾರ್ಯಾರು ‘ಗರಡಿ’ಮನೆಯಲ್ಲಿ ನಿಂತಿದ್ದಾರೆ?
ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಸದ್ಯ ಗಣಪನ ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಗಾಳಿಪಟ 2 ಶೂಟಿಂಗ್ ಮುಗಿಸಿರುವ ಭಟ್ರು ಸಿನಿಮಾ ರಿಲೀಸ್ ಆಗೋಕೆ ಮೊದಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ..ಅಲ್ಲದೆ ಭಟ್ಟರು ಹೊಸ ಚಿತ್ರದ ಟೈಟಲ್ ಮತ್ತು ನಾಯಕನ ರಿವೀಲ್ ಮಾಡಿ ಅಭಿಮಾನಿಗಳಿಗೆ ಕನ್ಪ್ಯೂಸ್ ಮಾಡಿದ್ದಾರೆ..
ಯೆಸ್..ಭಟ್ಟರ ಮುಂದಿನ ಸಿನಿಮಾ ಟೈಟಲ್ “ಗರಡಿ”.. ಈ ಪವರ್ ಪುಲ್ ಹೆಸರಿನ ಚಿತ್ರಕ್ಕೆ ನಟ ಯಶಸ್ ಸೂರ್ಯನನ್ನು ನಾಯಕನಾಗಿ ಭಟ್ಟರು ಆಯ್ಕೆ ಮಾಡ್ಕೊಂಡಿದ್ದಾರೆ..ಮುಂಗಾರು ಮಳೆ ಚಿತ್ರದ ನಂತ್ರ ಸ್ಟಾರ್ ನಟರು ಹಾಗೂ ಹೊಸ ನಟರಿಗೆ ಸಿನಿಮಾ ಮಾಡಿ ಗೆದ್ದಿರುವ ಭಟ್ರು.ಈಗ ಮತ್ತೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.. ಸಾಕಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ರು ಗೆಲುವು ಕಾಣದ ನತದೃಷ್ಟ ನಟ ಯಶಸ್ ಸೂರ್ಯನಿಗೆ ‘ಗರಡಿ’ ಚಿತ್ರದ ಮೂಲಕ ಹೊಸ ಹಣೆಬರಹ ಬರೆಯಲು ಭಟ್ರು ಸಜ್ಜಾಗಿದ್ದಾರೆ.
ಬಹಳ ದಿನಗಳ ಹಿಂದೇಯೆ ಭಟ್ರು ಸ್ಯಾಂಡಲ್ವುಡ್ನ ಕೌರವ ಸಚಿವ ಬಿ.ಸಿ ಪಾಟೀಲ್ ಜೊತೆ ಇರುವ ಫೊಟೋ ಶೇರ್ ಮಾಡಿ.. ಕೌರವೇಶ್ವರನ ಬ್ಯಾನರ್ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ್ರು.. ಆಗಿನಿಂದಲೂ ಭಟ್ಟರ ಹೊಸ ನಡೆಯ ಬಗ್ಗೆ ಕುತೂಹಲ ಮೂಡಿತ್ತು.. ಅದ್ರೆ ಈಗ ಭಟ್ರು ಯಶಸ್ ಸೂರ್ಯ ಜೊತೆ ‘ಗರಡಿ’ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ..
ಸದ್ಯಕ್ಕೆ ಭಟ್ರು ಗರಡಿ ಸಿನಿಮಾ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಟ್ಟಿಲ್ಲ.. ಚಿತ್ರದ ಟೈಟಲ್ ಹಾಗೂ ನಾಯಕನ ಬಗ್ಗೆ ಮಾತ್ರ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.. ಅದೇನೆ ಇರಲಿ ಸಾಲು ಸಾಲು ಸಿನಿಮಾಗಳನ್ನು ಮಾಡಿ ಸೋತಿರುವ ಯಶಸ್ ಸೂರ್ಯಗೆ ಯೋಗ್ರಾಜ್ ಭಟ್ ಅವರ ‘ಗರಡಿ’ಯಲ್ಲಾದರೂ ಗೆದ್ದು ನಿಲ್ಲುತ್ತಾರಾ ರಂದು ಕಾದು ನೋಡಬೇಕು.