ಆಕ್ಟ್-1978' ಕನ್ನಡ ಸಿನಿಮಾ ಇದೀಗ ಬಾಲಿವುಡ್ ಗೆ ರೀಮೇಕ್ ಆಗುತ್ತಿದೆ. ಆಕ್ಟ್ ಸಿನಿಮಾದ ರೀಮೇಕ್‌ ಹಕ್ಕು ಬಾಲಿವುಡ್ ಗೆ ಮಾರಾಟವಾಗಿದ್ದು, ಹಿಂದಿಯಲ್ಲಿ ನಮ್ಮ ಕನ್ನಡ ಸಿನಿಮಾ ಮರು ನಿರ್ಮಾಣವಾಗಲಿದೆ. 

ಆಗಾಜ್ ಎಂಟರ್ಟೈನ್ ಮೆಂಟ್ ಮಾಲೀಕ ನೀರಜ್ ತಿವಾರಿ ಡಬ್ಬಿಂಗ್ ರೈಟ್ಸ್ ಖರೀದಿಸಿದ್ದು, ಶಿವ ಆರ್ಯನ್ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ನಾನು ನೋಡಿದೆ, ಬಹಳ ಇಷ್ಟವಾಯಿತು,ಹೀಗಾಗಿ ಹಿಂದಿಯಲ್ಲು ರಿಮೇಕ್ ಮಾಡಲು ನಾನು ನಿರ್ಧರಿಸಿದೆ ಎಂದು ತಿವಾರಿ ತಿಳಿಸಿದ್ದಾರೆ.

ಇದು ಮಹಿಳಾ ಪ್ರಧಾನ ಸಿನಿಮಾವಾಗಿದೆ, ಇದು ಹಿಂದಿ ಸಿನಿಮಾದಲ್ಲಿ ಇತಿಹಾಸ ಬರೆಯಲಿದೆ ಎಂದು ಹೇಳಿದ್ದಾರೆ. ಇನ್ನೂ ಈ ಸಿನಿಮಾಗೆ ನಾಯಕಿಯರಿಗಾಗಿ ಶೋಧ ನಡೆಸಿದ್ದೇವೆ, ತಾಪ್ಸಿ ಪನ್ನು ಅಥನಾ ಭೂಮಿ ಪಡ್ನೆಕರ್ ಈ ಪಾತ್ರಕ್ಕೆ ನ್ಯಾಯ ಒದಗಿಸಲಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಕನ್ನಡದಲ್ಲಿ ಉತ್ತಮ ಪ್ರದರ್ಶನ ಕಂಡಿರುವ ಈ ಸಿನಿಮಾವನ್ನು ರಿಮೇಕ್ ಮಾಡಲು ನಮ್ಮ ತಂಡ ಬಹಳ ಉತ್ಸುಕವಾಗಿದೆ, ಹಿಂದಿಯಲ್ಲೂ ಬ್ಲಾಕ್ ಬಸ್ಟರ್ ಆಗಲಿದೆ ಎಂದು ತಿಳಿಸಿದ್ದಾರೆ.

ಆಕ್ಟ್-1978' ಚಿತ್ರದಲ್ಲಿ ಅನೇಕ ಅನುಭವಿ ಕಲಾವಿದರು ಕಾಣಿಸಿಕೊಂಡಿದ್ದರು. ಬಿ.ಸುರೇಶ, ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಅಚ್ಯುತ್‌ ಕುಮಾರ್, ಅವಿನಾಶ್‌, ಸುಧಾ ಬೆಳವಾಡಿ, ಶ್ರುತಿ, ಶೋಭರಾಜ್, ಎಚ್‌.ಜಿ. ದತ್ತಾತ್ರೇಯ, ಆರ್‌ಜೆ ನೇತ್ರಾ, ಬಾಲ ರಾಜ್‌ವಾಡಿ ಹೀಗೆ ಅನೇಕರು ಬಣ್ಣ ಹಚ್ಚಿದ್ದರು. ಚಿತ್ರವನ್ನು ದೇವರಾಜ್‌ ಅವರು ನಿರ್ಮಾಣ ಮಾಡಿದ್ದರು. ಇದರ ಸ್ಕ್ರಿಪ್ಟ್ ಅನ್ನು ವೀರೇಂದ್ರ ಮಲ್ಲಣ್ಣ, ದಯಾನಂದ ಟಿ.ಕೆ., ಮಂಸೋರೆ ಸೇರಿ ಬರೆದಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More