ಆಕ್ಷನ್ ದೃಶ್ಯದ ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್​ನ ಖ್ಯಾತ ನಟ; ಈಗ ಹೇಗಿದೆ ಆರೋಗ್ಯ ಸ್ಥಿತಿ? | Randeep Hooda injured while filming Inspector Avinash details inside


ಆಕ್ಷನ್ ದೃಶ್ಯದ ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್​ನ ಖ್ಯಾತ ನಟ; ಈಗ ಹೇಗಿದೆ ಆರೋಗ್ಯ ಸ್ಥಿತಿ?

ರಣದೀಪ್ ಹೂಡ (ಸಂಗ್ರಹ ಚಿತ್ರ)

ಖ್ಯಾತ ಬಾಲಿವುಡ್ ನಟ ರಣದೀಪ್ ಹೂಡ ತಮ್ಮ ಪಾತ್ರ ಪೋಷಣೆಗೆ ಹೆಸರಾದವರು. ಪಾತ್ರಕ್ಕಾಗಿ ತಮ್ಮ ಗೆಟಪ್ ಬದಲಿಸಲೂ ಅವರು ಹಿಂದೆ ಮುಂದೆ ನೋಡುವವರಲ್ಲ. ಇದೀಗ ನಟ ತಮ್ಮ ಚೊಚ್ಚಲ ವೆಬ್ ಸೀರೀಸ್​ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇನ್ಸ್ಪೆಕ್ಟರ್ ಅವಿನಾಶ್’ನಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರು ಚಿತ್ರೀಕರಣ ನಡೆಸುವಾಗ ಗಾಯಗೊಂಡಿದ್ದಾರೆ. ಸೆಟ್​ನಲ್ಲಿದ್ದವರು ರಣದೀಪ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರೂ ಕೂಡ ರಣದೀಪ್ ಅದನ್ನು ನಿರಾಕರಿಸಿದ್ದಾರೆ. ಅಲ್ಲದೇ ಚಿತ್ರೀಕರಣ ಮುಂದುವರೆಸಿದ್ದಾರೆ. ತಮ್ಮಿಂದಾಗಿ ಚಿತ್ರೀಕರಣ ನಿಲ್ಲಬಾರದು ಎಂದು ಅವರು ಕಾಳಜಿ ತೋರಿದ್ದಾರೆ. ಆ ದಿನದ ಚಿತ್ರೀಕರಣ ಮುಗಿದ ನಂತರವೇ ರಣದೀಪ್ ಆಸ್ಪತ್ರೆಗೆ ತೆರಳಿದ್ದಾರೆ. ರಣದೀಪ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

TV9 Kannada


Leave a Reply

Your email address will not be published.