ಲಕ್ನೋ: ಕೊರೊನಾ ಸೋಂಕಿತರು ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಬಹದ್ದೂರ್​​ಗಾಂಜ್ ಪ್ರದೇಶದ ಶಹಜಹಾನ್​​ಪುರದಲ್ಲಿ ರೋಗಿಗಳನ್ನು ಅರಳಿ ಮರದ ಕೆಳಗೆ ಮಲಗಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮರದ ಕೆಳಗೆ ಕರೆತಂದಿದ್ದಾರೆ. ಇಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲ. ಇಲ್ಲಿಗೆ ಬಂದ ಬಳಿಕ ಉಸಿರಾಡಲು ಸುಲಭ ಎನಿಸುತ್ತಿದೆ ಎಂದು ಸ್ಥಳೀಯ ಮಹಿಳೆಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ಕುಟುಂಬ 6ಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, ಆಕ್ಸಿಜನ್​​ಗಾಗಿ ಎಲ್ಲರೂ ಮರದ ಕೆಳಗೆ ಕ್ಯಾಪ್ ಹಾಕಿದ್ದಾರೆ.

ಘಟನೆ ಕುರಿತಂತೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಶಾಸಕ ರೋಷನ್​​ಲಾಲ್​​ ವರ್ಮಾ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಆರೋಗ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕೂಡಲೇ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್​ ಮಾಡುವಂತೆ ಆದೇಶ ನೀಡಿದ್ದಾರೆ.

The post ಆಕ್ಸಿಜನ್​​ಗಾಗಿ ರೋಗಿಗಳೊಂದಿಗೆ ಅರಳಿ ಮರದ ಕೆಳಗೆ ಕ್ಯಾಂಪ್ ಹಾಕಿ ಕುಟುಂಬಸ್ಥರು appeared first on News First Kannada.

Source: newsfirstlive.com

Source link