ಚಾಮರಾಜನಗರ: ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್​.. ಆಕ್ಸಿಜನ್​ನಿಂದ ಸಾವನ್ನಪ್ಪಿದವರು ಕೇವಲ 3 ಮಂದಿ ಸಾವನ್ನಪ್ಪಿದ್ದಾರೆಂದು ಜಿಲ್ಲಾಡಳಿತ ಹೇಳಿದೆ ಎಂದಿದ್ದಾರೆ. ಅಲ್ಲದೇ ಇದು ಪ್ರಾಥಮಿಕ ಮಾಹಿತಿ ಮಾತ್ರ. ಈ ಕುರಿತು ತನಿಖೆ ನಡೆಯಲಿದೆ ಎಂದಿದ್ದಾರೆ.

ಇದು ನಿಜವಾಗಿಯೂ ಬಹಳ ದುಃಖದ ಸಂಗತಿ.. ಚಾಮರಾಜಗನರ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 24 ಜನ ಕೋವಿಡ್​ಗೆ ದುರ್ಮರಣ ಆಗಿರುವುದು ನೋವು ತಂದಿದೆ. ಕುಟುಂಬದ ಜನರಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಕುಟುಂಬದವರಿಗೆ ಸಾಂತ್ವನದ ಜೊತೆಗೆ ಸರ್ಕಾರದ ಸಹಕಾರವೂ ಇದೆ. ಸಿಎಂ ಕೂಡ ಘಟನೆಯ ಬಗ್ಗೆ ಫೋನ್​ನಲ್ಲಿ ಮಾತಾಡಿ ಸಮಗ್ರ ತನಿಖೆ ಮಾಡೋಣ ಅಂದ್ರು.
ಬೆಳಗ್ಗೆ 3.30 ರವರೆಗೂ ಅಧಿಕಾರಿಗಳ ಜೊತೆ ಮಾತಾಡ್ತಿದ್ದೆ. ರಾತ್ರಿ 12 ಗಂಟೆವರೆಗೂ ಆಕ್ಸಿಜನ್ ಡ್ರೈ ಆಗಿರಲಿಲ್ಲ. ನನ್ನ ಹೇಳಿಕೆಯಿಂದ ತನಿಖೆಗೆ ಅಡ್ಡಿಯಾಗದಿರಲಿ.. ಹೀಗಾಗಿ ಹೆಚ್ಚು ಮಾತಾಡೋದಿಲ್ಲ. ಯಾರಿಂದ ತಪ್ಪಾಗಿದೆ ಅದು ಹೊರಗೆ ಬರಲಿ.. ಸರ್ಕಾರ ಯಾರನ್ನೂ ರಕ್ಷಣೆ ಮಾಡೋದಿಲ್ಲ.

ಆಸ್ಪತ್ರೆಯಲ್ಲಿ ಒಟ್ಟಾರೆ ದಾಖಲಾದವರು 123 ಮಂದಿ ಎಲ್ಲರೂ ಕೋವಿಡ್​ ಪೇಶೆಂಟ್​ಗಳು. ಇವರಲ್ಲಿ 14 ಜನ ವೆಂಟಿಲೇಟರ್​ನಲ್ಲಿದ್ದಾರೆ. ಎನ್​ಐನಲ್ಲಿರುವವರು 36, ಹೈಫ್ಲೋ ಆಕ್ಸಿಜನ್​ನಲ್ಲಿರುವವರು 58, ನಾಮರ್ಲ್ ಆಕ್ಸಿಜನ್ ಪಡೆಯುತ್ತಿರುವವರು 28 ಜನ ಇದ್ದಾರೆ.
ವೈದ್ಯರು ಕೊಟ್ಟ ಮಾಹಿತಿ ಪ್ರಕಾರ ನಿನ್ನೆ ಬೆಳಗ್ಗೆ 7 ರಿಂದ ಮಧ್ಯರಾತ್ರಿ 12 ರವರೆಗೆ ಕೋವಿಡ್​ನಿಂದ 14 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲ 14 -16 ದಿನಗಳಿಂದ ಕೊರೊನಾ ತೀವ್ರವಾದ ಮೇಲೆ ಆಸ್ಪತ್ರೆಗೆ ಬಂದಿದ್ದು ಕೋವಿಡ್​ನ ಸಹಜ ಖಾಯಿಲೆಯಿಂದ ತೀರ್ಕೊಂಡಿದ್ದಾರೆ.

ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 3 ರವರೆಗೆ 3 ಜನ ಅಸುನೀಗಿದ್ದಾರೆ. ಮುಂಜಾನೆ 3 ರಿಂದ ಬೆಳಗ್ಗೆ 7 ಗಂಟೆವರೆಗೆ 7 ರೋಗಿಗಳು ಅಸುನೀಗಿದ್ದಾರೆ. 24 ಗಂಟೆಯಲ್ಲಿ 23 ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಾಮಗೆರೆಯಲ್ಲಿ ಒಬ್ಬರು ತೀರ್ಕೊಂಡಿದ್ದಾರೆ. ಆಕ್ಸಿಜನ್​ನಿಂದ ತೀರಿಕೊಂಡವರು ಜಿಲ್ಲಾಡಳಿತದ ಪ್ರಕಾರ 3 ರೋಗಿಗಳು ಮಾತ್ರ. ಇದು ಪ್ರಾಥಮಿಕವಾಗಿ ವೈದ್ಯರು ಜಿಲ್ಲಾಡಳಿತ ಮಾಹಿತಿ ಕೊಟ್ಟಿರೋದು. ಒಂದು ಸಾವಿಗೂ ಬೆಲೆ ಇದೆ. ಈ ದುರ್ಘಟನೆ ಬಹಳ ನೋವು ತಂದಿದೆ.. ಇದರ ಸತ್ಯಾಸತ್ಯತೆ ಹೊರಬರಲಿ ಎಂದಿದ್ದಾರೆ.

The post ಆಕ್ಸಿಜನ್​ ಕೊರತೆಯಿಂದ ಸಾವನ್ನಪ್ಪಿದ್ದು 3 ರೋಗಿಗಳು ಮಾತ್ರ- ಡಾ. ಸುಧಾಕರ್ appeared first on News First Kannada.

Source: newsfirstlive.com

Source link