ಬೆಂಗಳೂರು:  ಕ್ಯಾಪ್ ಜೆಮಿನಿ ಟೆಕ್ನಾಲಜಿ ಸರ್ವಿಸಸ್ ಇಂಡಿಯಾ ಲಿ., ವತಿಯಿಂದ ಸಿ.ಎಸ್.ಆರ್ ಯೋಜನೆಯಡಿ ವಿಕ್ಟೋರಿಯಾ ಹಾಗೂ ಚರಕ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ 400 ಎಲ್​.ಎಂ.ಪಿ.ಆಕ್ಸಿಜನ್​ ಘಟನಕಗಳನ್ನ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಉದ್ಘಾಟಿಸಿದ್ರು.

ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ, ತಾವು ಉದ್ಘಾಟಿಸಿದ ಬಗ್ಗೆ ಬರೆದಿದ್ದಾರೆ. ಅಲ್ಲದೇ, ಇದೇ ಸಂದರ್ಭದಲ್ಲಿ 108 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು. ಈ ವೇಳೆ, ಅಲ್ಲಿ ಆರೋಗ್ಯ ಸಚಿವ, ಡಾ.ಕೆ.ಸುಧಾಕರ್​, ಕ್ಯಾಪ್ ಜೆಮಿನಿ ಸಂಸ್ಥೆಯ ಹಿರಿಯ ನಿರ್ದೇಶಕ ವಿಶ್ವನಾಥ್ ರಾಜೇಂದ್ರ ಹಾಗೂ ಮುರಳಿ ಶಂಕರನಾರಾಯಣನ್ ಮತ್ತಿತರರು ಈ ಉದ್ಘಾಟನೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

 

The post ಆಕ್ಸಿಜನ್​ ಘಟಕಗಳನ್ನ ಉದ್ಘಾಟಿಸಿದ CM ಯಡಿಯೂರಪ್ಪ; ಕೊರೊನಾ 3ನೇ ಅಲೆ ತಡೆಗೆ ಸಿದ್ಧತೆ appeared first on News First Kannada.

Source: newsfirstlive.com

Source link