ಆಕ್ಸಿಜನ್‌ ದುರಂತ: ಚಾಮರಾಜನಗರಕ್ಕಿಂದು ನಿವೃತ್ತ ನ್ಯಾ. ಬಿ.ಎ.ಪಾಟೀಲ್ ಭೇಟಿ

ಆಕ್ಸಿಜನ್‌ ದುರಂತ: ಚಾಮರಾಜನಗರಕ್ಕಿಂದು ನಿವೃತ್ತ ನ್ಯಾ. ಬಿ.ಎ.ಪಾಟೀಲ್ ಭೇಟಿ

ಚಾಮರಾಜನಗರ:  ಆಕ್ಸಿಜನ್‌ ದುರಂತ ಪ್ರಕರಣ ಸಂಬಂಧ ತನಿಖೆ ನಡೆಸಲು ಇಂದು ಚಾಮರಾಜನಗರಕ್ಕೆ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಭೇಟಿ ನೀಡಲಿದ್ದಾರೆ.

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಮೇ 2ರ ರಾತ್ರಿ ಆಕ್ಸಿಜನ್ ಅಭಾವ ಉಂಟಾಗಿತ್ತು. ಬೆಳಗ್ಗೆ ಹೊತ್ತಿಗೆ ಆಸ್ಪತ್ರೆಯಲ್ಲಿನ 24 ರೋಗಿಗಳು ಸಾವನ್ನಪ್ಪಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಸೂಕ್ತ ಆಕ್ಸಿಜನ್ ಪೂರೈಕೆ ಮಾಡದ್ದಕ್ಕೆ ಖಂಡನೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪ್ರಕರಣದ ನ್ಯಾಯಾಂಗ ತನಿಖೆಗಾಗಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರನ್ನ ನೇಮಿಸಿತ್ತು.

ಘಟನೆ ನಡೆದ 29 ದಿನಗಳ ಬಳಿಕ ಇಂದು ಪಾಟೀಲ್​ ಅವರು ಮೊದಲ ಬಾರಿಗೆ ಚಾಮರಾಜನಗರಕ್ಕೆ ಭೇಟಿ ನೀಡ್ತಿದ್ದಾರೆ. ಮಧ್ಯಾಹ್ನ 1.30ಕ್ಕೆ ಅವರು ಜಿಲ್ಲಾಸ್ಪತ್ರೆ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಿದ್ದಾರೆ.

ಈಗಾಗಲೇ ಹೈಕೋರ್ಟ್​ನಿಂದ ನೇಮಕಗೊಂಡಿದ್ದ ನಿವೃತ್ತ ನ್ಯಾ. ವೇಣುಗೋಪಾಲಗೌಡ ನೇತೃತ್ವದ ಕಾನೂನು‌ ಸೇವಾ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಪ್ರಕರಣದ ಬಗ್ಗೆ ಮಧ್ಯಂತರ ವರದಿ ನೀಡಿದೆ. ಆಕ್ಸಿಜನ್ ಕೊರತೆಯೇ ದುರಂತಕ್ಕೆ ಕಾರಣ ಎಂದು ಈ ಸಮಿತಿ ಉಲ್ಲೇಖ ಮಾಡಿದೆ.

 

The post ಆಕ್ಸಿಜನ್‌ ದುರಂತ: ಚಾಮರಾಜನಗರಕ್ಕಿಂದು ನಿವೃತ್ತ ನ್ಯಾ. ಬಿ.ಎ.ಪಾಟೀಲ್ ಭೇಟಿ appeared first on News First Kannada.

Source: newsfirstlive.com

Source link