ಚಾಮರಾಜನಗರ:  ಜಿಲ್ಲಾಸ್ಪತ್ರೆಯಲ್ಲಿ ಮೊನ್ನೆ ಆಕ್ಸಿಜನ್ ಕೊರತೆ ಉಂಟಾಗಿ 20ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದು, ಇಂದು ಕೂಡ ಸಾವಿನ ಸರಣಿ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 10 ಸೋಂಕಿತರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮುರುಗೇಶ್ ನ್ಯೂಸ್​​ಫಸ್ಟ್ಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾ‌ ಕೋವಿಡ್ ಆಸ್ಪತ್ರೆಗೆ ಆಕ್ಸಿಜನ್ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಇದೆ. ಆದ್ರೆ ಬೆಡ್​ಗಳು ಇಲ್ಲ, ಸಂಪೂರ್ಣ ಭರ್ತಿಯಾಗಿದೆ. ಸಾವನಪ್ಪಿರುವ ಹತ್ತು ಮಂದಿ ಪೈಕಿ ಮೂವರು ತಡವಾಗಿ ಬಂದಿದ್ದರಿಂದ ಸಾವಾಗಿದೆ. ಉಳಿದವರು ಕೋವಿಡ್ ಜೊತೆಗೆ ಇತರೆ ಅನಾರೋಗ್ಯದ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಐವತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ- ಶಾಸಕ ಪುಟ್ಟರಂಗಶೆಟ್ಟಿ
ಆಸ್ಪತ್ರೆಯಲ್ಲಿ ಇಂದು ಐವತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ. ನರ್ಸ್‌ಗಳು ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ. ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ ಅವರು, ಆಕ್ಸಿಜನ್ ದುರಂತದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯುತ್ತೆ ಅನ್ನೋದು ಅನುಮಾನ‌. ತನಿಖೆಯ ನೇತೃತ್ವ ವಹಿಸಿರುವ ಶಿವಯೋಗಿ ಕಳಸದ್ ಕೇಳೋದು ನೋಡಿದ್ರೆ ಪಾರದರ್ಶಕವಾಗಿ ನಡೆಯಲ್ಲ ಎಂದು ಆರೋಪ ಮಾಡಿದ್ರು.

ದುರಂತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ‌.  ಆಸ್ಪತ್ರೆಗೆ ಅಗತ್ಯ ಬೆಡ್‌ಗಳ ಸೌಲಭ್ಯ ಇಲ್ಲ‌. ಬೆಡ್‌ಗಳು ಸಂಪೂರ್ಣ ಭರ್ತಿಯಾಗಿವೆ. ನಾವು 250 ಬೆಡ್‌ಗಳನ್ನ ಕೇಳಿದ್ದೇವೆ. ಅಷ್ಟೂ ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಬೇಕು ಎಂದರು.

The post ಆಕ್ಸಿಜನ್ ಇದೆ, ಆದ್ರೆ ಬೆಡ್​​ ಸಮಸ್ಯೆ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 10 ರೋಗಿಗಳ ಸಾವು appeared first on News First Kannada.

Source: newsfirstlive.com

Source link