ಬೆಂಗಳೂರು: ಚಾಮರಾಜನಗರದ ದುರಂತ ಬೆನ್ನಲ್ಲೆ ಬೆಂಗಳೂರಿನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ನಗರದ ಅರ್ಕ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಆಕ್ಸಿಜನ್ ಸಿಗದೆ ಇಬ್ಬರು ಸೋಂಕಿತರು ನರಳಿ ನರಳಿ ಸಾವನ್ನಪ್ಪಿದ್ದಾರೆ.

ತಡರಾತ್ರಿ 12.30ರ ಸುಮಾರಿಗೆ ಆಕ್ಸಿಜನ್ ಖಾಲಿಯಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಅಸುನೀಗಿದ್ದಾರೆ. ಇದೇ ವೇಳೆ ಸೋನು ಸೂದ್​ ಚಾರಿಟೆಬಲ್ ಟ್ರಸ್ಟ್​ ಸದಸ್ಯರು ಸೂಕ್ತ ಸಮಯಕ್ಕೆ ನೆರವಿಗೆ ಧಾವಿಸಿ, ಮತ್ತಷ್ಟು ದೊಡ್ಡ ಅನಾಹುತವಾಗದಂತೆ ತಪ್ಪಿಸಲು ನೆರವಾಗಿದ್ದಾರೆ.

ಹಶ್ಮತ್, ಸೋನು ಸೂದ್ ಚಾರಿಟಬಲ್ ಟ್ರಸ್ಟ್​​ಗಾಗಿ ಕಾರ್ಯನಿರ್ವಹಿಸುತ್ತಿರುವವರು

ಆಕ್ಸಿಜನ್ ಖಾಲಿಯಾಗುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಯಲಹಂಕ ‌ನ್ಯೂ ಟೌನ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಅವರಿಗೆ ಕರೆ ಮಾಡಿದ್ದರು. ಹೀಗಾಗಿ ಆಸ್ಪತ್ರೆ ಬಳಿ ಬಂದ ಇನ್ಸ್ಪೆಕ್ಟರ್ ಸೋನು ಸೂದ್ ಚಾರಿಟಬಲ್ ಟ್ರಸ್ಟ್​​​ ಸದಸ್ಯರಿಗೆ ಕರೆ ಮಾಡಿ ಆಕ್ಸಿಜನ್ ಮುಗಿದ ವಿಚಾರ ತಿಳಿಸಿದ್ದರು. ಇನ್ಸ್ಪೆಕ್ಟರ್ ಕರೆಗೆ ಸ್ಪಂದಿಸಿದ ಚಾರಿಟಬಲ್ ಟ್ರಸ್ಟ್ ಸಿಬ್ಬಂದಿ ಕೂಡಲೇ 11 ಆಕ್ಸಿಜನ್ ಸಿಲಿಂಡರ್ ತಂದು 10 ಸೋಂಕಿತರ ಪ್ರಾಣ ಉಳಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

The post ಆಕ್ಸಿಜನ್ ಇಲ್ದೆ ಬೆಂಗಳೂರಲ್ಲಿ ಇಬ್ಬರ ಸಾವು, 10 ಸೋಂಕಿತರ ಪ್ರಾಣ ಉಳಿಸಿದ ಸೋನು ಸೂದ್​ ಟ್ರಸ್ಟ್​​ appeared first on News First Kannada.

Source: newsfirstlive.com

Source link