ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ತಿಂಗಳಾಂತ್ಯದ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ನಲ್ಲಿ ಮಾತನಾಡಿದ್ರು. ಮೊದಲಿಗೆ ಅವರು , ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡ ಎಲ್ಲ ಜನರಿಗೂ ಸಂತಾಪ ಸೂಚಿಸಿದ್ರು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದ್ರು.

ಮೋದಿ ಮನ್​ ಕೀ ಬಾತ್​ ಹೈಲೈಟ್ಸ್​:

ಈ ವಿಪತ್ತಿನ ಸಮಯದಲ್ಲಿ, ಚಂಡಮಾರುತಪೀಡಿತ ರಾಜ್ಯಗಳ ಜನರು ಧೈರ್ಯ ತೋರಿಸಿದರು. ತಾಳ್ಮೆ ಮತ್ತು ಶಿಸ್ತಿನೊಂದಿಗೆ ಹೋರಾಡಿದರು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಅವರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಅವರೆಲ್ಲರಿಗೂ ನನ್ನ ಸಲ್ಯೂಟ್.

ಎರಡನೇ ಕೊರೊನಾ ಅಲೆ​ ಸಮಯದಲ್ಲಿ, ದೂರದ ಪ್ರದೇಶಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವುದು ಒಂದು ಪ್ರಮುಖ ಸವಾಲಾಗಿತ್ತು. ಇದನ್ನ ಎದುರಿಸಲು, ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್‌ಗಳ ಚಾಲಕರು ಯುದ್ಧದ ಮಾದರಿಯಲ್ಲಿ ಕೆಲಸ ಮಾಡುವ ಮೂಲಕ  ಲಕ್ಷಾಂತರ ಜನರ ಜೀವಗಳನ್ನು ಉಳಿಸಿದ್ರು.

ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿನ ಮಹಿಳಾ ಚಾಲಕರೊಂದಿಗೆ ಮಾತನಾಡಿದ ಮೋದಿ, ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನ ಸಂಪೂರ್ಣವಾಗಿ ಮಹಿಳೆಯರೇ ಚಾಲನೆ ಮಾಡ್ತಿದ್ದಾರೆ ಎಂಬ ವಿಚಾರ ಕೇಳಿ ಎಲ್ಲಾ ತಾಯಂದಿರು ಮತ್ತು ಸಹೋದರಿಯರು ಹೆಮ್ಮೆ ಪಡುತ್ತಾರೆ. ದೇಶದ ಪ್ರತಿಯೊಬ್ಬ ಮಹಿಳೆ ಆ ಬಗ್ಗೆ ಹೆಮ್ಮೆಪಡುತ್ತಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ ಎಂದು ಹೇಳಿದ್ರು

 

 

 

The post ಆಕ್ಸಿಜನ್ ಎಕ್ಸ್​​ಪ್ರೆಸ್​​ನ ಮಹಿಳೆಯರು ಚಾಲನೆ ಮಾಡ್ತಿದ್ದಾರೆ, ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ -ಮೋದಿ appeared first on News First Kannada.

Source: newsfirstlive.com

Source link