ಬೆಂಗಳೂರು: ಓರ್ವ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಬಳಲುತ್ತಿರುವ ತನ್ನ ಅತ್ತೆಯನ್ನು ಉಳಿಸಲು ಕೊಯಮತ್ತೂರಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಬುಕ್ ಮಾಡಿ ತರಿಸಿ ಕೊಂಡೊಯ್ಯುವ ವೇಳೆ ಪೊಲೀಸರು ಗಾಡಿ ಸೀಜ್ ಮಾಡಿ ಮನವಿ ಮಾಡಿಕೊಂಡರೂ ಬಿಡದ ಘಟನೆ ನಡೆದಿದೆ.

ಶಕೀಲ್​ ಹವಾಲ್ದಾರ್ ಎಂಬಾತ ಬುಕ್ ಮಾಡಿದ್ದ ಕಾನ್ಸಂಟ್ರೇಟ್​ರ್​ನ್ನು ಬೆಳಗ್ಗೆ ಡ್ರೈವರ್ ಹೇಮಂತ್ ತೆಗೆದುಕೊಂಡು ಬರುವ ವೇಳೆ ಪೊಲೀಸರು ಕಾರ್ ಅಡ್ಡಹಾಕಿದ್ದಾರೆ. ಈ ವೇಳೆ ಆಕ್ಸಿಜನ್ ಕಾನ್ಸಂಟ್ರೇಟರ್​ ತೆಗೆದುಕೊಂಡು ಹೋಗ್ತಿರೋದಾಗಿ ಹೇಮಂತ್ ಹೇಳಿದ್ರೆ ನಮಗೆ ಕಾನ್ಸಂಟ್ರೇಟರ್​ ಅಂದ್ರೆ ಗೊತ್ತಿಲ್ಲ ಎಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇನ್ಸ್​ಪೆಕ್ಟರ್, ಹಲಸೂರು ಗೇಟ್ ಎಸಿಪಿಗೆ ಹೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಕೀಲ್ ಹವಾಲ್ದಾರ್ ಹೇಳಿದ್ದಾರೆ. ಅಲ್ಲದೇ ನಮ್ಮ ಅತ್ತೆಯ ಪರಿಸ್ಥಿತಿ ತುಂಬಾ ಕ್ರಿಟಿಕಲ್ ಇದೆ ಎಂದರೂ ಪೊಲೀಸರು ಬಿಟ್ಟಿಲ್ಲ ಎನ್ನಲಾಗಿದೆ. ಇನ್ನು ಮಧ್ಯಾಹ್ನ 2:29ಕ್ಕೆ ವಾಟ್ಸ್​ಆ್ಯಪ್ ಮೂಲಕ ಎಸಿಪಿಗೆ ಮೆಸೇಜ್ ಮಾಡಿದ್ರೂ ಸಹ ರಿಪ್ಲೈ ಬಂದಿಲ್ಲವಂತೆ. ಈ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿದ ನಂತರ ಪೊಲೀಸರು ಕಾರ್​ನ್ನು ಬಿಟ್ಟುಕಳುಹಿಸಿದ್ದಾರೆ.

The post ಆಕ್ಸಿಜನ್ ಕಾನ್ಸಂಟ್ರೇಟರ್ ಇದ್ದ ಕಾರ್ ಸೀಜ್.. ಎಮರ್ಜೆನ್ಸಿ ಸರ್ ಅಂದ್ರೂ ಬಿಡದ ಪೊಲೀಸ್ appeared first on News First Kannada.

Source: newsfirstlive.com

Source link