ಚಾಮರಾಜನಗರ: ಆಕ್ಸಿಜನ್ ಕೊರತೆ ಉಂಟಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 23 ಕೊರೊನಾ ಸೋಂಕಿತರು ಹಾಗೂ ಮತ್ತೋರ್ವ ನಾನ್ ಕೋವಿಡ್​ ರೋಗಿ ಸೇರಿ 24 ಮಂದಿ ಸಾವನ್ನಪ್ಪಿದ ಪ್ರಕರಣದ ಕುರಿತು ಇಂದಿನಿಂದ ವಿಚಾರಣೆ ಆರಂಭವಾಗಲಿದೆ.

ಈ ಕೇಸ್​ನ ವಿಚಾರಣಾಣಾಧಿಕಾರಿಯಾಗಿ ಐಎಎಸ್​ ಅಧಿಕಾರಿ, ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ್​​ರನ್ನ ನೇಮಿಸಲಾಗಿದೆ. ಇಂದು ಕಳಸದ್ ಚಾಮರಾಜನಗರಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳಲ್ಲಿ ವಿಚಾರಣೆ ನಡೆಸಿ ವರದಿ ನೀಡುವಂತೆ ಸರ್ಕಾರ ಕಳಸದ್​ ಅವರಿಗೆ ಸೂಚಿಸಿದೆ.

ಆಸ್ಪತ್ರೆಯಲ್ಲಿ ಮೂರು ಜನರು ಮಾತ್ರ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಉಳಿದವರಿಗೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ಚಾಮರಾಜನಗರ ಜಿಲ್ಲಾಡಳಿತ ಹೇಳುತ್ತಿದೆ. ಇನ್ನು ಸಾವಿನ ಸಂಖ್ಯೆ 24 ಅಲ್ಲ 34 ಎಂದು ವಿಪಕ್ಷ ಶಾಸಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಆಕ್ಸಿಜನ್ ಕೊರತೆಗೆ ಕಾರಣವೇನು? ಎಲ್ಲಾ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿದ್ದಾ? ಘಟನೆಗೆ ಹೊಣೆ ಯಾರು? ಘಟನೆಗೆ ನಿಜವಾಗಿ ಕಾರಣ ಯಾರು..? ಎಂಬಿತ್ಯಾದಿ ಕೋನಗಳಲ್ಲಿ ಕಳಸದ್​ ವಿಚಾರಣೆ ನಡೆಸಲಿದ್ದಾರೆ.

ಇನ್ನು ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11 ಗಂಟೆಗೆ ಆಗಮಿಸಲಿದ್ದು, ಡಿಕೆ ಶಿವಕುಮಾರ್ ರಸ್ತೆ ಮೂಲಕ ಚಾಮರಾಜನಗರಕ್ಕೆ ಬರಲಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲಿರುವ ಉಭಯ ನಾಯಕರು, ಬಳಿಕ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

The post ಆಕ್ಸಿಜನ್ ಕೊರತೆ ದುರಂತ ಪ್ರಕರಣ: ಇಂದಿನಿಂದ ಕಳಸದ್​​ರಿಂದ ವಿಚಾರಣೆ ಆರಂಭ appeared first on News First Kannada.

Source: newsfirstlive.com

Source link