ಬೆಂಗಳೂರು: ಕೊರೊನಾಗೆ ರಾಜ್ಯದಲ್ಲಿ‌ ಆಕ್ಸಿಜನ್ ಕೊರತೆಯಾಗಿರುವ ವಿಚಾರವಾಗಿ ಇಂದು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯಕ್ಕೆ 100 ಮೆ.ಟನ್ ಹೆಚ್ಚುವರಿ ಆಕ್ಸಿಜನ್ ಪೂರೈಸಲಾಗುವುದು.. ಒಟ್ಟು 962 ಮೆ.ಟನ್ ಆಕ್ಸಿಜನ್ ಪೂರೈಸಲಾಗುವುದು ಎಂದು ಹೈಕೋರ್ಟ್ ಗೆ ಎಎಸ್ ಜಿ ಎಂ.ಬಿ.ನರಗುಂದ್ ಹೇಳಿಕೆ ನೀಡಿದರು.

ಅಲ್ಲದೇ.. 2 ಪಿಎಸ್ಎ ಆಕ್ಸಿಜನ್ ತಯಾರಿಕಾ ಘಟಕ ನೀಡಲಾಗಿದೆ. ವಿದೇಶದಿಂದ ಬಂದ 150 ಆಕ್ಸಿಜನ್ ಸಿಲಿಂಡರ್​ಗಳನ್ನು ಕರ್ನಾಟಕಕ್ಕೆ ನೀಡಲಾಗುವುದೆಂದು ಕೇಂದ್ರ ಸರ್ಕಾರ ಕೋರ್ಟ್​ಗೆ ಹೇಳಿಕೆ ನೀಡಿದೆ. ಈ ಬಗ್ಗೆ ತಿಳಿಸಲು‌ ನಿನ್ನೆ ಹೈಕೋರ್ಟ್ ಹೈಕೋರ್ಟ್ ಮುಖ್ಯ ಪೀಠ ಸೂಚಿಸಿತ್ತು. ಇಲ್ಲವಾದಲ್ಲಿ ಅಗತ್ಯ ಆದೇಶ ಮಾಡುವುದಾಗಿ ಎಚ್ಚರಿಸಿತ್ತು

ಕರ್ನಾಟಕಕ್ಕೆ 1200 ಮೆ.ಟನ್ ಆಕ್ಸಿಜನ್ ಒದಗಿಸಿ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.. ರಾಜ್ಯದಲ್ಲಿ ನಿತ್ಯ ಗರಿಷ್ಠ 1792 ಮೆಟ್ರಿಕ್ ಟನ್ ಮತ್ತು ಕನಿಷ್ಠ 1462 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಈಗಾಗಲೇ ಆಕ್ಸಿಜನ್ ಕೊರತೆಯಿಂದ ಅನೇಕ ರೋಗಿಗಳು ಸಾವನ್ನಪ್ಪಿದ್ದಾರೆ.. ಇಂತಹ ಗಂಭೀರ ಪರಿಸ್ಥಿತಿ ಪರಿಗಣಿಸಿ, ರಾಜ್ಯ ಸರ್ಕಾರ ಒಂದು ವಾರದವರೆಗೆ ನಿತ್ಯ ಅಗತ್ಯವಿರುವ ಪ್ರಮಾಣದ ಆಕ್ಸಿಜನ್ ಪೂರೈಸಲು ಕೋರಿ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಮನವಿ ಸಲ್ಲಿಸಬೇಕು. ಅದನ್ನು ನಾಲ್ಕು ದಿನಗಳಲ್ಲಿ ಕೇಂದ್ರ ಸರ್ಕಾರ ಪರಿಗಣಿಸಬೇಕು. ಅಲ್ಲಿಯವರೆಗೆ ನಿತ್ಯ 1200 ಮೆಟ್ರಿಕ್ ಟನ್ ಪೂರೈಕೆ ಮತ್ತು ಬಳಕೆಗೆ ಅನುಮತಿ ನೀಡಬೇಕು. ಸರ್ಕಾರದ ಮನವಿ ಪರಿಣಮಿಸುವ ವೇಳೆ, ಮಹಾರಾಷ್ಟ್ರಕ್ಕೆ ಅನುಮತಿ ನೀಡಿದಂತೆ ಕರ್ನಾಟಕದಲ್ಲಿ ಉತ್ಪಾದಿಸಿದ ಆಕ್ಸಿಜನ್ ಅನ್ನು ಬಳಕೆ ಮಾಡಲು ಅನುಮತಿ ನೀಡುವುದರ ವಿಚಾರವನ್ನೂ ಪರಿಗಣಿಸಬೇಕು. ಹಾಗೆಯೇ, ರೆಮ್ ಡಿಸಿವಿರ್ ಅನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸುವ ಬಗ್ಗೆ ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

The post ಆಕ್ಸಿಜನ್ ಕೊರತೆ: ರಾಜ್ಯದ ಮನವಿಯನ್ನ 4 ದಿನಗಳಲ್ಲಿ ಪರಿಗಣಿಸಿ.. ಕೇಂದ್ರಕ್ಕೆ ಹೈಕೋರ್ಟ್ ಸೂಚನೆ appeared first on News First Kannada.

Source: newsfirstlive.com

Source link