ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಹೈಕೋರ್ಟ್​ಗೆ ಸರ್ಕಾರದ ಪರ ವಕೀಲ ಎಜಿ ಪ್ರಭುಲಿಂಗ ನಾವದಗಿ ಮೃತ 24 ಸೋಂಕಿತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ನೀಡುವುದಾಗಿ ಹೇಳಿದರು.

ಈ ಹೇಳಿಕೆಯನ್ನ ದಾಖಲಿಸಿಕೊಂಡ ಹೈಕೋರ್ಟ್ ಪೀಠ ಘೋಷಣೆಯನ್ನ ಅದಷ್ಟೂ ಬೇಗ ಪೂರೈಕೆ ಮಾಡಿ.. ಪರಿಹಾರದ ಪ್ರಮಾಣವನ್ನ ಆನಂತರ ವಿಚಾರಣೆ ಮಾಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಸದ್ಯ ವಿಚಾರಣೆಯನ್ನ ಹೈಕೋರ್ಟ್ ಪೀಠ ಮುಂದೂಡಿಕೆ ಮಾಡಿದೆ.

The post ಆಕ್ಸಿಜನ್ ದುರಂತ ಕೇಸ್​: 24 ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡ್ತೇವೆಂದ ಸರ್ಕಾರ appeared first on News First Kannada.

Source: newsfirstlive.com

Source link