ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಮೃತಪಟ್ಟವರ 36 ಜನರ ಕುಟುಂಬಕ್ಕೂ ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ಪರಿಹಾರ ನೀಡಲಾಗಿದೆ. ಚಾಮರಾಜನಗರ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಇದೇ ವೇಳೆ ಚೆಕ್​ ವಿತರಣೆ ಮಾಡಲಾಗುತ್ತಿದೆ.

ಇನ್ನು ಶಿವಕುಮಾರ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಸಾಥ್ ಸಾಥ್ ನೀಡಿದ್ದಾರೆ. ಶಿವಕುಮಾರ್ ನೇತೃತ್ವದ ತಂಡ ಮೊದಲು ಹನೂರು ತಾಲೂಕು ಚನ್ನಿಪುರದದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಮೃತ ರಂಗಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿತು.

ಬಳಿಕ ಮಾತನಾಡಿದ ಶಿವಕುಮಾರ್​.. ಇದು ಸಹಜ ಸಾವಲ್ಲ, ಸರ್ಕಾರ ಮಾಡಿದ ಕೊಲೆ. 36 ಮಂದಿ ಸಾವಿಗೆ ಸರ್ಕಾರವೇ ನೇರ ಹೊಣೆ. ಘಟನೆಗೆ ಕಾರಣರಾದವರ ಒಬ್ಬರ ಮೇಲು ಇದುವರೆಗೂ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಬೇಕಿತ್ತು. ಅವರಿಗೆ ಭಯ, ಜನರು ಆಕ್ರೋಶಗೊಂಡಿದ್ದಾರೆ. ರೊಚ್ಚಿಗೆದ್ದು ಹೊಡೆಯುತ್ತಾರೆ ಎಂದು ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ಇದೆ. ಯಾವ ಬಿಜೆಪಿ ಸಚಿವನೂ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ ಎಂದು ಗುಡುಗಿದರು.

The post ಆಕ್ಸಿಜನ್ ದುರಂತ ಪ್ರಕರಣ; 36 ಕುಟುಂಬಕ್ಕೆ ತಲಾ ₹1 ಲಕ್ಷ ಪರಿಹಾರ ವಿತರಿಸಿದ ಕೆಪಿಸಿಸಿ appeared first on News First Kannada.

Source: newsfirstlive.com

Source link