ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ವೇಗಿ, ಐಪಿಎಲ್ ವೀಕ್ಷಕ ವಿವರಣೆಗಾರ ಬ್ರೆಟ್ ಲೀ ಭಾರತದಲ್ಲಿ ಆಕ್ಸಿಜನ್ ಪೂರೈಕೆಗೆ 1 ಬಿಟ್ ಕಾಯಿನ್(ಅಂದಾಜು 40 ಲಕ್ಷ) ರೂಪಾಯಿ ದೇಣಿಗೆ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರತ ನನ್ನ 2ನೇ ಮನೆಯಿದ್ದಂತೆ. ಸದ್ಯ ಎದುರಾಗಿರುವ ಪರಿಸ್ಥಿತಿ ನೋಡಿ ಬಹಳ ಸಂಕಟವಾಗುತ್ತಿದೆ ಎಂದು ಲೀ ಹೇಳಿದ್ದಾರೆ. ಕ್ರಿಫ್ಟೋ ರಿಲೀಫ್ ಮೂಲಕ ದೇಣಿಗೆ ಹಣ ಭಾರತಕ್ಕೆ ತಲುಪುವಂತೆ ಮಾಡಲು ನಿರ್ಧರಿಸಿದ್ದಾರೆ. ಕೊರೊನಾದಿಂದ ಬಳಲುತ್ತಿರುವ ಭಾರತಕ್ಕೆ ಮಿಡಿದ ಬ್ರೆಟ್ ಲೀ ಅವರು ಹಣದ ಸಹಾಯವನ್ನು ಮಾಡಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಸಹಾಯ ನಿಧಿಗೆ 50,000 ಅಮೆರಿಕನ್ ಡಾಲರ್ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್‍ರಿಂದ ಸ್ಫೂರ್ತಿ ಪಡೆದು ಲೀ ಹಣ ಸಹಾಯ ಮಾಡಿದ್ದಾರೆ. ಬ್ರೆಟ್ ಲೀ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

The post ಆಕ್ಸಿಜನ್ ಪೂರೈಕೆಗೆ 41 ಲಕ್ಷ ರೂ. ಭಾರತಕ್ಕೆ ದೇಣಿಗೆ ನೀಡಿದ ಬ್ರೆಟ್ ಲೀ appeared first on Public TV.

Source: publictv.in

Source link