ಮೈಸೂರು: ಮೈಸೂರಿನಲ್ಲಿ ಆಕ್ಸಿಜನ್ ಕೊರತೆ ಎದುರಾದ ಹಿನ್ನೆಲೆ ಆಕ್ಸಿಜನ್ ಸರಬರಾಜು ಏಜೆನ್ಸಿಗಳಿ ಬೇರೆ ಕಡೆ ಆಕ್ಸಿಜನ್ ನೀಡದಂತೆ ಕಡಿವಾಣ ಹಾಕಲು ಮೈಸೂರು ಸಂಸದ ಪ್ರತಾಪ್ ಸಿಂಹ ನೂತನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಆಕ್ಸಿಜನ್ ಸರಬರಾಜು ಏಜೆನ್ಸಿ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು ಹಾಕಲು ಮುಂದಾಗಿದ್ದು ಒಟ್ಟು 8 ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದ್ದಾರೆ. 4 ಏಜೆನ್ಸಿಗಳಿಗೆ ತಲಾ 2 ಸಿಸಿ ಕ್ಯಾಮೆರಾಗಳನ್ನ ಹಾಕಲು ನಿರ್ಧರಿಸಿದ್ದು 24*7 ಮೊಬೈಲ್ ಮೂಲಕ ಮಾನಿಟರ್ ಮಾಡಲಿದ್ದಾರಂತೆ.

ಮೈಸೂರಿನ ಆಸ್ಪತ್ರೆಗಳಿಗೆ ಕೋಟಾ ನಿಗದಿ ಮಾಡಲಾಗಿದ್ದು ಅದನ್ನು ಹೊರತುಪಡಿಸಿ ಬೇರೆ ಕಡೆ ಸರಬರಾಜು ಮಾಡದಂತೆ ಕಣ್ಗಾವಲಿಡಲು ಸಿಸಿಟಿವಿ ಮೊರೆ ಹೋಗಿದ್ದಾರೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.

 

The post ಆಕ್ಸಿಜನ್ ಪೂರೈಕೆ ದಾರಿತಪ್ಪದಂತೆ ಎಚ್ಚರ ವಹಿಸಲು ಪ್ರತಾಪ್ ಸಿಂಹ ಹೊಸ ತಂತ್ರ appeared first on News First Kannada.

Source: newsfirstlive.com

Source link