ಆಕ್ಸಿಜನ್ ಪೂರೈಸಿ, ಕೊರೊನಾ ಸೋಂಕಿತರ ನೆರವಿಗೆ ನಿಂತ ಸ್ಯಾಂಡಲ್​​ವುಡ್ ವಾರಿಯರ್ಸ್

ಆಕ್ಸಿಜನ್ ಪೂರೈಸಿ, ಕೊರೊನಾ ಸೋಂಕಿತರ ನೆರವಿಗೆ ನಿಂತ ಸ್ಯಾಂಡಲ್​​ವುಡ್ ವಾರಿಯರ್ಸ್

ಸ್ಯಾಂಡಲ್​​ವುಡ್​ ನಟ-ನಟಿಯರು, ನಿರ್ದೇಶಕರು ಹಾಗೂ ಹಲವು ಕಲಾವಿದರನ್ನೊಳಗೊಂಡ ವಾರಿಯರ್ಸ್ ​ತಂಡ ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗ್ತಿದೆ.

ನಟ ಸಂಚಾರಿ ವಿಜಯ್, ಸಾಧು ಕೋಕಿಲ, ನಟಿ ಅಕ್ಷತ ಪಾಂಡವಪುರ, ನೀತು, ಸಂಗೀತ ನಿರ್ದೇಶಕ ಡಾ ಕಿರಣ್ ತೋಟಂಬೈಲು, ನಿರ್ದೇಶಕರಾದ ಕವಿರಾಜ್, ದಿನಕರ್ ತೂಗುದೀಪ್, ಕವಿತಾ ಲಂಕೇಶ್ ಮುಂತಾದವರು ಸೇರಿ ಅವಶ್ಯಕತೆ ಇರುವ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಮುಂದಾಗಿದ್ದಾರೆ.

ಉಸಿರು ಕೋವಿಡ್ ಆಕ್ಸಿಜನ್ ಕೇರ್ ಟೀಂ ನಿನ್ನೆಯಿಂದ ಆಕ್ಸಿಜನ್ ಪೂರೈಕೆಯಲ್ಲಿ ತೊಡಗಿದೆ. ಕೊರೊನಾ ಸೋಂಕಿತರು ಇರುವಲ್ಲೇ ಹೋಗಿ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಮೂಲಕ ಪ್ರಾಣವಾಯು ಪೂರೈಕೆ ಮಾಡಿ ಅನೇಕ ರೋಗಿಗಳ ಜೀವ ಉಳಿಸಲು ನೆರವಾಗಿದ್ದಾರೆ. ಸಂಗೀತ ನಿರ್ದೇಶಕ ಡಾ.ಕಿರಣ್ ತೋಟಂಬೈಲು ಅವರಿಂದ, ಸೋಂಕಿತರ ಆರೋಗ್ಯ ತಪಾಸಣೆ ಕಾರ್ಯಕ್ಕೆ ವ್ಯವಸ್ಥೆ ನಡೆಯುತ್ತಿದೆ.

ಈ ತಂಡ ರಾಜರಾಜೇಶ್ವರಿ ನಗರ, ವಿದ್ಯಾರಣ್ಯ ಪುರ ಸುತ್ತಮುತ್ತ ಇಂದು ಆಕ್ಸಿಜನ್ ಕಾನ್ಸಂಟ್ರೇಟರ್ ಮೂಲಕ ಆಕ್ಸಿಜನ್ ಪೂರೈಕೆ ಮಾಡ್ತಿದೆ. ಸೋಂಕಿತರ ಅರೋಗ್ಯ ಸುಧಾರಿಸಿದ ನಂತರ ಮತ್ತೆ ಬೇರೆ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲಿದ್ದಾರೆ.

The post ಆಕ್ಸಿಜನ್ ಪೂರೈಸಿ, ಕೊರೊನಾ ಸೋಂಕಿತರ ನೆರವಿಗೆ ನಿಂತ ಸ್ಯಾಂಡಲ್​​ವುಡ್ ವಾರಿಯರ್ಸ್ appeared first on News First Kannada.

Source: newsfirstlive.com

Source link