ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದಂತೆ ಆಕ್ಸಿಜನ್ ಬೇಡಿಕೆ ಸಹ ಇಳಿಕೆಯಾಗುತ್ತಿದೆ.

ಎರಡನೇ ಅಲೆ ಉತ್ತಂಗದಲ್ಲಿದ್ದಾಗ ರಾಜ್ಯದ ಹಲವೆಡೆ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಕೇಂದ್ರ ಸರ್ಕಾರ ರೈಲಿನ ಮೂಲಕ ಆಕ್ಸಿಜನ್ ವಿತರಿಸಿದ್ದರೆ ವಿದೇಶದಿಂದಲೂ ಆಕ್ಸಿಜನ್ ರಾಜ್ಯಕ್ಕೆ ಬಂದಿತ್ತು. ಆದರೆ ಈಗ ಸೋಂಕು ಕಡಿಮೆಯಾಗುತ್ತಿದ್ದು, ಐಸಿಯು ಬೆಡ್ ಬೇಡಿಕೆ ಇಳಿದಿದೆ. ಪರಿಣಾಮ ಆಕ್ಸಿಜನ್ ಬೇಡಿಕೆ ಪ್ರಮಾಣ ಭಾರೀ ಕುಸಿದಿದೆ.

ಮೇ ತಿಂಗಳಲ್ಲಿ 800 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಇತ್ತು. ಜೂ.1ರವರೆಗೆ ಜಿಲ್ಲೆಗಳಿಗೆ 549.28 ಮೆಟ್ರಿಕ್ ಟನ್ ಬೇಕಿತ್ತು. ಜೂ. 27ರ ವೇಳೆಗೆ 288 ಮೆಟ್ರಿಕ್ ಟನ್‍ಗೆ ಬೇಡಿಕೆ ತಗ್ಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಜೂನ್ 1 ರವರೆಗೆ ಬೆಂಗಳೂರು ನಗರಕ್ಕೆ 262.57 ಎಂಟಿ ಬೇಡಿಕೆ ಇತ್ತು. ಜೂನ್ 27ರ ಹೊತ್ತಿಗೆ ಬೇಡಿಕೆ 102.74 ಎಂಟಿಗೆ ಇಳಿದಿದೆ.  ಇದನ್ನೂ ಓದಿ : 6 ಜಿಲ್ಲೆಗಳಲ್ಲಿ ಒಂದಂಕಿಗೆ ಕುಸಿದ ಸೋಂಕು

The post ಆಕ್ಸಿಜನ್ ಬೇಡಿಕೆ ಭಾರೀ ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಬೇಕಿದೆ? appeared first on Public TV.

Source: publictv.in

Source link