ಚಿಕ್ಕಬಳ್ಳಾಪುರ: ಸಿಬ್ಬಂದಿ ನಿರ್ಲಕ್ಷ್ಯದಿಂದ ಆಕ್ಸಿಜನ್ ಆಫ್ ಆಗಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಉಪ್ಪಕುಂಟಪಲ್ಲಿ ಗ್ರಾಮದ ನಿವಾಸಿ ಗಂಗುಲಮ್ಮ (70 ) ಸಾವನ್ನಪ್ಪಿದ ಮಹಿಳೆ. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೃತ ಮಹಿಳೆಗೆ ಕೃತಕ ಆಕ್ಸಿಜನ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಮುಂದುವರೆದಾಗ ಆಸ್ಪತ್ರೆ ಸಿಬ್ಬಂದಿಯೊಬ್ಬರು ಆಕ್ಸಿಜನ್ ಸರಬರಾಜು ಮಾಡುವ ಮಷಿನ್ ಅನ್ನು ಆಫ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಲಸಿಕೆ ಹಾಕಿಸಿಕೊಳ್ಳಲು ಹೆದರಿ ಮನೆ ಮೇಲೆ ಏರಿದ ವ್ಯಕ್ತಿ.. ಆರೋಗ್ಯ ಸಿಬ್ಬಂದಿ ಬಿಡ್ತಾರಾ..? ಮುಂದೇನಾಯ್ತು..?
ಪರಿಣಾಮ ಉಸಿರಾಟ ತೊಂದರೆ ಉಂಟಾಗಿ ಮಹಿಳೆ ಸಾವನ್ನಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದು ಆಸ್ಪತ್ರೆಯ ವೈದ್ಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಈ ಅವಘಡಕ್ಕೆ ಕಾರಣರಾದ ಸಿಬ್ಬಂದಿ ಪ್ರಕಾಶ್ ಮತ್ತು ಶಿಲ್ಪ ವಿರುದ್ಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ವೈದ್ಯಕೀಯ ಆಡಳಿತಾಧಿಕಾರಿ ಸಂತೋಷ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಆಸ್ತಿ ಕಬಳಿಸಲು ಕಾಗದ ಪತ್ರಗಳಿಗೆ ಶವದ ಹೆಬ್ಬಟ್ಟು ಒತ್ತಿಸಿಕೊಂಡ ಅಣ್ಣನ ಮಕ್ಕಳು