ಆಂಧ್ರ ಪ್ರದೇಶ: ದೇಶದಾದ್ಯಂತ ಕೊರೊನಾ ಸೋಂಕು ಏರಿಕೆ ಬೆನ್ನಲ್ಲೇ ಆಕ್ಸಿಜನ್ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್​ಮೋಹನ್ ರೆಡ್ಡಿ ಖಡಕ್ ಆದೇಶವೊಂದನ್ನ ಹೊರಡಿಸಿದ್ದಾರೆ.

ರಾಜ್ಯದಲ್ಲಿ 50 ಬೆಡ್​​ಗಳಿಗಿಂತ ಹೆಚ್ಚಿರುವ ಪ್ರತಿಯೊಂದು ಕೋವಿಡ್​ ಆಸ್ಪತ್ರೆಯಲ್ಲೂ ಸಹ ಆಕ್ಸಿಜನ್​ ವಿಚಾರದಲ್ಲಿ 4 ತಿಂಗಳ ಒಳಗೆ ಸ್ವಾವಲಂಬಿಯಾಗಬೇಕು. ಎಲ್ಲಾ ಆಸ್ಪತ್ರೆಗಳೂ ಸಹ ಆಕ್ಸಿಜನ್ ಜನರೇಟರ್​ಅನ್ನು ಹೊಂದಿರಬೇಕು. ಪ್ರತಿಯೊಂದು ಆಸ್ಪತ್ರೆ ತನಗೆ ಬೇಕಾದಷ್ಟು ಆಕ್ಸಿಜನ್​ನ್ನು ತಾವೇ ತಯಾರಿಸಿಕೊಳ್ಳುವಂತಾಗಬೇಕು ಎಂದು ಇಂದು ನಡೆದ ಸಭೆಯಲ್ಲಿ ಖಡಕ್ ಆದೇಶ ಹೊರಡಿಸಿದ್ದಾರೆ. ಮುಂದುವರೆದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಈ ಸೌಲಭ್ಯವನ್ನು ನೀಡಲಿದೆ. ಖಾಸಗಿ ಆಸ್ಪತ್ರೆಗಳಿಗೆ ಧನಸಹಾಯ ಮಾಡಲಾಗುವುದು ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

The post ಆಕ್ಸಿಜನ್ ಸಮಸ್ಯೆ ಎದುರಾಗದಂತೆ ಸಖತ್ ಪ್ಲಾನ್ ಮಾಡಿದ ಜಗನ್.. ಏನದು? appeared first on News First Kannada.

Source: newsfirstlive.com

Source link