ಚಾಮರಾಜನಗರ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದ ಕುಟುಂಬಗಳ ನೆರವಿಗೆ ಬಿಜೆಪಿ ರೈತ ಮುಖಂಡ ಮಲ್ಲೇಶ್ ಧಾವಿಸಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 10 ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಧನಸಹಾಯ ಮಾಡಿ, ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಈ ಆಕ್ಸಿಜನ್ ಕೊರತೆ ದುರಂತಕ್ಕೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ನಿರ್ಲಕ್ಷ್ಯವೇ ಕಾರಣ. 24 ಮಂದಿ ಸಾವಿಗೆ ಪುಟ್ಟರಂಗಶೆಟ್ಟಿಯೇ ಹೊಣೆ ಎಂದಿದ್ದಾರೆ.

ಎರಡು ವರ್ಷಗಳ ಹಿಂದೆ ಸುಳ್ವಾಡಿ ವಿಷ ಪ್ರಸಾದ ದುರಂತ ನಡೆದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆಗ್ಲೇ, ಆಕ್ಸಿಜನ್ ಸಿಗದೆ ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ, ಜಿಲ್ಲಾಸ್ಲತ್ರೆಗೆ ಅಗತ್ಯ ಇರುವ ಸೌಲಭ್ಯ ಕಲ್ಪಿಸಬೇಕಿತ್ತು. ಅಕ್ರಮ ಗಣಿಗಾರಿಕೆ ನಡೆಸಲು ಕ್ವಾರಿಗೆ ಹೋಗುವ ಅವರು ಜಿಲ್ಲಾಸ್ಪತ್ರೆಗೆ ಒಂದು ದಿನವೂ ಭೇಟಿ ನೀಡಿಲ್ಲ, ಇಲ್ಲಿನ ಸಮಸ್ಯೆಗಳನ್ನು ಅರಿತಿಲ್ಲ ಸಮಸ್ಯೆಗಳನ್ನು ಪರಿಹರಿಸಿಲ್ಲ ಅಂತ ಶಾಸಕ ಪುಟ್ಟರಂಗಶೆಟ್ಟಿ ವಿರುದ್ದ ಬಿಜೆಪಿ ರೈತಮುಖಂಡ ಮಲ್ಲೇಶ್ ವಾಗ್ಧಾಳಿ ನಡೆಸಿದ್ದಾರೆ.

The post ಆಕ್ಸಿಜನ್ ಸಿಗದೇ ಮೃತಪಟ್ಟ 24 ಜನರ ಜೀವಕ್ಕೂ ಪುಟ್ಟರಂಗಶೆಟ್ಟಿ ಹೊಣೆ-ರೈತ ಮುಖಂಡ appeared first on News First Kannada.

Source: newsfirstlive.com

Source link