ಕೊರೊನಾ ಟೈಮ್ನಲ್ಲಿ ಇದೊಂದು ಅಸ್ತ್ರವನ್ನು ಬೆರಳ ತುದಿಯಲ್ಲೇ ಇಟ್ಟುಕೊಳ್ಳಬಹುದು. ಇದರಿಂದಾಗುವ ಪ್ರಯೋಜನ ಅಷ್ಟಿಷ್ಟಲ್ಲ. ಮನೆಯಲ್ಲೇ ಟ್ರೀಟ್ ಮೆಂಟ್ ಪಡೆದುಕೊಳ್ತಾ ಇರುವ ಕೊರೊನಾ ಸೋಂಕಿತರಿಗಂತೂ ಇದು ತುಂಬಾ ಹೆಲ್ಪ್ ಆಗ್ತಿದೆ. ಈ ಆಕ್ಸಿಮೀಟರ್ ಬಗ್ಗೆ, ಇದರ ಬಳಕೆ ಬಗ್ಗೆ ಮಾಹಿತಿ ಇಲ್ಲಿದೆ.

ಕೊರೊನಾ ಕಾಲದಲ್ಲಿ ಮನೆ ಮನೆಗಳಲ್ಲಿ ಬಳಕೆಯಾಗುತ್ತಿರುವ ಪ್ರಾಥಮಿಕ ವೈದ್ಯಕೀಯ ಉಪಕರಣ ಪಲ್ಸ್ ಆಕ್ಸಿಮೀಟರ್. ಕೊರೊನಾ ಪಾಸಿಟಿವ್ ರಿಪೋರ್ಟ್ ಪಡೆದ ನಂತರ ಮೆಡಿಕಲ್ ಶಾಪ್ಗೆ ಹೋಗಿ ಮೊದಲು ತಂದು ಇಟ್ಟಿಕೊಳ್ಳುವ ಉಪಕರಣ ಪಲ್ಸ್ ಆಕ್ಸಿಮೀಟರ್. ಇದು ದೇಹದಲ್ಲಿನ ಸ್ಯಾಚುರೇಷನ್ ಎಷ್ಟಿದೆ ಎನ್ನುವುದನ್ನು ನಿಖರವಾಗಿ ತೋರಿಸುತ್ತದೆ. ಅದರ ಆಧಾರದ ಮೇಲೆ ಸೋಂಕಿತರಿಗೆ ಕೃತಕ ಆಮ್ಲಜನಕದ ಅಗತ್ಯತೆ ಇದೆಯಾ ಅನ್ನೋದನ್ನ ತಿಳಿಯಬಹುದು. ಅದಕ್ಕೆ ಮನೆ ಮನೆಗೆ ಈ ಪಲ್ಸ್ ಆಕ್ಸಿಮೀಟರ್ ಬಂದು ಸೇರಿದೆ. ಕೊರೊನಾ ಮುಂಚೆ 700 ರಿಂದ 1000 ರೂಪಾಯಿದ್ದ ಈ ಡಿವೈಸ್ ಈಗ 3000 ದಿಂದ 5000 ರೂಪಾಯಿ ಆಗಿದೆ. ಆದರೂ ಅನಿವಾರ್ಯ ಪರಿಸ್ಥಿತಿಯಿಂದಾಗಿ ಇದನ್ನು ಖರೀದಿಸುವ ದುಸ್ಥಿತಿ ಬಂದೊದಗಿದೆ.

ಪಲ್ಸ್ ಆಕ್ಸಿಮೀಟರ್ ಬಳಸುವುದು ಹೇಗೆ ಗೊತ್ತಾ ?
ರೀಡಿಂಗ್ ತೋರಿಸುವುದನ್ನು ನಿಖರ ಎಂದು ಹೇಗೆ ನಂಬೋದು ?

ಎಲ್ಲ ಮೆಡಿಕಲ್ ಶಾಪ್ ಗಳಲ್ಲಿ ಬೇರೆ ಬೇರೆ ಬಗೆಯ ಪಲ್ಸ್ ಆಕ್ಸಿಮೀಟರ್ ಸಿಗುತ್ತದೆ. ಆದರೆ ಅದನ್ನು ಕೇವಲ ಬೆರಳ ತುದಿಗೆ ಸೇರಿಸಿಕೊಂಡು ಬಂದಷ್ಟು ರೀಡಿಂಗ್ ನಂಬುವುದಲ್ಲ. ಅದನ್ನು ಪರೀಕ್ಷಿಸುವ ಮುಂಚೆ ಒಂದಷ್ಟು ಪದ್ಧತಿಯನ್ನು ಪಾಲಿಸಬೇಕು ಆಗಲೇ ಅದರಲ್ಲಿ ಸರಿಯಾದ ರೀಡಿಂಗ್ ತೋರಿಸುವುದು. ದೇಹದಲ್ಲಿನ ಆಮ್ಲಜನಕ ಪ್ರಮಾಣವನ್ನು ಪಲ್ಸ್ ಆಕ್ಸಿಮೀಟರ್ನಿಂದ ಪರೀಕ್ಷಿಸುವ ಮೊದಲು 2 ನಿಮಿಷ ಚುರುಕಾದ ನಡಿಗೆ ಮಾಡಬೇಕು. ಈ ಬ್ರಿಸ್ಕ್ ವಾಕ್ ಮಾಡುವುದರಿಂದ ಶ್ವಾಸಕೋಶದಲ್ಲಿ ಆಕ್ಸಿಜನ್ ಹರಿವು ಕಾಣಿಸುತ್ತದೆ. ರೆಸ್ಟ್ನಲ್ಲಿದ್ರೆ ಅದು ನಾರ್ಮಲ್ ತೋರಿಸುವ ಸಂಭವ ಹೆಚ್ಚು. ನಂತರ ಇದನ್ನು ನಿಮ್ಮ ಮಧ್ಯ ಬೆರಳಿಗೆ ಧರಿಸಬೇಕಾಗುತ್ತದೆ. ಇಲ್ಲವಾದರೆ ಇದರ ರೀಡಿಂಗ್ ತಪ್ಪಾಗಿರಬಹುದು. ಒಮ್ಮೆ ಒಂದು ಕೈ ಬೆರಳಲ್ಲಿ ಪರೀಕ್ಷಿಸಿದ ನಂತರ ಮತ್ತೊಂದು ಕೈ ಬೆರಳಿಗೆ ಹಾಕಿಕೊಂಡು ಇದನ್ನು ಪಕ್ಕಾ ಮಾಡಿಕೊಳ್ಳಬೇಕು.

ಪಲ್ಸ್ ಆಕ್ಸಿಮೀಟರ್ ರೀಡಿಂಗ್ ಎಷ್ಟಿದ್ದರೆ ನಾರ್ಮಲ್ ?
ಎರಡು ಬೆರಳಲ್ಲೂ ಪರೀಕ್ಷಿಸಿದ ಮೇಲೆ, ಪಲ್ಸ್ ಆಕ್ಸಿಮೀಟರ್ ಎರಡು ರೀಡಿಂಗ್ ನೀಡುತ್ತದೆ. ಒಂದು ಪಲ್ಸ್ ರೇಟ್.. ಇನ್ನೊಂದು ಎಸ್.ಪಿ.ಒ 2. ಪಲ್ಸ್ ರೇಟ್ ಎಂದರೆ ನಿಮ್ಮ ಹೃದಯದ ರಕ್ತದ ಒತ್ತಡ. ಹೃದಯ ರಕ್ತವನ್ನು ಹಿಡಿದು ಪಂಪ್ ಮಾಡುವ ಪ್ರಮಾಣವನ್ನು ಈ ಪಲ್ಸ್ ರೇಟ್ ನೀಡುತ್ತದೆ. ಇನ್ನು ಎಸ್.ಪಿ.ಒ.2 ಎನ್ನುವುದು ಆಕ್ಸಿಜನ್ ಸ್ಯಾಚುರೇಷನ್ ಲೆವೆಲ್ ಆಗಿರುತ್ತದೆ. ರಕ್ತದಲ್ಲಿ ಆಕ್ಸಿಜನ್ ಹರಿವನ್ನು ಅಂಕಿಯಲ್ಲಿ ನೀಡಿದರೆ ಅದು ಆಕ್ಸಿಜನ್ ಕಾನ್ಸೆಂಟ್ರೇಷನ್ ಎನ್ನಬಹುದು. ನಾರ್ಮಲ್ ಪಲ್ಸ್ ರೇಟ್ 60 ರಿಂದ 100 ದಾಟಬಹುದು. ಪರೀಕ್ಷೆ ಮಾಡುವ ಮೊದಲು ವ್ಯಾಯಾಮ ಮಾಡಿದ್ದರೆ ಇದು ಹೆಚ್ಚಾಗೆ ತೋರಿಸುತ್ತದೆ. ಇನ್ನು ಈಗ ಎಲ್ಲೆಲ್ಲೂ ಚರ್ಚೆಯಲ್ಲಿ ಇರುವ ವಿಷಯ ಆಕ್ಸಿಜನ್ ಲೆವಲ್. ಕೊರೊನಾ ಸೋಂಕಿತರಿಗಂತು ಇದರ ಕನ್ಫೂಷನ್ ಹೆಚ್ಚಾಗೆ ಇದೆ. ಎಸ್.ಪಿ.ಒ2.. 94ಕ್ಕಿಂದ ತ ಹೆಚ್ಚಿದ್ದರೆ ಯಾವುದೆ ತೊಂದರೆ ಇಲ್ಲ. 94ಕ್ಕಿಂತ ಕ್ಷೀಣಿಸುತ್ತಿದ್ದರೆ ಮತ್ತು ಅದರಿಂದ ಸೋಂಕಿತರು ತೊಂದರೆ ಅನುಭವಿಸುತ್ತಿದ್ದರೆ ಮಾತ್ರ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.

ಪಲ್ಸ್ ಆಕ್ಸಿಮೀಟರ್ ಹೇಗೆ ವರ್ಕ್ ಆಗುತ್ತದೆ ?
ತೋರು ಬೆರಳ ತುದಿಗೆ ಪಲ್ಸ್ ಆಕ್ಸಿ ಮೀಟರ್ ಅಳವಡಿಸಿಕೊಳ್ಳುವ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿರುವ ಪ್ರಮಾಣವನ್ನು ರೀಡಿಂಗ್ನಲ್ಲಿ ನೋಡಬಹುದು. ಈ ಉಪಕರಣಕ್ಕೆ ಕೆಲವು ಸೆನ್ಸಾರ್​​ಗಳನ್ನು ಅಳವಡಿಸಲಾಗಿರುತ್ತದೆ. ವಿವಿಧ ಬಣ್ಣದ ಎಲ್​​ಇಡಿಗಳ ಮೂಲಕ ಬೆಳಕು ಬೆರಳ ತುದಿಯಲ್ಲಿರುವ ಅಂಗಾಂಶಗಳು ಮೇಲೆ ಹಾದು ಹೋಗುತ್ತದೆ. ಇದಕ್ಕೆ ಕೆಲವು ಪ್ರೀಸೆಟ್​​ ಡೇಟಾ ಜೊತೆ ಹೊಂದಿಸಿ ಮತ್ತೊಂದು ಬದಿಯಲ್ಲಿರುವ ಸೆನ್ಸಾರ್ನಿಂದ ಆಕ್ಸಿಜನ್ ಪೂರೈಕೆ ಪ್ರಮಾಣವನ್ನು ದಾಖಲಿಸುತ್ತದೆ. ಬೆಳಕಿನ ಸಾಂದ್ರತೆಯ ಮೂಲಕ ಆಕ್ಸಿಜನ್ ಕೊಂಡೊಯ್ಯುತ್ತಿರುವ ರಕ್ತ ಕಣಗಳನ್ನು ಪಲ್ಸ್ ಆಕ್ಸಿಮೀಟರ್ ಗುರುತಿಸುತ್ತದೆ.

ಪಲ್ಸ್ ಆಕ್ಸಿಮೀಟರ್ ರೀಡಿಂಗ್ ವ್ಯತ್ಯಾಸವಾಗಬಹುದಾ?
 ಬೇರೆ ಬೇರೆ ಕಾರಣಗಳಿಂದ ಪಲ್ಸ್ ಆಕ್ಸಿಮೀಟರ್ ರೀಡಿಂಗ್​ನಲ್ಲಿ ಕೆಲವೊಮ್ಮೆ ವ್ಯತ್ಯಾಸವಾಗಬಹುದು. ಆಕ್ಸಿಮೀಟರ್ನಲ್ಲಿ ಬರುವ ರೀಡಿಂಗ್ಗಳು ಪ್ರತಿ ಬಾರಿಯೂ ನಿಖರವಾಗಿರುವುದಿಲ್ಲ. ಅಂಗಾಂಶಗಳ ಮೇಲೆ ಬೆಳಕು ಹಾದು ಹೋಗುವಾಗ ಕೆಲವೊಂದು ವ್ಯತ್ಯಯಗಳಾಗಬಹುದು. ಆ ಎಲ್ಲ ಕಾರಣಗಳನ್ನು ಒಂದೊಂದೆ ಹೇಳ್ತಾ ಹೋಗ್ತೀವಿ ಕೇಳಿ.

ಚರ್ಮದ ಬಣ್ಣದ ಮೇಲೆ ರೀಡಿಂಗ್ ತಪ್ಪಾಗಬಹುದು
ಪಲ್ಸ್​ ಆಕ್ಸಿಮೀಟರ್ನಲ್ಲಿನ ಕೆಲವು ಸೆನ್ಸಾರ್ಗಳು ಚರ್ಮದಲ್ಲಿ ಹೆಚ್ಚು ಪಿಗ್ಮೆಂಟ್ ಇದ್ದರೆ ರೀಡಿಂಗ್ ತಪ್ಪು ತೋರಿಸಬಹುದು, ಕೆಲವು ಆಕ್ಸಿಮೀಟರ್ಗಳಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಪೂರೈಕೆಯ ರೀಡಿಂಗ್ ನೀಡಬಹುದು. ಆದರೆ ಅವನಲ್ಲಿ ನಿಜವಾಗಿಯೂ ಆಕ್ಸಿಜನ್ ಕೊರತೆ ಇರುತ್ತದೆ. ಆಕ್ಸಿಮೀಟರ್ ನಲ್ಲಿರುವ ಸೆನ್ಸಾರ್ ಆ ಹೆಚ್ಚಿನ ಪಿಗ್ಮೆಂಟ್ ದಾಟಿ ನಿಖರವಾದ ಅಂಶವನ್ನು ತೋರಿಸಲು ಸೋಲುತ್ತದೆ. ಹಾಗಂತ ಬಣ್ಣ ಬದಲಾದರೆ ಆಕ್ಸಿಮೀಟರ್ ಪರೀಕ್ಷೆ ತಪ್ಪಾಗುತ್ತದೆ ಎಂದು ನಿರ್ಲಕ್ಷ್ಯ ಮಾಡಬಾರದು. ಕೆಲವೊಂದು ಆಕ್ಸಿಮೀಟರ್ನಲ್ಲಿ ಈ ಸೆನ್ಸಾರ್ ಆಭಾವ ಇರುತ್ತದೆ.

ಬೆರಳಿನ ರಕ್ತ ಸಂಚಾರ ವ್ಯತ್ಯಯವಾದರೆ ರೀಡಿಂಗ್ ಚೇಂಜ್
ಕೈ ಬೆರಳಿನ ರಕ್ತ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾದರೆ ಪಲ್ಸ್ ಆಕ್ಸಿಮೀಟರ್ ರೀಡಿಂಗ್ಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ ಅಥವಾ ಕಡಿಮೆ ರೀಡಿಂಗ್ ತೋರಿಸಬಹುದು. ರಕ್ತ ಸಂಚಾರದ ಮಧ್ಯೆ ಎಲ್ಲಾದರೂ ಗಾಯಗಳಾಗಿದ್ದರೆ. ಬ್ಲಡ್ ಕ್ಲಾಟ್ಸ್ ಕಂಡುಬಂದರೆ ಬೆರಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗುತ್ತದೆ. ಈ ಕಾರಣದಿಂದಲೂ ಆಕ್ಸಿಮೀಟರ್ ರೀಡಿಂಗ್ ನಲ್ಲಿ ತಪ್ಪು ಮಾಹಿತಿ ತೋರಬಹುದು. ಕೆಲವೊಮ್ಮೆ ಈ ಸ್ಥಿತಿಯಲ್ಲಿ ರೀಡಿಂಗ್ ಕಡೆಮೆ ತೋರಿಸಿದರೆ ಹೆದರಬೇಡಿ.

ಸೋಂಕಿತ ವ್ಯಕ್ತಿಯ ತಣ್ಣನೆಯ ಕೈಗಳಿಂದ ತಪ್ಪು ರೀಡಿಂಗ್
ಕೈಗಳು ತಣ್ಣಗಿದ್ದಲ್ಲಿ ಅಥವಾ ಚರ್ಮ ಒದ್ದೆಯಾದಾಗ ಪಲ್ಸ್ ಆಕ್ಸಿಮೀಟರ್ ಹಾಕಿದರೆ ಆಗಲೂ ಕಡಿಮೆ ರೀಡಿಂಗ್ ತೋರಿಸಬಹುದು. ಕೊರೊನಾ ಬಂದಾಗಿನಿಂದ ಪದೆ ಪದೆ ಹ್ಯಾಂಡ್ ವಾಶ್ ಮಾಡಿಕೊಳ್ಳುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು ಈಗಿನ ರೂಢಿ. ಇದರಿಂದ ನಮ್ಮ ಕೈಗಳು ತಣ್ಣಗಾಗುತ್ತದೆ. ಕೈ ತಣ್ಣಗಿದ್ದಾಗ ಆಕ್ಸಿಮೀಟರ್ ನಲ್ಲಿ ರೀಡಿಂಗ್ ನೋಡಿದರೆ ಆಗ ತಪ್ಪು ಮಾಹಿತಿ ನೀಡಬಹದು. ಆಕ್ಸಿಮೀಟರ್ನಲ್ಲಿ ಕೈಶಾಖ ಗುರುತಿಸಿ ರೀಡಿಂಗ್ ನೀಡುವಂತೆ ಸೆನ್ಸಾರ್ ಪ್ರೋಗ್ರಾಮ್ ಮಾಡಲಾಗಿರುತ್ತದೆ. ಅದರಿಂದ ಕೆಲವೊಂದು ಆಕ್ಸಿಮೀಟರ್ ಕೈತಣ್ಣಗಿದ್ದರೆ ತಪ್ಪು ರೀಡಿಂಗ್ ನೀಡಬಹುದು.

ಪ್ರಕಾಶಮಾನವಾದ ಬೆಳಕಿನಿಂದಲೂ ತಪ್ಪಾದ ಮಾಹಿತಿ
ಪಲ್ಸ್ ಆಕ್ಸಿಮೀಟರ್ ರೀಡಿಂಗ್ ಮಾಡುವಾಗ ಬೇರೆ ಯಾವುದೇ ಬೆಳಕು ಅದರ ಮೇಲೆ ಬಿದ್ದಾಗ ರಾಂಗ್ ರಿಡಿಂಗ್ ತೋರಿಸುತ್ತದೆ. ಅದರಲ್ಲಿ ಸೂರ್ಯನ ಬೆಳಕು ಸಹ ಒಂದು. ಇನ್ನುಳಿದಂತೆ ಲೆಸರ್ ಲೈಟ್, ಮೊಬೈಲ್ ಟಾರ್ಚ್ ಇನ್ನುಳಿದ ಯಾವುದೇ ಹೊರಭಾಗದಿಂದ ಬರುವ ಪ್ರಕಾಶಮಾನವಾದ ಬೆಳಕು ಉಪಕರಣದ ಒಳಗಿರುವ ಎಲ್ಇಡಿ ಬೆಳಕಿಗೆ ಅಡ್ಡಿಯಾಗಿ ಬಂದರೆ ನಿಖರತೆ ತಪ್ಪಬಹುದು.

ದಟ್ಟ ಉಗುರು ಹಾಗೂ ನೈಲ್ ಪಾಲಿಶ್ ಇನ್ನೊಂದು ಕಾರಣ
ಸೋಂಕಿತನ ಉಗುರು ದಪ್ಪವಾಗಿದ್ದಲ್ಲಿ ಅದೂ ಸಹ ರೀಡಿಂಗ್ ಕಡಿಮೆ ತೋರಿಸುವುದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಎಲ್ಇಡಿ ಸೆನ್ಸಾರ್ಗಳು ಉಗುರನ್ನು ದಾಟಿ ರಕ್ತದ ಸಂಚಲನದ ಮೇಲೆ ಪ್ರಭಾವ ಬೀರಬೇಕು. ಅದಕ್ಕೆ ಅಡ್ಡಿ ಆದರೆ ನಿಖರತೆ ತಪ್ಪಾಗಬಹುದು. ಇನ್ನು ಕಪ್ಪು, ನೀಲಿ, ಹಸಿರು ಬಣ್ಣದ ನೈಲ್ ಪಾಲಿಶ್ಗಳಿಂದಲೂ ಪಲ್ಸ್ ಆಕ್ಸಿಮೀಟರ್ಗಳು ಕಡಿಮೆ ರೀಡಿಂಗ್ ತೋರಿಸುವ ಸಾಧ್ಯತೆಗಳಿವೆ.

ಮಾರುಕಟ್ಟೆಯಲ್ಲಿ ಹಲವು ರೀತಿಯ ಆಕ್ಸಿಮೀಟರ್ಗಳು ಸಿಗುತ್ತವೆ. ಆದರೆ ಅದರಲ್ಲಿ ಯಾವುದು ನಿಖರ ಮಾಹಿತಿ ಕೊಡುತ್ತದೆ ಎನ್ನುವುದನ್ನು ಕಂಪೇರ್ ಮಾಡಿ ತೆಗೆದುಕೊಳ್ಳುವುದು ಸರಿಯಾದ ಮಾರ್ಗ. ಪಲ್ಸ್ ಆಕ್ಸಿಮೀಟರ್ನಲ್ಲಿನ ರೀಡಿಂಗ್ ಗಳು 95-100ವರೆಗೂ ಇದ್ದರೆ ಸಮರ್ಪಕ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಅರ್ಥ. ಈ ಮೇಲಿನ ಕಾರಣಗಳು ಯಾವುದೂ ಇಲ್ಲದೆಯೂ ಕಡಿಮೆ ರೀಡಿಂಗ್ ಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಕಡಿಮೆ ರೇಟ್ ಅಂತ ಪರಿಶೀಲನೆ ಆಗದ ಆಕ್ಸಿಮೀಟರ್ ಖರೀದಿಸಿದರೆ ಈ ರೀತಿ ಆ್ಯಕ್ಯೂರೆಸಿ ಕಡಿಮೆ ಇರವ ಉಪಕರಣಗಳು ಸಿಗುತ್ತದೆ. ಹಾಗಂತ ಜಾಸ್ತಿ ದುಡ್ಡು ಕೊಟ್ಟು ಖರೀದಿ ಮಾಡೋ ಅಗತ್ಯ ಇಲ್ಲ. ಆದರೆ ಮನೆಯಲ್ಲೊಂದು ಆಕ್ಸಿಮೀಟರ್ ಇದ್ರೆ ಹಲವರಿಗೆ ಅದೆಷ್ಟೊ ನೆಮ್ಮದಿ.

The post ಆಕ್ಸಿಮೀಟರ್​​ ಸರಿಯಾಗಿ ಬಳಸೋದು ಹೇಗೆ? ರೀಡಿಂಗ್ ಎಷ್ಟಿದ್ದರೆ ನಾರ್ಮಲ್.. ಇಲ್ಲಿದೆ ಫುಲ್ ಡೀಟೇಲ್ಸ್​ appeared first on News First Kannada.

Source: newsfirstlive.com

Source link