ದಾವಣಗೆರೆ: ಆಸ್ಪತ್ರೆಯಲ್ಲಿ ಆಗತಾನೇ ಜನಿಸಿದ್ದ ಹಸುಗೂಸು ನರ್ಸ್ ಕೈಯಿಂದ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ದೇವರಳ್ಳಿ ಗ್ರಾಮದ ತಿಮ್ಮೇಶ್ ಮತ್ತು ಲಕ್ಷ್ಮಿ ದಂಪತಿಯ ಮಗು ಸಾವನ್ನಪ್ಪಿದ್ದು, ಗಂಡು ಮಗು ಜನಿಸಿತು ಎಂದು ಖುಷಿಯಾಗಿದ್ದ ಪೋಷಕರಿಗೆ ಕೆಲವೇ ಕ್ಷಣಗಳಲ್ಲಿ ಸಂತಸ ದೂರವಾಗಿದೆ.

ಇಂದು ಬೆಳಗ್ಗೆ ಲಕ್ಷ್ಮಿ ಅವರು ಗಂಡು ಮಗುವಿಗೆ ಆಸ್ಪತ್ರೆಯಲ್ಲಿ ಜನನ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಸಾಕಮ್ಮ ಎಂಬ ನರ್ಸ್.. ವೈದ್ಯರು ಇಲ್ಲದೇ ಇದ್ದರೂ ಹೆರಿಗೆ ಮಾಡಿಸಿದ್ದಾರೆ ಎನ್ನಲಾಗಿದೆ. ಆದರೆ ಮಗುವನ್ನು ಕೈಗೆ ತೆಗೆದುಕೊಂಡಿದ್ದ ಸಂದರ್ಭದಲ್ಲಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ದೇವರಳ್ಳಿ ಆಸ್ಪತ್ರೆ ಎದರು ಜಮಾಯಿಸಿ ಆಸ್ಪತ್ರೆ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

The post ಆಗಷ್ಟೇ ಹುಟ್ಟಿದ್ದ ಮಗು ಕೈಯಿಂದ ಜಾರಿ ಬಿದ್ದು ಸಾವು: ನರ್ಸ್ ಬೇಜವಾಬ್ದಾರಿಯೇ ಕಾರಣವಾಯ್ತಾ..? appeared first on News First Kannada.

Source: newsfirstlive.com

Source link