ಆಗಸ್ಟ್​ ತಿಂಗಳು ಬಂದ್ರೆ ಮಾತ್ರ ನೆನಪಾಗ್ತೀವಿ ಸರ್; ದಾವಣಗೆರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಅಳಲು | Davanagere Freedom Fighter Family expressed unhappy over Government Negligency Kannada News


75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡಲಾಯಿತು. ವಿದ್ಯಾನಗರದ ಶಿವಲಿಂಗ ಸ್ವಾಮಿಯವರ ಮನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್​ ಸನ್ಮಾನ ಮಾಡಿದರು.

ಆಗಸ್ಟ್​ ತಿಂಗಳು ಬಂದ್ರೆ ಮಾತ್ರ ನೆನಪಾಗ್ತೀವಿ ಸರ್; ದಾವಣಗೆರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಅಳಲು

ಭೈರತಿ ಬಸವರಾಜ್

ದಾವಣಗೆರೆ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಷ್ಟೋ ಜನರು ಇನ್ನೂ ನಮ್ಮ ನಡುವೆ ಇದ್ದಾರೆ. ಆದರೆ, ಅವರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ. ಅದೇ ರೀತಿಯ ಒಂದು ಪ್ರಕರಣ ಇಲ್ಲಿದೆ. ಆಗಸ್ಟ್​ (August) ತಿಂಗಳು ಬಂದರೆ ಮಾತ್ರ ನಾವು ನೆನಪಾಗ್ತೀವಿ ಸರ್. ನೆಪ ಮಾತ್ರಕ್ಕೆ ಬರ್ತಾರೆ, ಹೂವಿನ ಹಾರ ಹಾಕಿ ಹೋಗ್ತಾರೆ. ಸರ್ಕಾರದಿಂದ ಬರುವ ಯಾವ ಸೌಲಭ್ಯವೂ ಸರಿಯಾಗಿ ಸಿಗುತ್ತಿಲ್ಲ ಎಂದು ದಾವಣಗೆರೆಯ (Davanagere) ಸ್ವಾತಂತ್ರ ಹೋರಾಟಗಾರ ಸಿದ್ದರಾಮಪ್ಪನವರ ಪುತ್ರರು ಆರೋಪ ಮಾಡಿದ್ದಾರೆ.

ಎರಡೂ ಕಣ್ಣು ಕಾಣಿಸೋದಿಲ್ಲ, ಜೀವನ ನಡೆಸಲು ಕಷ್ಟ ಆಗುತ್ತಿದೆ. ನಮ್ಮ ತಂದೆ ಸ್ವಾತಂತ್ರ ಹೋರಾಟ ಮಾಡಿದ್ದರು. ಆದರೆ, ಅವರ ಮಕ್ಕಳಾದ ನಮಗೆ ಸರ್ಕಾರದಿಂದ ಬರುತ್ತಿರುವ ಅವರ ಪಿಂಚಣಿ ಸಾಲುತ್ತಿಲ್ಲ. ರಾಜ್ಯ ಸರ್ಕಾರದವರು ನಮ್ಮ ಕಡೆ ಸ್ವಲ್ಪ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡಲಾಯಿತು. ವಿದ್ಯಾನಗರದ ಶಿವಲಿಂಗ ಸ್ವಾಮಿಯವರ ಮನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್​ ಸನ್ಮಾನ ಮಾಡಿದರು. ಸ್ವಾತಂತ್ರ ಹೋರಾಟಗಾರರ ಮನೆ-ಮನೆಗಳಿಗೆ ಭೇಟಿ ಕೊಟ್ಟು ಸನ್ಮಾನ ಮಾಡಲಾಗುತ್ತಿದೆ. ವಿದ್ಯಾನಗರದ ಶಿವಲಿಂಗ ಸ್ವಾಮಿ ಮನೆಗೆ ಭೇಟಿ ಕೊಟ್ಟ ಸಚಿವ ಭೈರತಿ ಬಸವರಾಜ್ ಶಾಲು ಹೊದಿಸಿ, ಹಾರ ಹಾಕಿ, ಕೈಗೆ ತ್ರಿವರ್ಣ ಧ್ವಜವನ್ನಿಟ್ಟು ಸನ್ಮಾನ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *