ಆಗಸ್ಟ್​​ 15 ರಂದು ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಸಾಯಂಕಾಲ ವಿಸರ್ಜಿಸಲಾಗುವುದು: ಭಾಸ್ಕರನ್ | Sanathan Parishad president Bhaskaran says Ganesh idol would be installed on 15th August and immersed in the evening



ಇದು ಕಂದಾಯ ಇಲಾಖೆಗೆ ಸೇರಿದ ಆಸ್ತಿಯಾಗಿರುವುದರಿಂದ ಎಲ್ಲರಿಗೂ ಸೇರಿದ್ದು, ಆಗಸ್ಟ್​ 15 ರಂದೇ ಮೈದಾನದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಸಾಯಂಕಾಲ 5 ಗಂಟೆಗೆ ವಿಸರ್ಜನೆ ಮಾಡಲಾಗುವುದು ಎಂದು ಭಾಸ್ಕರನ್ ಹೇಳಿದರು.

TV9kannada Web Team


| Edited By: Arun Belly

Aug 09, 2022 | 2:08 PM




ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಆಟದ ಮೈದಾನಕ್ಕೆ ಸಂಬಂಧಿಸಿದ ವಿವಾದ ದಿನಕ್ಕೊಂದು ಹೊಸರೂಪ ಪಡೆಯುತ್ತಿದೆ ಮಾರಾಯ್ರೇ. ಮೈದಾನದಲ್ಲಿ ಧಾರ್ಮಿಕ ಅಚರಣೆಗಳಿಗೆ ಅವಕಾಶವಿಲ್ಲ ಎಂದು ಕಾಂಗ್ರೆಸ್ ನಾಯಕ  ಜಮೀರ್ ಅಹ್ಮದ್ (Zameer Ahmed) ನೀಡಿರುವ ಹೇಳಿಕೆಗೆ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ (Bhaskaran) ಪ್ರತಿಕ್ರಿಯೆ ನೀಡಿದ್ದು, ಸದರಿ ಆಟದ ಮೈದಾನವನ್ನು ಜಮೀರ್ ಅಹ್ಮದ್ ಅವರಿಗೆ ಮದುವೆಯಲ್ಲಿ ವರದಕ್ಷಿಣೆಯಾಗಿ (dowry) ನೀಡಿಲ್ಲ, ಇದು ಕಂದಾಯ ಇಲಾಖೆಗೆ ಸೇರಿದ ಆಸ್ತಿಯಾಗಿರುವುದರಿಂದ ಎಲ್ಲರಿಗೂ ಸೇರಿದ್ದು, ಆಗಸ್ಟ್​ 15 ರಂದೇ ಮೈದಾನದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಸಾಯಂಕಾಲ 5 ಗಂಟೆಗೆ ವಿಸರ್ಜನೆ ಮಾಡಲಾಗುವುದು ಎಂದರು.

TV9 Kannada


Leave a Reply

Your email address will not be published. Required fields are marked *