ಆಗ್ರಾ: ಕೊಳವೆ ಬಾವಿಗಳಿಗೆ ಆಟವಾಡುತ್ತಾ ಆಗಾಗ ಮಕ್ಕಳು ಬಿದ್ದಿರೋದನ್ನ, ದಿನಗಟ್ಟಲೆ ಕಾರ್ಯಾಚರಣೆ ನಡೆಸಿ ಕೊನೆಗೆ ಮಕ್ಕಳ ಮೃತದೇಹಗಳನ್ನ ಹೊರತೆಗೆದ ಅದೆಷ್ಟೋ ವರದಿಗಳನ್ನ ನೀವು ಕೇಳಿರಬಹುದು. ಆದ್ರೆ ಆಗ್ರಾದಲ್ಲಿ ನಡೆದ ಅತ್ಯಾಶ್ಚರ್ಯದ ಘಟನೆಯೊಂದರಲ್ಲಿ ಕೊಳವೆ ಬಾವಿಗೆ ಬಿದ್ದ ಮಗು ಬರೋಬ್ಬರಿ 9 ಗಂಟೆಗಳ ನಂತರವೂ ಬದುಕಿಬಂದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಆಗ್ರಾ ಬಳಿ ಧರಿಯಾಯಿ ಎಂಬ ಗ್ರಾಮವೊಂದರಲ್ಲಿ 4 ವರ್ಷದ ಮಗು ಕೊಳವೆ ಬಾವಿಗೆ ಬಿದ್ದುಬಿಟ್ಟಿತ್ತು. ಸತತ 9 ಗಂಟೆಗಳ ಕಾಲ ಮಗು ಕೊಳವೆ ಬಾವಿಯಲ್ಲೇ ಸಿಲುಕಿಕೊಂಡಿತ್ತು. ಸ್ಥಳೀಯ ಪೊಲೀಸರು ಮತ್ತು ಎನ್​ಡಿಆರ್​ಎಫ್​ ನಡೆಸಿದ ನಿರಂತರ ಕಾರ್ಯಾಚರಣೆಯ ಫಲವಾಗಿ ಕೊನೆಗೂ 4 ವರ್ಷದ ಮಗುವನ್ನ ರಕ್ಷಿಸಲಾಗಿದೆ. ಮಗು ಜೀವಂತವಾಗಿದ್ದನ್ನ ಕಂಡು ಸಂಬಂಧಿಕರು, ಗ್ರಾಮಸ್ಥರು ಮತ್ತು ಸ್ಥಳದಲ್ಲಿ ನೆರೆದಿದ್ದ ಬಹುತೇಕರು ಭಾವುಕರಾಗಿದ್ದಾರೆ.

The post ಆಗ್ರಾದಲ್ಲಿ ನಡೆಯಿತು ಮಿರಾಕಲ್: 9 ಗಂಟೆಗಳ ಕಾಲ ಕೊಳವೆಬಾವಿಯಲ್ಲಿ ಸಿಲುಕಿದ್ದ ಮಗು ಬಚಾವ್ appeared first on News First Kannada.

Source: newsfirstlive.com

Source link