ಆಟಕ್ಕುಂಟು ಲೆಕ್ಕಕ್ಕಿಲ್ಲವಂತೆ ಶುಭಾ.. ತಮಾಷೆ ಹೋಗಿ ಇದೇನು ಮಾಡ್ಕೊಂಡ್ರು ನಿಧಿ

ಆಟಕ್ಕುಂಟು ಲೆಕ್ಕಕ್ಕಿಲ್ಲವಂತೆ ಶುಭಾ.. ತಮಾಷೆ ಹೋಗಿ ಇದೇನು ಮಾಡ್ಕೊಂಡ್ರು ನಿಧಿ

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದು ಕೆಲ ಸದಸ್ಯರ ಅಭಿಪ್ರಾಯ. ಇದು ಆವರ ಆಪ್ತ ವಲಯದಲ್ಲಿಯೂ ಕೇಳಿಬರುತ್ತಿರುವ ಮಾತು. ಇದು ಶುಭಾ ಅವರ ಬೇಸರಕ್ಕೆ ಕಾರಣವಾಗಿದೆ. ನಿಧಿ ಮತ್ತು ಶುಭಾ ತಮಾಷೆ ಮಾಡಲು ಹೋಗಿ ಕಿತ್ತಾಡಿದ್ದಾರೆ. ನಿಧಿ ಅವರಿಗೆ ಇರುವ ಬಟ್ಟೆ ವಾಶ್​ ಮಾಡುವ ಖಯಾಲಿ ಎಲ್ಲರಿಗೂ ಗೊತ್ತೇ ಇದೆ. ಈಗ ಇದೇ ವಿಷಯಕ್ಕೆ ಪ್ರಾರಂಭವಾದ ಮಾತುಕತೆ ಇಬ್ಬರ ವಾದವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ತಮಾಷೆ ಮಾಡಿದ ಶುಭಾ, ನನ್ನ ಬಟ್ಟೆ ಕೂಡ ಇದೆ. ತೊಳೆದುಕೊಡು ಎನ್ನುತ್ತಾರೆ. ಅದಕ್ಕೆ ನಿಧಿ ಎಲ್ಲಾ ನಾನೇ ಮಡೋದು ಆಯ್ತು. ನೀನೇನ್​ ಮಾಡಿದಿಯಾ, ನಂಗೆ ಒಂದು ದಿನಾನಾದ್ರೂ ಏನ್​ ಆದ್ರೂ ಗಿಫ್ಟ್​ ಕೊಟ್ಟಿದ್ದಿಯಾ ಹೇಳು ಎನ್ನುತ್ತಾರೆ. ಅದಕ್ಕೆ ಶುಭಾ ನಾನೇ ಇಲ್ವಾ ನಿಂಗೆ ಗಿಫ್ಟ್​. ದಿನಾ ಎಂಟರ್​ಟೈನ್​ ಮಾಡ್ತಿನಲ್ಲಾ ಅಂತಾರೆ. ಅದಕ್ಕೆ ನಿಧಿ ಅದು ಎಂಟರ್​ಟೈನ್ ಅಲ್ಲಾ ಟಾರ್ಚರ್​ ಅದನ್ನು ನಾನು ಸಹಿಸಿಕೊಂಡಿದ್ದೀನಿ ಎನ್ನುತ್ತಾರೆ.

ಆ ಕಡೆಯಿಂದ ಈ ಕಡೆ ಹೇಳೋದೇ ನಿನ್ನ ಎಂಟರ್​ಟೈನ್​ಮೆಂಟ್​. ದಡ್ಡಿ ನೀನು ಎಂದುಬಿಡುತ್ತಾರೆ. ಇದಕ್ಕೆ ಕೆಂಡಾಮಂಡಲರಾದ ಶುಭಾ, ಉರ್ಸ್​ ಬೇಡ, ನಂಗೆ ಗೊತ್ತು ನಾನ್​ ಏನ್​ ಮಾಡ್ತಿದೀನಿ ಅಂತಾ. ನೀನು ಹೇಳೋ ಅವಶ್ಯಕತೆ ಇಲ್ಲ. ಪದೇ ಪದೇ ಅದೇ ಹೇಳಿ ಚುಚ್ಚ ಬೇಡ, ನೀನು ಮಾಡೋದನ್ನೆಲ್ಲ ನಂಗೆ ಹೇಳಬೇಡ ಎನ್ನುತ್ತಾರೆ.

ಇನ್ನೊಂದು ಕಡೆ ಚಂದ್ರಚೂಡ್​ ಅವರು ಪ್ರಶಾಂತ್​ ಅವರ ಜೊತೆ ಮಾತನಾಡುವ ಸಮಯದಲ್ಲಿ ಶುಭಾ ಬಿಗ್​ ಬಾಸ್​ನಲ್ಲಿ ಲೆಕ್ಕಕ್ಕೆ ಇಲ್ಲಾ, ಅವಳು ಯಾವುದಕ್ಕೆ ಕ್ಲಿಕ್​ ಆಗಿದ್ದಾರೆ. ವಾದಕ್ಕೂ ಇಲ್ಲ, ತರ್ಕಕ್ಕೂ ಇಲ್ಲ ಎನ್ನುತ್ತಾರೆ. ಈ ಮಾತುಗಳು ಎಷ್ಟರ ಮಟ್ಟಿಗೆ ಸರಿ, ಶುಭಾ ಅವರನ್ನು ಎಲ್ಲರೂ ಲೈಟ್​ ಆಗಿ ತೆಗೆದುಕೊಳ್ಳುತ್ತಿದ್ದಾರಾ ಎಂಬುದನ್ನು ವೀಕ್ಷಕರೇ ನಿರ್ಧರಿಸಬೇಕು.

The post ಆಟಕ್ಕುಂಟು ಲೆಕ್ಕಕ್ಕಿಲ್ಲವಂತೆ ಶುಭಾ.. ತಮಾಷೆ ಹೋಗಿ ಇದೇನು ಮಾಡ್ಕೊಂಡ್ರು ನಿಧಿ appeared first on News First Kannada.

Source: newsfirstlive.com

Source link