ಆಟಗಾರರು ಮಾತ್ರವಲ್ಲ.. ಬಲಿಷ್ಠ ಕೋಚ್​​ಗಳ ವಿಚಾರದಲ್ಲೂ ಲಖನೌ ಫ್ರಾಂಚೈಸಿ ​ಪ್ಲಾನ್​


15ನೇ ಆವೃತ್ತಿಯ IPLನಲ್ಲಿ ನೂತನ ಫ್ರಾಂಚೈಸಿ ಲಖನೌ ಕಣಕ್ಕಿಳಿಯೋದು ಗೊತ್ತೇ ಇದೆ. ಅದಕ್ಕಾಗಿ ಸ್ಟಾರ್​ ಆಟಗಾರರ ಮೇಲೆಯೇ ಫ್ರಾಂಚೈಸಿ ಕಣ್ಣಿಟ್ಟಿದೆ. ಅದೇ ರೀತಿ ಕೋಚಿಂಗ್​ ಸ್ಟಾಪ್​​ಗಳ ಆಯ್ಕೆಗೆ ಸಜ್ಜಾಗಿದ್ದು, ಇಬ್ಬರು ಬಲಿಷ್ಠ ಕೋಚ್​​ಗಳನ್ನ ಸಂಪರ್ಕಿಸಿದೆ ಅಲ್ಲದೆ, ಅವರೊಂದಿಗೆ ಮಾತುಕತೆ ಕೂಡ ನಡೆಸಿದೆ.

ಮುಂದಿನ ಸೀಸನ್​​ನಿಂದ ಕಲರ್​​ಫುಲ್​​ ಲೀಗ್​​​ನಲ್ಲಿ ಅಖಾಡಕ್ಕಿಳಿಯಲು ನೂತನ ಫ್ರಾಂಚೈಸಿ ಲಖನೌ ಸಜ್ಜಾಗಿದೆ. ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ತಿದ್ದು, IPL ಸೀಸನ್​​-15ರ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನೇ ತೆಕ್ಕೆಗೆ ಹಾಕಿಕೊಳ್ಳಲು ಪ್ಲಾನ್​ ಹಾಕಿಕೊಂಡಿದೆ. ಇದೀಗ ಅನುಭವಿ ಕೋಚ್​ಗಳ ಮೇಲೆ ಕಣ್ಣಿಟ್ಟಿದೆ. ಭಾರತಕ್ಕೆ ಏಕದಿನ ವಿಶ್ವಕಪ್​​ ಗೆಲ್ಲಿಸಿಕೊಟ್ಟ ಕೋಚ್​ ಗ್ಯಾರಿ ಕರ್ಸ್ಟನ್,​ ಮಾಜಿ ವೇಗಿ ಆಶಿಶ್​ ನೆಹ್ರಾರನ್ನ ನೂತನ ಫ್ರಾಂಚೈಸಿ ಖರೀದಿಸೋದು ದಟ್ಟವಾಗಿದೆ.

IPL​​​ನಲ್ಲಿ ಸ್ಟಾರ್​ ಆಟಗಾರರೇ ತಮ್ಮ ಫ್ರಾಂಚೈಸಿಗಳನ್ನ ತೊರೆದು ಹರಾಜಿಗೆ ಬರುವ ಸಾಧ್ಯತೆ ಇದೆ. ಅಂತಹ ಆಟಗಾರರ ಮೇಲೆ ಲಖನೌ ಫ್ರಾಂಚೈಸಿ ಕಣ್ಣಿಟ್ಟಿದ್ದು, ಬಲಿಷ್ಠ ತಂಡವನ್ನೇ ನಿರ್ಮಿಸಲು ತಯಾರಿ ನಡೆಸಿದೆ. ಅದರಂತೆ ಅಂತಹ ಆಟಗಾರರಿಗೆ ಕೋಚಿಂಗ್​​​ ಸ್ಟಾಪ್​​ ಕೂಡ ಬಲಿಷ್ಠರೇ ಇರಲೆಂಬ ಉದ್ದೇಶ ಹೊಂದಿದೆ. ಹೀಗಾಗಿ ಹೆಡ್​​​ ಕೋಚ್​​ ಆಗಿ ಗ್ಯಾರಿ ಕರ್ಸ್ಟನ್​, ಬೌಲಿಂಗ್​ ಸಲಹೆಗಾರನ್ನಾಗಿ ನೆಹ್ರಾ ಖರೀದಿ ಖಚಿತ ಅಂತಾನೆ ಹೇಳಲಾಗ್ತಿದೆ. ಇಬ್ಬರನ್ನೂ ಲಖನೌ ಫ್ರಾಂಚೈಸಿ ಸಂಪರ್ಕಿಸಿದ್ದು, ಮಾತುಕತೆ ನಡೆಸಿದೆ ಎನ್ನಲಾಗ್ತಿದೆ. ಇಬ್ಬರೂ ಕೂಡ IPL​ ಅಲ್ಲದೆ, ಕ್ರಿಕೆಟ್​​ನ ಅಪಾರ ಅನುಭವ ಉಳ್ಳವರಾಗಿದ್ದಾರೆ. ಹೀಗಾಗಿ ಈ ಇಬ್ಬರ ಆಯ್ಕೆಗೆ ಮುಂದಾಗಿದೆ.

ಗ್ಯಾರಿ ಕಸ್ಟರ್ನ್​ ಕೋಚ್​​ ಅನುಭವ..!

  • ಗ್ಯಾರಿ ಕರ್ಸ್ಟನ್​​ ಮತ್ತು ಆಶಿಶ್​ ನೆಹ್ರಾಗಿದೆ ಸಾಕಷ್ಟು ಅನುಭವ
  • 2008-2011ರವರೆಗೆ ಭಾರತದ ಕೋಚ್​​ ಆಗಿದ್ದ ಗ್ಯಾರಿ ಕರ್ಸ್ಟನ್​
  • ಕರ್ಸ್ಟನ್​ ಕೋಚಿಂಗ್​ ಅಡಿ ಭಾರತ ಗೆದ್ದಿತ್ತು ಏಕದಿನ ವಿಶ್ವಕಪ್
  • 2015-2016ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್
  • 2019ರಲ್ಲಿ ಆರ್​ಸಿಬಿಗೆ ಮುಖ್ಯ ಕೋಚ್​​ ಆಗಿದ್ದರು ಗ್ಯಾರಿ ಕರ್ಸ್ಟನ್

ಟೀಮ್​ ಇಂಡಿಯಾ ಮಾಜಿ ವೇಗಿ ನೆಹ್ರಾ ಅವರಿಗೂ ಅಪಾರ ಕೋಚಿಂಗ್​ ಅನುಭವ ಇದೆ. ಹಾಗೆಯೇ ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ತಂಡಕ್ಕೂ ನೆರವಾಗಲಿದೆ. ಇದರಿಂದ ನೆಹ್ರಾರನ್ನ ಖರೀದಿಗೆ ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.

ನೆಹ್ರಾಗಿರುವ​ ಕ್ರಿಕೆಟ್​​​​ ಅನುಭವ

  • ನೆಹ್ರಾಗೆ IPL, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ
  • ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ನೆಹ್ರಾರಿಂದ ಅಟ್ಯಾಕಿಂಗ್​​ ಬೌಲಿಂಗ್
  • ಟೀಮ್​ ಇಂಡಿಯಾದಲ್ಲಿ ಓಪನಿಂಗ್​ ಬೌಲಿಂಗ್​ ಮಾಡ್ತಿದ್ದ ನೆಹ್ರಾ
  • 2018ರಲ್ಲಿ RCBಯ ಬೌಲಿಂಗ್ ಕೋಚ್ ಆಗಿದ್ದ ಆಶಿಶ್​ ನೆಹ್ರಾ

ಒಟ್ನಲ್ಲಿ IPLನಿಂದ ದೂರ ಉಳಿದಿದ್ದ ಗ್ಯಾರಿ ಕರ್ಸ್ಟನ್‌ ಮತ್ತು ನೆಹ್ರಾ ಕಮ್‌ಬ್ಯಾಕ್‌ ಮಾಡೋಕೇನೋ ಸಜ್ಜಾಗಿದ್ದಾರೆ. ಈಗಾಗಲೇ ಲಖನೌ ಫ್ರಾಂಚೈಸಿ ಕೂಡ ಇಬ್ಬರನ್ನೂ ಸಂಪರ್ಕಿಸಿದೆ ಎಂದು ಹೇಳಲಾಗ್ತಿದೆ. ಆದರೆ ಗ್ಯಾರಿ ಕರ್ಸ್ಟನ್‌ ಮತ್ತು ನೆಹ್ರಾ ಒಪ್ಪಿಗೆ ನೀಡಿದ್ದಾರಾ, ಇಲ್ವೋ ಅನ್ನೋದನ್ನ ಕಾದು ನೋಡಬೇಕಷ್ಟೆ.

News First Live Kannada


Leave a Reply

Your email address will not be published. Required fields are marked *