ಐಪಿಎಲ್​​​​ ಪಂದ್ಯಗಳು ರದ್ದಾಗ್ತಿದ್ದಂತೆ, ಧೋನಿ ಮಾಡಿದ ಕೆಲಸ ಮತ್ತೊಮ್ಮೆ ಎಲ್ಲರ ಮನಗೆದ್ದಿದೆ. IPLಗೆ ಪುಲ್​ಸ್ಟಾಪ್​ ಬೀಳ್ತಿದ್ದಂತೆ, ವಿದೇಶಿ ಆಟಗಾರರನ್ನ ಮನೆ ತಲುಪಿಸುವ ಪ್ರಶ್ನೆ ಉದ್ಭವವಾಗಿತ್ತು. ಅದಕ್ಕಾಗಿ ಬಿಸಿಸಿಐ ಚಾರ್ಟರ್ ಫ್ಲೈಟ್​​ಗಳ ಮೂಲಕ, ಉಪಾಯ ಮಾಡ್ತು. ಈ ಮಧ್ಯೆ ಆಟಗಾರರು ನೀವು ಮನೆಗೆ ಹೋಗಿ ಎಂದು ಧೋನಿಗೆ ಸೂಚಿಸಿದ್ದರಂತೆ. ಆದರೆ ಧೋನಿ ಎಲ್ಲ ಆಟಗಾರರು ಮನೆ ತಲುಪಿದ ನಂತರವೇ, ನಾನು ರಾಂಚಿಗೆ ಹೋಗುವುದು. ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ ಎಂದು ಧೋನಿ ಹೇಳಿದ್ದಾರಂತೆ.

ಹಾರ್ಸ್​​ ರೈಡಿಂಗ್​​​ಗೆ ಸಿದ್ದವಾದ ಜಡೇಜಾ

ರವೀಂದ್ರ ಜಡೇಜಾಗೆ ಕುದುರೆ ಪ್ರೀತಿ ಎಷ್ಟಿದೆ ಅನ್ನೋದು, ನಮಗೆ ಗೊತ್ತೇ ಇದೆ. ಬಿಡುವು ಸಿಕ್ಕಾಗಲೆಲ್ಲ ಹಾರ್ಸ್​ರೇಸ್​ ಮಾಡೋದು ಅವರ ಖಯಾಲಿ. ಸದ್ಯ IPL​ನಿಂದ ತಮ್ಮ ಕುದುರೆಗಳನ್ನ ಮಿಸ್​ ಮಾಡ್ಕೊಂಡಿದ್ದ ಜಡ್ಡು, ಇದೀಗ ಫಾರ್ಮ್​​ಹೌಸ್​​​ಗೆ ಮರಳಿದ್ದಾರೆ. ಕುದುರೆಗಳ ಫೋಟೋ ಶೇರ್ ಮಾಡಿದ್ದು, ಅತ್ಯಂತ ಸುರಕ್ಷಿತ ಎನಿಸುವ ಸ್ಥಳಕ್ಕೆ ಮರಳಿದ್ದೇನೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಕೊರೊನಾ ಪರಿಹಾರ ಚರ್ಚೆಯಲ್ಲಿ ತೊಡಗಿದ ಕೊಹ್ಲಿ

ಐಪಿಎಲ್​ ಅಮಾನತುಗೊಂಡ 24 ಗಂಟೆಗಳಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಕೋವಿಡ್ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈನಲ್ಲಿ ಯುವಸೇನೆ ಫೌಂಡೇಶನ್​ ಸದಸ್ಯ ರಾಹುಲ್ ಕನಾಲ್​​​ರನ್ನು ಕೊಹ್ಲಿ ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ. ಕನಾಲ್​​ ತಮ್ಮ ಪ್ರತಿಷ್ಠಾನದ ಪರವಾಗಿ ತಮ್ಮ ಯೋಜನೆಗಳ ಕುರಿತು ಪ್ರಸ್ತಾಪಿಸಿದ್ದು, ಕೊಹ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

The post ಆಟಗಾರರೆಲ್ಲರೂ ಮನೆ ತಲುಪಿದ ನಂತರವೇ ನಾನು ರಾಂಚಿಗೆ ಹೋಗೋದು- ಮತ್ತೊಮ್ಮೆ ಎಲ್ಲರ ಮನಗೆದ್ದ ಧೋನಿ appeared first on News First Kannada.

Source: newsfirstlive.com

Source link