ಆಟೋದಲ್ಲಿ ಓಡಾಡುವವರೆ ಗಮನಿಸಿ; ಬೆಂಗಳೂರಿನಲ್ಲಿ ಇವತ್ತಿನಿಂದ ಆಟೋ ಪ್ರಯಾಣ ದರ ಏರಿಕೆ | After 8 years Auto fare increase from december 1 2021


ಆಟೋದಲ್ಲಿ ಓಡಾಡುವವರೆ ಗಮನಿಸಿ; ಬೆಂಗಳೂರಿನಲ್ಲಿ ಇವತ್ತಿನಿಂದ ಆಟೋ ಪ್ರಯಾಣ ದರ ಏರಿಕೆ

ಬೆಂಗಳೂರು ನಗರದ ಆಟೋಗಳು

ಬೆಂಗಳೂರು: ಸಂಕಷ್ಟದ ಸಮಯದಲ್ಲೇ ದುನಿಯಾ ಮತ್ತಷ್ಟು ದುಬಾರಿ ಆಗುತ್ತಿದೆ. ಪೆಟ್ರೋಲ್, ಡೀಸೆಲ್ನಿಂದ ಹಿಡಿದು ತರಕಾರಿ ಮತ್ತು ಸಾಂಬರ್ ತನಕ ಬೆಲೆ ಏರಿಕೆ ಆಗಿದೆ. ಅಡುಗೆ ಮನೆಯಲ್ಲಿ ಒಂದು ಟೊಮ್ಯಾಟೊ ಜಾಸ್ತಿ ಕಟ್ ಮಾಡೋಕು ಆಲೋಚನೆ ಮಾಡ್ಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಕ್ಲಿಷ್ಟ ಸಂದರ್ಭದಲ್ಲೇ ಆಟೋ ಚಾಲಕರು ಶಾಕ್ ನೀಡಿದ್ದಾರೆ. ಇಂದಿನಿಂದ ಬೆಂಗಳೂರಿನಾದ್ಯಂತ ಆಟೋ ಪ್ರಯಾಣ ದರ ಏರಿಕೆ ಆಗಿದೆ. ಇದು ಆಟೋವನ್ನೇ ನಂಬಿ ಓಡಾಡುತ್ತಿದ್ದವರಿಗೆ ಹೊರೆಯಾಗಿದೆ.

ದರ ಏರಿಕೆ ಶಾಕ್
ಈ ಹಿಂದೆ ಆಟೋದಲ್ಲಿ ಮಿನಿಮಮ್ ಚಾರ್ಚ್ 25 ರೂಪಾಯಿ ಇತ್ತು. ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5 ರೂಪಾಯಿ ಸೇರ್ಪಡೆಯಾಗಿದ್ದು, ಇಂದಿನಿಂದ ಮಿನಿಮಮ್ ಚಾರ್ಜ್ 30ಕ್ಕೆ ಏರಿಕೆಯಾಗಿದೆ. ಜೊತೆಗೆ ಪ್ರತಿ ಕಿಲೋ ಮೀಟರ್ಗೆ ಈ ಹಿಂದೆ 13 ರೂಪಾಯಿ ದರ ಇತ್ತು, ಈಗ ಅದನ್ನು 15 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಮೊದಲು ಐದು ನಿಮಿಷ ಕಾಯುವಿಕೆ ಫ್ರೀ ಇದ್ದು, ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂಪಾಯಿ ಚಾರ್ಜ್ ಮಾಡಲು ಅವಕಾಶ ಕೊಡಲಾಗಿದೆ. ಅಲ್ದೆ, ಉಚಿತವಾಗಿ 20 ಕೆಜಿ ವರೆಗೆ ಲಗೇಜ್ ಸಾಗಣೆ ಮಾಡಬಹುದು. ಆದ್ರೆ, 21ರಿಂದ 50ಕೆಜಿ ತೂಕದ ಲಗೇಜ್ ಇದ್ರೆ 5 ರೂಪಾಯಿ ಕೊಡಬೇಕಾಗಿದೆ. ಹಾಗೆ ರಾತ್ರಿ ಈ ಹಿಂದಿನಂತೆ ಮೀಟರ್ ಮೇಲೆ ಅರ್ಧದಷ್ಟು ಹೆಚ್ಚುವರಿ ದರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

8 ವರ್ಷಗಳ ಬಳಿಕ ಆಟೋ ಪ್ರಯಾಣ ದರ ಏರಿಕೆ
2013 ರಲ್ಲಿ ಈ ಹಿಂದೆ ಆಟೋ ದರ ಏರಿಕೆ ಮಾಡಲಾಗಿತ್ತು. ಆದಾದ ಬಳಿಕ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದ್ರು ಆಟೋ‌ದರ ಏರಿಕೆಗೆ ಮನಸ್ಸು ಮಾಡಿರಲಿಲ್ಲ. ಆದ್ರೀಗ, 8 ವರ್ಷಗಳ ಬಳಿಕ ಆಟೋ ಚಾಲಕರು ಮತ್ತು ಮಾಲೀಕರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿ, ಆಟೋ ಪ್ರಯಾಣ ದರ ಏರಿಕೆಗೆ ಅಸ್ತು ಎಂದಿದೆ. ಇದ್ರಿಂದ ಆಟೋ ಚಾಲಕರು ಖುಷಿಯಾಗಿದ್ದು, ಇವತ್ತಿನಿಂದ ಫುಲ್ ಜೋಷ್ನಲ್ಲಿ ರೋಡಿಗಿಳೀತಿದ್ದಾರೆ.

ಇದನ್ನೂ ಓದಿ: ಕಟೀಲ್​ರನ್ನು ಭಯೋತ್ಪಾದಕ ಎನ್ನುವ ಮೋಸಗಾರ ಸಿದ್ದರಾಮಯ್ಯ ಜಮೀರ್ ಅಹ್ಮದ್​​ನಂಥವರನ್ನು ಬೆಳೆಸುತ್ತಾರೆ: ಕೆ ಎಸ್ ಈಶ್ವರಪ್ಪ

TV9 Kannada


Leave a Reply

Your email address will not be published. Required fields are marked *